ETV Bharat / sports

ಬುಮ್ರಾ ಸಾಧನೆ ಮರೆತುಬಿಟ್ರಾ? ಒಂದು ಸರಣಿಯ ವೈಫಲ್ಯಕ್ಕೆ ಇಷ್ಟೊಂದು ಟೀಕೆನಾ?: ಶಮಿ - ಬುಮ್ರಾರನ್ನು ಟೀಕಿಸಿದವರ ವಿರುದ್ಧ ಶಮಿ ಆಕ್ರೋಶ

ಕಿವೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್ ಪಡೆಯುವುದರಲ್ಲಿ ವಿಫಲರಾದ ಬುಮ್ರಾ ವೈಫಲ್ಯತೆಯ ಬಗ್ಗೆ ಟೀಕೆ ಮಾಡಿದವರ ವಿರುದ್ಧ ಮೊಹಮ್ಮದ್​ ಶಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Shami slams Bumrah's critics
ಬುಮ್ರಾ- ಮೊಹಮ್ಮದ್​ ಶಮಿ
author img

By

Published : Feb 15, 2020, 5:38 PM IST

ಹ್ಯಾಮಿಲ್ಟನ್​: ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ ವಿಕೆಟ್​ ಪಡೆಯುವಲ್ಲಿ ವಿಫಲರಾಗಿದ್ದಕ್ಕೆ ವಿಶ್ವದಾದ್ಯಂತ ಹಲವಾರು ಮಾಜಿ ಕ್ರಿಕೆಟಿಗರು ಟೀಕಿಸಿದ್ದಕ್ಕೆ ತಂಡದ ಸಹ ಆಟಗಾರ​ ಮೊಹಮ್ಮದ್​ ಶಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ 3 ಪಂದ್ಯಗಳಲ್ಲಿ ಏಕದಿನ ಸರಣಿಯಲ್ಲಿ ಬುಮ್ರಾ 30 ಓವರ್ ಬೌಲಿಂಗ್​ ಮಾಡಿ 167 ರನ್​ ಬಿಟ್ಟುಕೊಟ್ಟರಲ್ಲದೆ, ಒಂದು ವಿಕೆಟ್​ ಕೂಡ ಪಡೆದಿರಲಿಲ್ಲ. ಇದಕ್ಕಾಗಿ ಬುಮ್ರಾ ಬೌಲಿಂಗ್​ ಪರಾಕ್ರಮ ಮುಗಿಯಿತಾ? ಎಂಬಂತೆಲ್ಲಾ ಟೀಕೆಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ನ್ಯೂಜಿಲ್ಯಾಂಡ್​-11​ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದ ನಂತರ ಮಾತನಾಡಿರುವ ಮೊಹಮದ್​ ಶಮಿ ತನ್ನ ಸ್ನೇಹಿತ ಬುಮ್ರಾರ ಬೌಲಿಂಗ್​ ಪ್ರದರ್ಶನದ ಬಗ್ಗೆ ಹಗುರವಾಗಿ ಮಾತನಾಡಿದವರ ವಿರುದ್ಧ ಕಿಡಿ ಕಾರಿದ್ದಾರೆ.

"ಒಂದೆರಡು ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಮಾತ್ರಕ್ಕೆ ಹಲವಾರು ಪಂದ್ಯಗಳನ್ನು ತನ್ನ ಬೌಲಿಂಗ್​ನಿಂದಲೇ ಗೆಲ್ಲಿಸಿದ ಬುಮ್ರಾರ ಸಾಧನೆಯನ್ನು ಜನರು ಹೇಗೆ ಮರೆಯುತ್ತಾರೆ?" ಎಂದು ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.

"ಬುಮ್ರಾ ವೈಫಲ್ಯಕ್ಕೆ ಇಷ್ಟೊಂದು ಸುದೀರ್ಘವಾಗಿ ಚರ್ಚೆ ಮಾಡುತ್ತಿರುವುದೇಕೆ? ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಅದು ಕೇವಲ 2-3 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರದಿದ್ದಕ್ಕೆ ಇಂತಹ ಚರ್ಚೆ?, ನೀವು ಪಂದ್ಯಗಳನ್ನು ಗೆಲ್ಲಿಸಿರುವ ಅವರ ತಾಕತ್ತನ್ನು ಅಷ್ಟು ಸುಲಭವಾಗಿ ಮರೆಯುವಂತಿಲ್ಲ" ಎಂದು ಶಮಿ 2ನೇ ದಿನದ ಅಭ್ಯಾಸದ ಪಂದ್ಯದ ನಂತರ ತಿಳಿಸಿದ್ದಾರೆ.

ಭಾರತ ತಂಡಕ್ಕೋಸ್ಕರ ಬುಮ್ರಾ ಏನೆಲ್ಲಾ ಮಾಡಿದ್ದಾರೆ, ಅದನ್ನೆಲ್ಲಾ ನೀವು ಹೇಗೆ ಮರೆಯೋಕೆ ಸಾಧ್ಯ ಅಥವಾ ಹೇಗೆ ಕಡೆಗಣಿಸುತ್ತೀರಾ?, ನೀವು ಧನಾತ್ಮಕವಾಗಿ ಚಿಂತನೆ ಮಾಡಿದರೆ, ಅದು ಆಟಗಾರನಿಗೂ ಒಳ್ಳೆಯದು ಹಾಗೂ ಆತನ ಆತ್ಮವಿಶ್ವಾಸಕ್ಕೂ ಉತ್ತಮ ಎಂದು ಶಮಿ ತನ್ನ ಸಹಬೌಲರ್​​ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಹ್ಯಾಮಿಲ್ಟನ್​ನಲ್ಲಿ ನ್ಯೂಜಿಲ್ಯಾಂಡ್​ ಇಲೆವೆನ್​ ವಿರುದ್ಧ ನಡೆಯುತ್ತಿರುವ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಬುಮ್ರಾ 18 ರನ್​ 2 ವಿಕೆಟ್​ ಪಡೆದರೆ, ಶಮಿ 17 ರನ್​ ನೀಡಿ 3 ವಿಕೆಟ್​ ಪಡೆದಿದ್ದಾರೆ. ಯುವ ವೇಗಿ ಸೈನಿ ಹಾಗೂ ಉಮೇಶ್​ ಯಾದವ್​ ಸಹಾ ತಲಾ ವಿಕೆಟ್​ ಪಡೆದು ಮಿಂಚಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.