ಮೆಲ್ಬೋರ್ನ್: ಭಾರತ ಮಹಿಳಾ ತಂಡ ತ್ರಿಕೋನ ಟಿ-20 ಸರಣಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 11 ರನ್ಗಳಿಂದ ಸೋಲು ಕಾಣುವ ಮೂಲಕ ನಿರಾಶೆಯನುಭವಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ 173 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದ ಕೌರ್ ಪಡೆ ಇಂದು 156 ರನ್ಗಳನ್ನು ಚೇಸ್ ಮಾಡುವಲ್ಲಿ ವಿಫಲವಾಗಿ ಕೇವಲ 11 ರನ್ಗಳಿಂದ ಸೋಲುಕಂಡಿತು.
156 ರನ್ಗಳ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ಸ್ಫೋಟಕ ಆಟಗಾರ್ತಿ ಶೆಫಾಲಿ ವರ್ಮಾ ಮೊದಲ ಓವರ್ನಲ್ಲೇ ತಲಾ ಒಂದು ಬೌಂಡರಿ - ಸಿಕ್ಸರ್ ಸಿಡಿಸಿ ಉತ್ತಮ ಆರಂಭ ನೀಡುವ ಮುನ್ಸೂಚನೆ ನೀಡಿದರಾದರೂ, ನಂತರದ ಓವರ್ನಲ್ಲಿ ಕ್ಯಾಚ್ ಔಟ್ ಆದರು. ಆದರೆ, ಸ್ಮೃತಿ ಮಂಧಾನ (66) ಹಾಗೂ ಈ ರಿಚ ಘೋಷ್(17) ಎರಡನೇ ವಿಕೆಟ್ಗೆ 43 ರನ್ ಸೇರಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು.
-
🏆 WINNERS 🏆#CmonAussie pic.twitter.com/xr141bjRFC
— Australian Women's Cricket Team 🏏 (@AusWomenCricket) February 12, 2020 " class="align-text-top noRightClick twitterSection" data="
">🏆 WINNERS 🏆#CmonAussie pic.twitter.com/xr141bjRFC
— Australian Women's Cricket Team 🏏 (@AusWomenCricket) February 12, 2020🏆 WINNERS 🏆#CmonAussie pic.twitter.com/xr141bjRFC
— Australian Women's Cricket Team 🏏 (@AusWomenCricket) February 12, 2020
ನಂತರ ಬಂದ ರೋಡ್ರಿಗ್ಸ್ ಕೇವಲ 2 ರನ್ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ನಾಯಕಿ ಕೌರ್ ಜೊತೆಯಾದ ಮಂಧಾನ 4ನೇ ವಿಕೆಟ್ಗೆ 50 ರನ್ ಸೇರಿಸಿ ಮೇಗನ್ ಸ್ಕಟ್ಗೆ ವಿಕೆಟ್ ಒಪ್ಪಿಸಿದರು. ಅವರು 37 ಎಸೆತಗಳಲ್ಲಿ 12 ಬೌಂಡರಿ ಸಹಿತ 66 ರನ್ ಸಿಡಿಸಿದರು. ಮಂಧಾನ ಔಟಾಗುತ್ತಿದ್ದಂತೆ ಆಸ್ಟ್ರೇಲಿಯಾ ಬೌಲರ್ಗಳು ಭಾರತದ ಬ್ಯಾಟ್ಸ್ಮನ್ಗಳನ್ನು ಕ್ರೀಸ್ನಲ್ಲಿ ನೆಲೆಯೂರಲು ಬಿಡಲಿಲ್ಲ.
ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್(14), ದೀಪ್ತಿ ಶರ್ಮಾ(10), ಅರುಂದತಿ ರೆಡ್ಡಿ(0) ರಾಧಾ ಯಾದವ್(2) ಹಾಗೂ ತನಿಯಾ ಭಾಟಿಯಾ(11)ರನ್ನು ಸ್ಪಿನ್ನರ್ ಜೆಸ್ ಜೋನಾಸನ್ 3 ಓವರ್ಗಳಲ್ಲಿ ಪೆವಿಯಲಿಯನ್ಗಟ್ಟುವ ಮೂಲಕ ಭಾರತದ ಕೈಯಲ್ಲಿದ್ದ ಗೆಲುವನ್ನು ಆಸೀಸ್ ಕಡೆಗೆ ತಿರುಗಿಸಿಕೊಂಡರು.
ಭಾರತ ತಂಡ ಒಟ್ಟಾರೆ 20 ಓವರ್ಗಳಲ್ಲಿ 144 ರನ್ಗಳಿಗೆ ಆಲೌಟ್ ಆಗುವ ಮೂಲಕ 11 ರನ್ಗಳ ಸೋಲನುಭವಿಸಿತು. ಆಸ್ಟ್ರೇಲಿಯಾ ಪರ ಜೋನಾಸನ್ 5, ಟೈಲಾ ವ್ಲೆಮೆನಿಕ್ 2, ಸದರ್ಲ್ಯಾಂಡ್, ಪೆರ್ರಿ ಹಾಗೂ ಮೇಗನ್ ಸ್ಕಟ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.