ETV Bharat / sports

ಧೋನಿ ಹೊರಗಿಟ್ಟು ಪಂತ್​ಗೆ ಅವಕಾಶ ನೀಡುವಂತೆ ಅಭಿಮಾನಿಗಳ ಆಕ್ರೋಶ - ರಿಷಭ್​ ಪಂತ್​

ಅನುಭವಿ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ 52 ಎಸೆತಗಳನ್ನು ಎದುರಿಸಿ 3 ಬೌಂಡರಿಗಳಿಂದ ಕೇವಲ 28 ರನ್ ಗಳಿಸಿದ್ದರು. ಪಂದ್ಯದ ನಿರ್ಣಾಯಕ ಹಂತದಲ್ಲಿ ಅವರು ವಿಕೆಟ್​ ಒಪ್ಪಿಸಿದ್ದನ್ನು ಸಹಿಸದ ಅಭಿಮಾನಿಗಳು ಧೋನಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

dhoni
author img

By

Published : Jun 22, 2019, 9:16 PM IST

ಸೌತಾಂಪ್ಟನ್‌: ಕ್ರಿಕೆಟ್​ ಶಿಶು ಅಫ್ಘಾನಿಸ್ತಾನದ ವಿರುದ್ಧ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿರುವ ಧೋನಿಯನ್ನು ತಂಡದಿಂದ ಕೈಬಿಟ್ಟು ಯುವ ಆಟಗಾರ ರಿಷಭ್​ ಪಂತ್​ಗೆ ಅವಕಾಶ ನೀಡಿ ಎಂದು ಸಾಮಾಜಿಕ ಜಾಲಾತಾಣಗಳಲ್ಲಿ ಧೋನಿ ವಿರುದ್ಧ ಭಾರತೀಯ ಅಭಿಮಾನಿಗಳು ಕಿಡಿ ಕಾರಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಆಗಿರುವ ಧೋನಿ 52 ಎಸೆತಗಳನ್ನು ಎದುರಿಸಿ 3 ಬೌಂಡರಿಗಳಿಂದ ಕೇವಲ 28 ರನ್ ಗಳಿಸಿದ್ದರು. ಪಂದ್ಯದ ನಿರ್ಣಾಯಕ ಹಂತದಲ್ಲಿ ಅವರು ವಿಕೆಟ್​ ಒಪ್ಪಿಸಿದ್ದು, ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಹೀಗಾಗಿ ಧೋನಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

27ನೇ ಓವರ್​ನಲ್ಲಿ ವಿಜಯ್​ ಶಂಕರ್​ ಔಟಾದ ಬಳಿಕ ಬಂದ ಧೋನಿ 45 ನೇ ಓವರ್​ ತನಕ ಕ್ರೀಸ್​ನಲ್ಲಿದ್ದು ಕೇವಲ 28 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ಇನ್ನಿಂಗ್ಸ್​ನ ಕೊನೆಯ ಓವರ್​ಗಳಲ್ಲಿ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸುವ ಧೋನಿ ತಂಡದ ಮೊತ್ತ ಕಡಿಮೆಯಿದ್ದರೂ ಹೆಚ್ಚು ಬಾಲ್​ಗಳನ್ನು ಡಾಟ್​ ಮಾಡಿದರು. ಹೆಚ್ಚು ಕಡಿಮೆ 20 ಓವರ್​ಗಳ ಆಟವಾಡಿರುವ ಅವರು ಅಲ್ಪಮೊತ್ತಕ್ಕೆ ಔಟಾಗಿರುವುದನ್ನು ಅಭಿಮಾನಿಗಳಿಂದ ಸಹಿಸಲಾಗದೆ ಧೋನಿಯನ್ನು ತೆಗಳುತ್ತಿದ್ದಾರೆ.

ಈ ಪಂದ್ಯದಲ್ಲಿ ಕೊಹ್ಲಿ ಹಾಗೂ ಕೇದಾರ್​ ಜಾಧವ್​ ಮಾತ್ರ ಅರ್ಧಶತಕ ಸಿಡಸಿದರು. ಇವರನ್ನು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್ ಕೂಡ​ ಅಫ್ಘಾನ್ ಬೌಲರ್​ಗಳ​ ವಿರುದ್ಧ ರನ್ ​ಗಳಿಸಲು ಸಫಲರಾಗಲಿಲ್ಲ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.