ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಟೀಂ ಇಂಡಿಯಾ ಕ್ರಿಕೆಟರ್ಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದು, 2011 ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸುರೇಶ್ ರೈನಾ ಅವರ ಸೊಗಸಾದ ಕವರ್ ಡ್ರೈವ್ ಅನ್ನು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.
ನಿವೃತ್ತಿ ಎಂಬ ಪದವನ್ನು ಬಳಸಲು ನಾನು ಬಯಸುವುದಿಲ್ಲ ಏಕೆಂದರೆ ನೀವು ತುಂಬಾ ಚಿಕ್ಕವರು ಮತ್ತು ಉತ್ಸಾಹಿ ಆಟಗಾರರಾಗಿದ್ದೀರಾ ಎಂದು ರೈನಾಗೆ ಪ್ರಧಾನಿ ಮೋದಿ ಎರಡು ಪುಟಗಳ ಪತ್ರ ಬರೆದಿದ್ದಾರೆ. "ನಿಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ, ನೀವು ಕೆಲವೊಮ್ಮೆ ಗಾಯಗಳು ಸೇರಿದಂತೆ ಹಿನ್ನಡೆಗಳನ್ನು ಎದುರಿಸಿದ್ದೀರಿ, ಆದರೆ ಪ್ರತಿ ಬಾರಿ ನೀವು ಆ ಸವಾಲುಗಳನ್ನು ಜಯಿಸಿದ ನಿಮ್ಮ ಸ್ಥಿರತೆಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.
-
When we play, we give our blood & sweat for the nation. No better appreciation than being loved by the people of this country and even more by the country’s PM. Thank you @narendramodi ji for your words of appreciation & best wishes. I accept them with gratitude. Jai Hind!🇮🇳 pic.twitter.com/l0DIeQSFh5
— Suresh Raina🇮🇳 (@ImRaina) August 21, 2020 " class="align-text-top noRightClick twitterSection" data="
">When we play, we give our blood & sweat for the nation. No better appreciation than being loved by the people of this country and even more by the country’s PM. Thank you @narendramodi ji for your words of appreciation & best wishes. I accept them with gratitude. Jai Hind!🇮🇳 pic.twitter.com/l0DIeQSFh5
— Suresh Raina🇮🇳 (@ImRaina) August 21, 2020When we play, we give our blood & sweat for the nation. No better appreciation than being loved by the people of this country and even more by the country’s PM. Thank you @narendramodi ji for your words of appreciation & best wishes. I accept them with gratitude. Jai Hind!🇮🇳 pic.twitter.com/l0DIeQSFh5
— Suresh Raina🇮🇳 (@ImRaina) August 21, 2020
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರೈನಾ ನಾವು ಆಡುವಾಗ, ರಾಷ್ಟ್ರಕ್ಕಾಗಿ ನಮ್ಮ ರಕ್ತ ಮತ್ತು ಬೆವರನ್ನು ಹರಿಸುತ್ತೇವೆ. ಈ ದೇಶದ ಜನರಿಂದ ಮತ್ತು ದೇಶದ ಪ್ರಧಾನ ಮಂತ್ರಿಯಿಂದ ಪ್ರೀತಿಸಲ್ಪಡುವುದಕ್ಕಿಂತ ಉತ್ತಮವಾದ ಮೆಚ್ಚುಗೆಯಿಲ್ಲ. ನಿಮ್ಮ ಮೆಚ್ಚುಗೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ಎಂದು ಟ್ವೀಟ್ ಮಾಡಿದ್ದಾರೆ.
2011 ರ ಮೊಟೇರಾದಲ್ಲಿ ನಡೆದ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭರ್ಜರಿ ರನ್ ಚೇಸ್ ಮಾಡುವಾಗ ರೈನಾ ಅವರ ಅಜೇಯ 34 ರನ್ಗಳ ಕೊಡುಗೆಯನ್ನು ಮೋದಿ ನೆನಪಿಸಿಕೊಂಡಿದ್ದಾರೆ.
2011 ರ ವಿಶ್ವಕಪ್‌ನಲ್ಲಿ ವಿಶೇಷವಾಗಿ ನಂತರದ ಪಂದ್ಯಗಳಲ್ಲಿ ಭಾರತವು ನಿಮ್ಮ ಸ್ಪೂರ್ತಿದಾಯಕ ಪಾತ್ರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಆಡಿದ ನಿಮ್ಮ ಆ ಇನಿಂಗ್ಸ್ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದಿದ್ದಾರೆ. ಅಲ್ಲದೇ ರೈನಾ ಅವರ ಫಿಲ್ಡಿಂಗ್ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಚ್ಛ ಭಾರತ ಅಭಿಯಾನ ಹಾಗೂ ಮಹಿಳಾ ಸಬಲೀಕರಣದಂತಹ ಸಾಮಾಜಿಕ ಕಾರ್ಯಗಳಲ್ಲಿ ರೈನಾ ಪಾಲ್ಗೊಂಡಿದ್ದ ಬಗ್ಗೆಯೂ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.