ETV Bharat / sports

'ನೀವು CSK ತಂಡದ ಹೃದಯಬಡಿತ': ರೈನಾಗೆ ವಾಟ್ಸನ್​ ಹೃದಯಸ್ಪರ್ಶಿ ಸಂದೇಶ - ಚೆನ್ನೈ ಸೂಪರ್​ ಕಿಂಗ್ಸ್​

ಐಪಿಎಲ್​ನಲ್ಲಿ 2ನೇ ಅತಿ ಹೆಚ್ಚು ರನ್​ ಸರದಾರ ಸುರೇಶ್ ರೈನಾ ವೈಯಕ್ತಿಕ ಕಾರಣದಿಂದ ತವರಿಗೆ ಮರಳುತ್ತಿದ್ದಾರೆ ಎಂದು ಸಿಎಸ್​ಕೆ ಸಿಇಒ ವಿಶ್ವನಾಥನ್​ ಶನಿವಾರ ತಿಳಿಸಿದ್ದರು.

ಐಪಿಎಲ್​ 2020
ಸುರೇಶ್​ ರೈನಾ
author img

By

Published : Aug 30, 2020, 4:00 PM IST

ದುಬೈ: 13ನೇ ಐಪಿಎಲ್​ಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಆಟಗಾರರಿಗೆ ತರಬೇತಿ ಶಿಬಿರ ಆರಂಭಿಸುವ ಮುನ್ನವೇ ಸಿಎಸ್​ಕೆ ಆಧಾರಸ್ಥಂಭವಾಗಿದ್ದ ಸುರೇಶ್​ ರೈನಾ ವೈಯಕ್ತಿಕ ಕಾರಣಗಳಿಂದ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ.

'ಮಿಸ್ಟರ್​ ಐಪಿಎಲ್'​ ಖ್ಯಾತಿಯ ರೈನಾ ತಂಡದಿಂದ ಹೊರಬರುತ್ತಿದ್ದಂತೆ ಸಿಎಸ್​ಕೆ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಶೇನ್​ ವಾಟ್ಸನ್​ ಭಾವುಕ ಸಂದೇಶ ರವಾನಿಸಿದ್ದಾರೆ.

" ನಾನು ಬೆಳಿಗ್ಗೆ ಏಳುತ್ತಿದ್ದಂತೆ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಗಾಗಿ ಭಾರತಕ್ಕೆ ಹಿಂತಿರುಗುತ್ತಿದ್ದಾರೆ ಎಂಬ ಕೆಟ್ಟ ಸುದ್ದಿಯನ್ನು ಕೇಳಿದ್ದೇನೆ. ಗೆಳೆಯ, ನೀವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರೆಂದು ನಾನು ಭಾವಿಸುತ್ತೇನೆ ”ಎಂದು ವ್ಯಾಟ್ಸನ್ ಬರೆದುಕೊಂಡಿದ್ದಾರೆ.

"ನೀವು ಸಿಎಸ್​ಕೆ ತಂಡವನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೀರಿ. ಆರಂಭದಿಂದಲೂ ತಂಡದ ಜೊತೆಯಾಗಿರುವ ನೀವು ತಂಡದ ಹೃದಯ ಬಡಿತ. ನೀವು ಹೆಮ್ಮೆಪಡುವ ಎಲ್ಲ ಕೆಲಸವನ್ನು ನಾವು ಮಾಡಲಿದ್ದೇವೆ" ಎಂದು ಅವರು ಇನ್ಸ್ಟಾಗ್ರಾಮ್​ ವಿಡಿಯೋದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.