ಮುಂಬೈ: ಭಾರತ ಕ್ರಿಕೆಟ್ ಕಂಡಂತಹ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಸುನೀಲ್ ಗವಾಸ್ಕರ್ ಈ ಬಾರಿಯ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ 5ನೇ ಟ್ರೋಫಿ ಎತ್ತಿ ಹಿಡಿಯಲು ಹೆಚ್ಚು ಶ್ರಮ ಬೇಕಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸ್ಫೋಟಕ ಬ್ಯಾಟ್ಸ್ಮನ್ಗಳು, ಆಲ್ರೌಂಡರ್ಗಳ ದಂಡನ್ನೇ ಹೊಂದಿರುವ ಮುಂಬೈ ಇಂಡಿಯನ್ಸ್ ವಿಶ್ವಶ್ರೇಷ್ಠ ವೇಗದ ಬೌಲರ್ಗಳನ್ನು ಪಡೆದಿದ್ದು, 2020ರ ಐಪಿಎಲ್ನಲ್ಲಿ ಬಲಿಷ್ಠ ತಂಡವೆಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ 4 ಪ್ರಶಸ್ತಿಗಳನ್ನು ಗೆದ್ದಿದೆ. ಆ ತಂಡದಕ್ಕೆ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಹೇಗೆ ಎದುರಿಸಬೇಕೆಂದು ತಿಳಿದಿದೆ. ಈ ಕಾರಣದಿಂದ ನಾನು ಮುಂಬೈ ತಂಡ ಮತ್ತೊಂದು ಚಾಂಪಿಯನ್ಶಿಪ್ ಗೆಲ್ಲಬಹುದೆಂದು ಭಾವಿಸುತ್ತಿದ್ದೇನೆ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ನ ಅತ್ಯಂತ ದೊಡ್ಡ ಬಲವೆಂದರೆ ಅನುಭವ. ಎರಡನೆಯದಾಗಿ ಸಾಮರ್ಥ್ಯವುಳ್ಳ ತಂಡವನ್ನು ಹೊಂದಿದೆ. ಜೊತೆಗೆ 2019ರ ಹರಾಜಿನಲ್ಲಿ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ತಲೆ ಉಪಯೋಗಿಸಿದ್ದಾರೆ. ತಂಡಕ್ಕೆ ಬೇಕಾದ ಎಲ್ಲವನ್ನು ಅವರು ಪಡೆದುಕೊಂಡಿದ್ದಾರೆ.ಈ ಸೀಸನ್ನಲ್ಲಿ ಅತ್ಯುತ್ತಮ ತಂಡ ಎನಿಸಿಕೊಳ್ಳುಲು ಇರಬೇಕಾದ ಅರ್ಹತೆಯನ್ನು ಅವರು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಮುಂಬೈ ತಂಡದ ದೌರ್ಬಲ್ಯಗಳನ್ನು ಗುರುತಿಸಿರುವ ಅವರು ತಂಡದಲ್ಲಿ ಅನುಭವವುಳ್ಳ ಸ್ಪಿನ್ ಬೌಲರ್ಗಳ ಕೊರತೆ ಕಾಣಲಿದೆ. ಜೊತೆಗೆ 4 ಮತ್ತು 5 ನೇ ನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬುದು ಒಂದು ದೊಡ್ಡ ಪ್ರಶ್ನೆಯಾಗಲಿದೆ. ನನ್ನ ಪ್ರಕಾರ ನಾಲ್ಕನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅಥವಾ ಹಾರ್ದಿಕ್ ಪಾಂಡ್ಯರನ್ನು ಆಡಿಸಬಹುದು ಏಕೆಂದರೆ 5ನೇ ಕ್ರಮಾಂದಲ್ಲಿ ಪೊಲಾರ್ಡ್ ಉತ್ತಮ ಆಯ್ಕೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಲೆಜೆಂಡರಿ ಕ್ರಿಕೆಟಿಗ ತಮ್ಮ ನೆಚ್ಚಿನ ಮುಂಬೈ ಇಂಡಿಯನ್ಸ್ ತಂಡವನ್ನು ಹೆಸರಿಸಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನಥನ್ ಕೌಲ್ಟರ್ ನೈಲ್,ರಾಹುಲ್ ಚಹಾರ್,ಟ್ರೆಂಟ್ ಬೌಲ್ಟ್/ಮಿಚೆಲ್ ಮೆಕ್ಲೆನಘಾನ್, ಜಸ್ಪ್ರೀತ್ ಬುಮ್ರಾ