ನವದೆಹಲಿ : 1992ರ ವಿಶ್ವಕಪ್ ಲೀಗ್ ಮ್ಯಾಚ್ ನಡೆದಿತ್ತು. ಇವತ್ತಿಗೆ 27 ವರ್ಷಗಳ ಹಿಂದೆ ಅಂದ್ರೇ ಮಾರ್ಚ್ 4ರಂದು ಪಾಕ್ ವಿರುದ್ಧ ಭಾರತ ಪಂದ್ಯ ನಡೆದಿತ್ತು. ಅದೇ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಕಿರಣ ಮೋರೆ ಮುಂದೆ ಪಾಕ್ ಬ್ಯಾಟ್ಸ್‌ಮೆನ್ ಜಾವೇದ್ ಮಿಯಾಂದಾದ್ ಕೋತಿ ರೀತಿ ಕುಣಿದು ಬಿಡೋದೇ..!
- " class="align-text-top noRightClick twitterSection" data="">
27 ವರ್ಷದ ಹಿಂದೆಭಾರತದ ಕಿರಣ್ ಮೋರೆ ಮತ್ತು ಪಾಕ್‌ನ ಜಾವೇದ್ ಮಿಯಾಂದಾದ್ ಮಧ್ಯೆ ಜಗಳವೇರ್ಪಟ್ಟಿತ್ತು. ಇವತ್ತಿಗೂ ಆ ಘಟನೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಹಾಗೇ ಇದೆ. ಆ ಪಂದ್ಯದಲ್ಲಿ ಜಾವೇದ್ ಕೋತಿಯಂತೆ ಕುಣಿದುಬಿಟ್ಟಿದ್ದರು.
ಮೋರೆ-ಜಾವೇದ್ ಮಧ್ಯೆ ಏನ್ ನಡೀತು?:
ಸಿಡ್ನಿಯಲ್ಲಿ ನಡೆದ ಆ ಪಂದ್ಯದಲ್ಲಿ ವಿಕೆಟ್ ಕೀಪರ್ ಕಿರಣ್ ಮೋರೆ ಪದೇ ಪದೆ ಅಪೀಲ್ ಮಾಡ್ತಾ ಇದ್ದರು. ಇದು ಬ್ಯಾಟ್ಸ್‌ಮೆನ್ ಜಾವೇದ್ ಮಿಯಾಂದಾದಾಗೆ ಸಿಟ್ಟು ತರಿಸಿತ್ತು. ಸಚಿನ್ ಓವರ್‌ನಲ್ಲಿ ಜಾವೇದ್ ಮಿಡ್ ಆಫ್‌ನಲ್ಲಿ ಶಾಟ್ ಹೊಡೆದು ಒಂದು ರನ್ ಕದಿಯುವ ಸರ್ಕಸ್ ಮಾಡಿದ್ದ ಜಾವೇದ್, ಆಗದೇ ವಾಪಸ್ ಸ್ಕ್ರೀಜ್‌ಗೆ ಬಂದಿದ್ದರು. ಆದ್ರೇ, ಎಸೆದ ಬಾಲ್ ಹಿಡಿದ ಮೋರೆ ರನೌಟ್ ಮಾಡಲು ಬೆಲ್ಸ್ ಕೆಡವಿದ್ದರು. ಅಂಪೈರ್ ನಾಟೌಟ್ ಅಂತ ಹೇಳುತ್ತಿದ್ದಂತೆಯೇ, ಜಾವೇದ್ ಕೋತಿಯಂತೆ ಹಾರಾಡಿದ್ದರು. ಆದ್ರೇ, ಆ ಪಂದ್ಯದಲ್ಲಿ ಭಾರತ 43ರನ್‌ನಿಂದ ಪಾಕ್ ಬಗ್ಗುಬಡಿದಿತ್ತು.
ವರ್ಲ್ಡ್ ಕಪ್‌ನಲ್ಲಿ ಪಾಕ್ ಗೆಲ್ಲಲು ಬಿಟ್ಟಿಲ್ಲ ಭಾರತ :
ವಿಶ್ವಕಪ್ ಟೂರ್ನಿಗಳಲ್ಲಿ ಆರು ಸಾರಿ ಪಾಕ್ ವಿರುದ್ಧ ಸೆಣಿಸಿರುವ ಭಾರತ ದಾಯಾದಿ ಗೆಲ್ಲೋದಕ್ಕೆ ಬಿಟ್ಟಿಲ್ಲ. ಪಂದ್ಯ ಯಾರು ಗೆದ್ದರು- ಸೋತರು ಅನ್ನೋದಕ್ಕಿಂತ ಪ್ರತಿ ಸಾರಿ ನಡೆದ ಮ್ಯಾಚ್‌ಗಳಲ್ಲೂ ಇಂಥ ರೋಚಕ ಸಂಗತಿಗಳು ನಡೆಯುತ್ತಲೇ ಇರುತ್ತವೆ.
ಜೂನ್16ರಂದು ಭಾರತ-ಪಾಕ್ ಹಣಾಹಣಿ :
ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಜೂ. 16ರಂದು ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಪಾಕ್ ಎದುರು ಭಾರತ ಆಡಲಿದೆ. ಮಾಜಿ ಕ್ರಿಕೆಟರ್‌ಗಳಾದ ಸೌರವ್ ಗಂಗೂಲಿ, ಹರ್ಭಜನ್ ಸಿಂಗ್ ಪಾಕ್ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಆಡದೇ ಪಂದ್ಯ ಬಹಿಷ್ಕರಿಸಬೇಕೆಂದು ಆಗ್ರಹಿಸಿದ್ದರು.
ಭಾರತದ ಮನವಿಗೆ ICC ಸಹ ನೀಡಲಿಲ್ಲ ಮನ್ನಣೆ :
ಉಗ್ರವಾದ ಪೋಷಿಸುವ ರಾಷ್ಟ್ರಗಳನ್ನ ಬಹಿಷ್ಕರಿಸುವಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿತ್ತು. ಆದ್ರೇ, ಈ ಮನವಿಯನ್ನ ಐಸಿಸಿ ತಿರಸ್ಕರಿಸಿದೆ. ಈ ರೀತಿಯ ಕ್ರಮಕೈಗೊಳ್ಳಲು ತಮಗೆ ಸಾಧ್ಯವಿಲ್ಲ ಅಂತ ಹೇಳಿದೆ.