ETV Bharat / sports

8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಆಸೀಸ್​ ವಿರುದ್ಧ ಶತಕ ಸಿಡಿಸಿದ ಪಾಕ್ ಬೌಲರ್​! - ಆಸೀಸ್​ ವಿರುದ್ಧ ಟೆಸ್ಟ್​ ಶತಕ ಸಿಡಿಸಿದ ಯಾಸಿರ್​ ಶಾ

8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ಬೌಲರ್​ ಯಾಸಿರ್​ ಆಕರ್ಷಕ ಶತಕ ದಾಖಲಿಸಿದ್ದಾರೆ. ಆದರೂ ಪಾಕಿಸ್ತಾನ ಫಾಲೋಆನ್​ ತಪ್ಪಿಸಿಕೊಳ್ಳಲಾಗಲಿಲ್ಲ.

Yasir Shah hits maiden Test hundred
Yasir Shah hits maiden Test hundred
author img

By

Published : Dec 1, 2019, 3:16 PM IST

ಅಡಿಲೇಡ್​: ಪಾಕಿಸ್ತಾನದ ಸ್ಪಿನ್​ ಬೌಲರ್​ ಆಸ್ಟ್ರೇಲಿಯಾದ ಪ್ರಚಂಡ ಬೌಲಿಂಗ್​ ಎದುರೂ ಅದ್ಭುತ ಬ್ಯಾಟಿಂಗ್​ ನಡೆಸಿದರಲ್ಲದೆ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.

ಸರಣಿಯ 2ನೇ ಟೆಸ್ಟ್​ನಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ಡೇವಿಡ್​ ವಾರ್ನರ್​ ಅವರ ತ್ರಿಶತಕದ ನೆರವಿನಿಂದ 583 ರನ್​ಗಳಿಸಿತು. ಈ ಮೊತ್ತವನ್ನು ಹಿಂಬಾಲಿಸಿದ ಪಾಕಿಸ್ತಾನ ಆಸೀಸ್​ ಬಿಗುದಾಳಿಗೆ ಸಿಲುಕಿ ಒಂದು ಹಂತದಲ್ಲಿ 89 ರನ್ನಿಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು.

ಈ ಹಂತದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶಾ ಬಾಬರ್​ ಅಜಂ (97) ಜೊತೆಗೂಡಿ 105 ರನ್​ ಸೇರಿಸಿದರು. 132 ಎಸೆತಗಳನ್ನೆದುರಿಸಿದ ಬಾಬರ್​ 11 ಬೌಂಡರಿ ಸಹಿತ 97 ರನ್​ಗಳಿಸಿದ್ದ ವೇಳೆ ಸ್ಟಾರ್ಕ್​ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್​ ನೀಡಿ ಔಟಾದರು. ನಂತರ ಬಂದ ಶಾಹೀನ್​ ಆಫ್ರಿದಿ ಮರು ಎಸೆತದಲ್ಲೇ ಎಲ್​ಬಿ ಬಲೆಗೆ ಬಿದ್ದರು.

ಈ ಹಂತದಲ್ಲಿ ಮೊಹಮ್ಮದ್ ಅಬ್ಬಾಸ್​ ಜೊತೆ ಸೇರಿ ಯಾಸಿರ್​ 10 ವಿಕೆಟ್​ ಜೊತೆಯಾಟದಲ್ಲಿ 77 ರನ್​ ಸೇರಿಸಿದರಲ್ಲದೆ ತಮ್ಮ ಚೊಚ್ಚಲ ಟೆಸ್ಟ್​​ ಶತಕ ಸಿಡಿಸಿ ಸಂಭ್ರಮಿಸಿದರು. 213 ಎಸೆತಗಳನ್ನೆದುರಿಸಿದ ಯಾಸಿರ್​ 113 ರನ್​ ಗಳಿಸಿ ಕಮ್ಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಅಬ್ಬಾಸ್​ 29 ರನ್​ಗಳಿಸಿದರು.

ಪಾಕಿಸ್ತಾನ 94.4 ಓವರ್​ಗಳಲ್ಲಿ 302 ರನ್​ಗಳಿಗೆ ಆಲೌಟ್ ಆಯಿತು. 287 ರನ್​ಗಳ ಹಿನ್ನಡೆಯೊಂದಿಗೆ​ ಫಾಲೋಆನ್​ಗೆ ಒಳಗಾಗಿರುವ ಪಾಕ್​ ಆರಂಭದಲ್ಲೇ ಇಮಾಮ್​ ಉಲ್​ ಹಕ್​ ವಿಕೆಟ್​ ಕಳೆದುಕೊಂಡು ಹಿನ್ನಡೆ ಅನುಭವಿಸಿದೆ. ಯಾಸಿರ್​ ಶಾ ಆಸ್ಟ್ರೇಲಿಯಾ ವಿರುದ್ಧ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿದು ಶತಕ ಗಳಿಸಿದ 5ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.