ಅಹಮದಾಬಾದ್ (ಗುಜರಾತ್): ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿನ ದೀಪಗಳು ಗೋಚರತೆಯ ಮೇಲೆ ಪರಿಣಾಮ ಬೀರಬಹುದೆಂದು ವಿರಾಟ್ ಕೊಹ್ಲಿ ಆತಂಕ ವ್ಯಕ್ತಪಡಿಸಿದ್ದು, ಆಟಗಾರರು ಶೀಘ್ರವಾಗಿ ಹೊಂದಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ನವೀಕರಿಸಿದ ಹಾಗೂ ವಿಶ್ವದ ಅತಿದೊಡ್ಡ ಕ್ರೀಡಾಂಗಣ, ಸಾಂಪ್ರದಾಯಿಕ ಫ್ಲಡ್‌ಲೈಟ್ ಟವರ್‌ಗಳನ್ನು ಹೊಂದಿಲ್ಲ. ಅದರ ಛಾವಣಿಯ ಸುತ್ತಲೂ ಎಲ್ಇಡಿ ದೀಪಗಳಿದ್ದು, ಇದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ 'ರಿಂಗ್ ಆಫ್ ಫೈರ್' ಹೋಲುತ್ತದೆ. ಇದು ಫೀಲ್ಡಿಂಗ್ ತಂಡಕ್ಕೆ ಸವಾಲನ್ನು ಒಡ್ಡುವ ಸಾಧ್ಯತೆಯಿದೆ.
"ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ರೋಮಾಂಚಕಾರಿ ವಾತಾವರಣವಿರಲಿದೆ. ಆಸನಗಳ ಬಣ್ಣಕ್ಕಿಂತ ದೀಪಗಳ ಬಗ್ಗೆ ನಾನು ಸ್ವಲ್ಪ ಹೆಚ್ಚು ಚಿಂತೆ ಮಾಡುತ್ತೇನೆ" ಎಂದು ಕೊಹ್ಲಿ ಹೇಳಿದರು.
ಸ್ಟ್ಯಾಂಡ್‌ನಲ್ಲಿರುವ ಕೇಸರಿ ಬಣ್ಣದ ಆಸನಗಳು ಆಟಗಾರರಿಗೆ ಗೋಚರತೆಯ ಸವಾಲನ್ನು ಒಡ್ಡುತ್ತವೆ ಎಂದು ನಾನು ಭಾವಿಸುವುದಿಲ್ಲ ಎಂದು ಕೊಹ್ಲಿ ಪುನರುಚ್ಚರಿಸಿದರು.