ETV Bharat / sports

ಬಲಿಷ್ಠ ಇಂಗ್ಲೆಂಡ್​ಗೆ ಭಾರತ ವನಿತೆಯರ ಸವಾಲ್​... ಫೈನಲ್​ ನಿರೀಕ್ಷೆಯಲ್ಲಿ ಕೌರ್​ ಪಡೆ

ಭಾರತ ತಂಡ ಈಗಾಗಲೆ ಲೀಗ್​ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 17, ಬಾಂಗ್ಲಾದೇಶದ ವಿರುದ್ಧ 18, ನ್ಯೂಜಿಲ್ಯಾಂಡ್​ ವಿರುದ್ಧ 3 ರನ್​ ಹಾಗೂ ಶ್ರೀಲಂಕಾ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

Women's T20 WC
Women's T20 WC
author img

By

Published : Mar 5, 2020, 12:01 AM IST

ಸಿಡ್ನಿ: ಚೊಚ್ಚಲ ಟಿ20 ವಿಶ್ವಕಪ್​ ಕನಸಿನಲ್ಲಿರುವ ಭಾರತದ ಮಹಿಳಾ ತಂಡ ಗುರುವಾರ ನಡೆಯಲಿರುವ ಸೆಮಿಫೈನಲ್​ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ.

ಭಾರತ ತಂಡ ಈಗಾಗಲೆ ಲೀಗ್​ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 17, ಬಾಂಗ್ಲಾದೇಶದ ವಿರುದ್ಧ 18, ನ್ಯೂಜಿಲ್ಯಾಂಡ್​ ವಿರುದ್ಧ 3 ರನ್​ ಹಾಗೂ ಶ್ರೀಲಂಕಾ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಇತ್ತ ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್​ಗಳ ಸೋಲನುಭವಿಸಿದ ನಂತರ ಸತತ ಮೂರು ಪಂದ್ಯಗಳಲ್ಲಿ ಥಾಯ್ಲೆಂಡ್ ವಿರುದ್ಧ 98 ರನ್​, ಪಾಕಿಸ್ತಾನ ವಿರುದ್ಧ 42 ರನ್​ ಹಾಗೂ ವಿಂಡೀಸ್​ ವಿರುದ್ಧ 46 ರನ್​ಗಳ ಜಯ ಸಾಧಿಸಿ ಬಿ ಗುಂಪಿನಲ್ಲಿ 2ನೇ ಸ್ಥಾನ ಪಡೆದು ಸೆಮಿಫೈನಲ್​ ಪ್ರವೇಶಿಸಿದೆ.

Women's T20 WC
ಶೆಫಾಲಿ ವರ್ಮಾ

ಆಸ್ಟ್ರೇಲಿಯಾ ಹೊರೆತು ಪಡಿಸಿದರೆ ವಿಶ್ವದ ಅತ್ಯುತ್ತಮ ತಂಡವಾಗಿರುವ ಇಂಗ್ಲೆಂಡ್​ ಮೊದಲ ಆವೃತ್ತಿಯಲ್ಲಿ ವಿಶ್ವಚಾಂಪಿಯನ್ ಆಗಿತ್ತು. ಇಂಗ್ಲೆಂಡ್​ ಭಾರತ ತಂಡದ ವಿರುದ್ಧ ಟಿ20ಯಲ್ಲಿ 16-4 ರ ಗೆಲುವಿನ ಅಂತರ ಹೊಂದಿದೆ, ಮೇಲುನೋಟಕ್ಕೆ ಭಾರತಕ್ಕಿಂತ ಬಲಿಷ್ಠವಾಗಿದೆ. ಕಳೆದ ಟಿ20 ವಿಶ್ವಕಪ್​ನಲ್ಲೂ ಭಾರತದ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿ ಫೈನಲ್​ ಪ್ರವೇಶಿಸಿತ್ತು.

Women's T20 WC
ಪೂನಮ್​ ಯಾದವ್​

ಆದರೆ ಭಾರತ ಕಳೆದ ವಿಶ್ವಕಪ್​ ಬಳಿಕ ತಂಡದಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದು, ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲೆ ನಡೆದ ಟಿ20 ತ್ರಿಕೋನ ಸರಣಿಯಲ್ಲಿ ಇಂಗ್ಲೆಂಡ್​ ತಂಡವನ್ನು ಹಿಂದಿಕ್ಕಿ ಫೈನಲ್ ಪ್ರವೇಶಿಸಿತ್ತು.

ಭಾರತಕ್ಕೆ ಶೆಫಾಲಿ ವರ್ಮಾ ಪ್ರಮುಖ ಅಸ್ತ್ರವಾಗಿದ್ದಾರೆ. ಕಳೆದ ನಾಲ್ಕು ಪಂದ್ಯಗಳಿಂದ 161 ರನ್​ಗಳಿಸಿ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ನಂಬರ್​ ಒನ್​ ಬ್ಯಾಟ್ಸ್​ವುಮನ್​ ಆಗಿದ್ದಾರೆ. ಇವರ ಜೊತೆಗೆ ಮಂದಾನ, ಕೌರ್​, ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿಯಂತಹ ಬ್ಯಾಟರ್​ಗಳಿದ್ದು, ಇಂಗ್ಲೆಂಡ್​ಗೆ ಸವಾಲೆಸೆಯಲು ಸಿದ್ದರಾಗಿದ್ದಾರೆ.

ಇನ್ನು ವೇಗಿ ಶೀಖಾ ಪಾಂಡೆ ಜೊತೆಗೆ ಗರಿಷ್ಟ ವಿಕೆಟ್​ ಪಡೆದಿರುವ ಟೂರ್ನಿಯಲ್ಲಿ ಪೂನಮ್​ ಯಾದವ್​ ಜೊತೆಗೆ ರಾಧ ಯಾದವ್​ ಕೂಡ ಉತ್ತಮ ಫಾರ್ಮ್​ನಲ್ಲಿ ಭಾರತ ತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.