ಅಹಮದಾಬಾದ್: ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಗುಜರಾತ್ನಲ್ಲಿ ಸಿದ್ಧವಾಗುತ್ತಿದ್ದು, ಮೊದಲ ಪಂದ್ಯದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.
ಜಗತ್ತಿನ ಅತಿದೊಡ್ಡ ಮೈದಾನವಾಗಲಿರುವ ಮೊಟೇರಾದ ಸರ್ದಾರ್ ಪಟೇಲ್ ಸ್ಟೇಡಿಯಂ ಮುಂದಿನ ವರ್ಷದ ಆರಂಭದಲ್ಲಿ ಉದ್ಘಾಟನೆಯಾಗಲಿದೆ. ಈ ಸಮಾರಂಭವನ್ನು ಇನ್ನಷ್ಟು ವಿಶೇಷವಾಗಿಸಲು ಬಿಸಿಸಿಐ ಸಿದ್ಧವಾಗಿದೆ.
1.10 ಲಕ್ಷ ಕ್ರಿಕೆಟ್ ಅಭಿಮಾನಿಗಳು ಕುಳಿತು ಪಂದ್ಯ ವೀಕ್ಷಿಸಬಹುದಾದ ಮೊಟೇರಾ ಮೈದಾನದಲ್ಲಿ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇವೆಲೆನ್ ನಡುವೆ ಮುಂದಿನ ಮಾರ್ಚ್ನಲ್ಲಿ ಪಂದ್ಯ ಏರ್ಪಡಿಸಲು ಬಿಸಿಸಿಐ ಈಗಾಗಲೇ ಐಸಿಸಿಗೆ ಮನವಿ ಮಾಡಿದೆ.
ಬಿಸಿಸಿಐ ಮನವಿ ಬಗ್ಗೆ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದು, ಮನವಿ ಸಲ್ಲಿಸಲಾಗಿರುವುದು ನಿಜ. ಆದರೆ ಪಂದ್ಯದ ಆಯೋಜನೆ ಐಸಿಸಿಯ ತೀರ್ಮಾನ ಮೇಲೆ ನಿಂತಿದೆ ಎಂದಿದ್ದಾರೆ.
ಸುಮಾರು 700 ಕೋಟಿ ವೆಚ್ಚದಲ್ಲಿ ಮೊಟೇರಾ ಕ್ರೀಡಾಂಗಣವನ್ನು ನವೀಕರಣ ಮಾಡಲಾಗುತ್ತಿದ್ದು, 63 ಎಕರೆ ವಿಸ್ತೀರ್ಣದಲ್ಲಿರುವ ಈ ಕ್ರೀಡಾಂಗಣದಲ್ಲಿ 70 ಕಾರ್ಪೋರೇಟ್ ಬಾಕ್ಸ್ಗಳಿರಲಿವೆ. ನಾಲ್ಕು ಡ್ರೆಸ್ಸಿಂಗ್ ರೂಮ್, ಒಂದು ಕ್ಲಬ್ ಹೌಸ್ ಹಾಗೂ ಒಂದು ಒಲಿಂಪಿಕ್ ಸೈಜ್ ಸ್ವಿಮ್ಮಿಂಗ್ ಪೂಲ್ ಇರಲಿದೆ.