ಅಡಿಲೇಡ್: ಶ್ರೀಲಂಕಾದ ಅನುಭವಿ ಬೌಲರ್ ಅಚಿನಿ ಕುಲಸಿರಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಕ್ಯಾಚ್ ಪಡೆಯುವ ವೇಳೆ ತಲೆಗೆ ಬಾಲ್ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಪವರ್ ಹಿಟ್ಟರ್ ಕೋಲ್ ಟ್ರಿಯಾನ್ ಲಾಂಗ್ ಆನ್ನತ್ತ ಹೊಡೆದ ಚೆಂಡನ್ನು ಕುಲಸುರಿಯಾ ಕ್ಯಾಚ್ ಪಡೆಯುವಲ್ಲಿ ತಪ್ಪು ಗ್ರಹಿಕೆ ಮಾಡಿದ್ದರಿಂದ ಬಾಲ್ ಅವರ ತಲೆಬುರುಡೆಗೆ ಬಿದ್ದು ಕುಸಿದು ಬಿದ್ದಿದ್ದಾರೆ. ತಕ್ಷಣ ಗಾಬರಿಗೊಂಡ ತಂಡದ ಆಟಗಾರ್ತಿಯರೆಲ್ಲ ಕುಲಸುರಿಯಾ ನೆರವಿಗೆ ದಾವಿಸಿದ್ದಾರೆ.

29 ವರ್ಷದ ಆಟಗಾರ್ತಿಯನ್ನು ಕೆಲವು ನಿಮಿಷಗಳ ಕಾಲ ಆ್ಯಂಬುಲೆನ್ಸ್ ಸಿಬ್ಬಂದಿ ಪರೀಕ್ಷೆನಡೆಸಿ ನಂತರ, ಸ್ಟ್ರೆಕ್ಚರ್ನಲ್ಲಿ ನಿಧಾನವಾಗಿ ಮೈದಾನ ಹೊರ ಸಾಗಿಸಿದ್ದಾರೆ. ನಂತರ ರಾಯಲ್ ಅಡಿಲೇಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಕುಲಸುರಿಯಾ ಮೈದಾನದಿಂದ ಆಸ್ಪತ್ರೆಗೆ ಸಾಗಿಸುವ ವೇಳೆ ನಮ್ಮ ಜೊತೆ ಮಾತನಾಡಿದ್ದರು, ಈಗಾಗಲೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಂಡವಿರುವ ಹೋಟೆಲ್ಗೆ ಮರಳಿದ್ದಾರೆ ಎಂದು ಶ್ರೀಲಂಕಾ ತಂಡ ಆಡಳಿತ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು ಪ್ರಥಮ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ತಂಡ 41 ರನ್ಗಳಿಂದ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದೆ. ಫೆಬ್ರವರಿ 22 ರಂದು ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಅಭಿಯಾನ ಆರಂಭಿಸಲಿದೆ.

