ಶಾರ್ಜಾ: ವಿಮೆನ್ಸ್ ಟಿ-20 ಚಾಲೆಂಜ್ನ 3ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್ ನೋವಾಸ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಪಡೆ ಬೌಲಿಂಗ್ ಮಾಡಲು ನಿರ್ಧರಿಸಿದೆ.
ಲೀಗ್ನಲ್ಲಿ ಟ್ರೈಲ್ ಬ್ಲೇಜರ್ಸ್ ಮತ್ತು ಸೂಪರ್ ನೋವಾಸ್ ತಲಾ ಒಂದು ಜಯ ಪಡೆದಿದ್ದರೂ ರನ್ರೇಟ್ ಆಧಾರದ ಮೇಲೆ ವೆಲಾಸಿಟಿಯನ್ನು ಹಿಂದಿಕ್ಕಿ ಫೈನಲ್ ಪ್ರವೇಶಿಸಿದೆ. ಸೂಪರ್ ನೋವಾಸ್ ಪ್ರಶಸ್ತಿ ಉಳಿಸಿಕೊಳ್ಳುವ ಆಲೋಚನೆಯಲ್ಲಿದ್ದರೆ, ಟ್ರೈಲ್ ಬ್ಲೇಜರ್ಸ್ ಚೊಚ್ಚಲ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಸೂಪರ್ ನೋವಾಸ್ ಆರಂಭಿಕ ಬ್ಯಾಟರ್ ಪ್ರಿಯಾ ಪೂನಿಯಾ ಬದಲಿಗೆ ಪೂಜಾ ವಸ್ತ್ರಾಕರ್ಗೆ ಅವಕಾಶ ನೀಡಿದೆ. ಟ್ರೈಲ್ ಬ್ಲೇಜರ್ಸ್ ತಂಡಕೂ ಒಂದು ಬದಲಾವಣೆ ಮಾಡಿಕೊಂಡಿದ್ದು, ಹೇಮಲತಾ ಬದಲಿಗೆ ಪರ್ವಿನ್ ಫೈನಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
-
The #Supernovas have won the toss and they will bowl first against #Trailblazers in the Final of #JioWomensT20Challenge pic.twitter.com/RFtJI6LujF
— IndianPremierLeague (@IPL) November 9, 2020 " class="align-text-top noRightClick twitterSection" data="
">The #Supernovas have won the toss and they will bowl first against #Trailblazers in the Final of #JioWomensT20Challenge pic.twitter.com/RFtJI6LujF
— IndianPremierLeague (@IPL) November 9, 2020The #Supernovas have won the toss and they will bowl first against #Trailblazers in the Final of #JioWomensT20Challenge pic.twitter.com/RFtJI6LujF
— IndianPremierLeague (@IPL) November 9, 2020
ಟ್ರೈಲ್ಬ್ಲೇಸರ್ಸ್ : ಸ್ಮೃತಿ ಮಂದಾನಾ (ಸಿ), ದೀಪ್ತಿ ಶರ್ಮಾ, ಜೂಲಾನ್ ಗೋಸ್ವಾಮಿ, ರಿಚಾ ಘೋಷ್ (ವಿಕೀ), ರಾಜೇಶ್ವರಿ ಗಾಯಕ್ವಾಡ್, ದಿಯಾಂಡ್ರಾ ಡೊಟಿನ್, ನಟ್ಟಕನ್ ಚಾಂಟಮ್, ಹರ್ಲೀನ್ ಡಿಯೋಲ್, ನಿಝಾತ್ ಪರ್ವೀನ್, ಸೋಫಿ ಎಕ್ಲೆಸ್ಟೋನ್, ಸಲ್ಮಾ ಖತುನ್.
ಸೂಪರ್‌ನೋವಾಸ್ : ಹರ್ಮನ್‌ಪ್ರೀತ್ ಕೌರ್ (ನಾಯಕಿ) ಚಮತಿ ಅಥಾಪತ್ತು, ಜೆಮಿಮಾ ರೊಡ್ರಿಗಸ್, ಶಶಿಕಲಾ ಸಿರಿವರ್ಧನೆ, ಪೂಜಾ ವಸ್ತ್ರಕರ್, ರಾಧಾ ಯಾದವ್, ತಾನಿಯಾ ಭಾಟಿಯಾ (ವಿಕೀ), ಶಕೇಲಾ ಸೆಲ್ಮನ್, ಅಯಾಬೊಂಗಾ ಖಕಾ, ಪೂನಂ ಯಾದವ್, ಪೂಜಾ ವಸ್ತ್ರಾಕರ್