ETV Bharat / sports

ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿಗೆದ್ದು ಭಾರತದ ಕೀರ್ತಿ ಹೆಚ್ಚಿಸಿದ ಮಂಜುರಾಣಿ.. - Manju Rani breaking news

ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಇದೇ ಮೊದಲ ಬಾರಿ ವಿಶ್ವ ಬಾಕ್ಸಿಂಗ್​ ಚಾಂಪಿಯನ್‌ಶಿಪ್​ನಲ್ಲಿ ಭಾಗವಹಿಸಿದ್ದ ಮಂಜುರಾಣಿ 18 ವರ್ಷಗಳ ಬಳಿಕ ಪದಾರ್ಪಣೆ ಟೂರ್ನಿಯಲ್ಲೇ ಫೈನಲ್​ ತಲುಪಿದ ಬಾಕ್ಸರ್​ ಎನಿಸಿಕೊಂಡಿದ್ದರು. ಇವರು 48 ಕೆಜಿ ವಿಭಾಗದಲ್ಲಿ ಫೈನಲ್​ ತಲುಪಿ ಭಾರತಕ್ಕೆ ಚಿನ್ನದ ಪದಕದ ಆಸೆ ಮೂಡಿಸಿದ್ದರು.

Women's World Boxing Championships
author img

By

Published : Oct 13, 2019, 4:41 PM IST

ಉಲಾನ್​-ಉಡೆ (ರಷ್ಯಾ): 2019ರ ಮಹಿಳಾ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ತಲುಪಿದ್ದ ಏಕೈಕ ಭಾರತೀಯ ಬಾಕ್ಸರ್​ ಮಂಜುರಾಣಿ ಫೈನಲ್​ನಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಇದೇ ಮೊದಲ ಬಾರಿ ವಿಶ್ವ ಬಾಕ್ಸಿಂಗ್​ ಚಾಂಪಿಯನ್ ಶಿಪ್​ನಲ್ಲಿ ಭಾಗವಹಿಸಿದ್ದ ಮಂಜು ರಾಣಿ 18 ವರ್ಷಗಳ ಬಳಿಕ ಪದಾರ್ಪಣೆ ಟೂರ್ನಿಯಲ್ಲೇ ಫೈನಲ್​ ತಲುಪಿದ ಬಾಕ್ಸರ್​ ಎನಿಸಿಕೊಂಡಿದ್ದರು. ಇವರು 48 ಕೆಜಿ ವಿಭಾಗದಲ್ಲಿ ಫೈನಲ್​ ತಲುಪಿ ಭಾರತಕ್ಕೆ ಚಿನ್ನದ ಪದಕ ಆಸೆ ಮೂಡಿಸಿದ್ದರು.

ಆದರೆ, ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ 2ನೇ ಶ್ರೇಯಾಂಕದ ರಷ್ಯಾದ ಎಕಟೆರಿನಾ ಪಾಲ್ಚೇವಾ ವಿರುದ್ಧ 4-1ರ ಅಂತರದಲ್ಲಿ ಸೋಲು ಕಂಡರು. ಆದರೂ ಮಹಿಳೆಯರ ವಿಭಾಗದಲ್ಲಿ ಬೆಳ್ಳಿಗೆದ್ದ ಏಕೈಕ ಬಾಕ್ಸರ್​ ಎಂಬ ಕೀರ್ತಿಗೆ ಪಾತ್ರರಾದರು.

ಇನ್ನು, ಶನಿವಾರ ನಡೆದಿದ್ದ ಸೆಮಿಫೈನಲ್​ ಪಂದ್ಯಗಳಲ್ಲಿ 6 ಬಾರಿ ವಿಶ್ವಚಾಂಪಿಯನ್​ ಆಗಿದ್ದ ಮೇರಿ ಕೋಮ್(51ಕೆಜಿ) ಸೇರಿದಂತೆ ಜಮುನಾ ಬೋರೊ(54), ಲೋವ್ಲಿನಾ(69) ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.ಆದರೆ, ಮಂಜುರಾಣಿ ಸೆಮಿಫೈನಲ್​ ಪಂದ್ಯದಲ್ಲಿ ಥಾಯ್ಲೆಂಡ್​ನ ಚುತಮಾತ್ ರಾಕ್ಸತ್ ವಿರುದ್ಧ 4-1 ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದ್ದರು.

  • Medal Ceremony!⚡️

    Desh🇮🇳 ki Beti, #ManjuRani etched her name in the history book with a gutsy display of fine tactics and belief. Manju, you are the true Champion for us and this SILVER is no less than a GOLD. India is proud of you, girl! 💪👏 pic.twitter.com/E3FjESdNHS

    — Boxing Federation (@BFI_official) October 13, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.