ETV Bharat / sports

ಮಹಿಳಾ ಟಿ-20 ಚಾಲೆಂಜ್: ಯುಎಇ ತಲುಪಿದ ಕೌರ್, ಮಂಧಾನ, ಶೆಫಾಲಿ

author img

By

Published : Oct 23, 2020, 9:17 AM IST

ಮಹಿಳಾ ಟಿ-20 ಚಾಲೆಂಜ್ ಟೂರ್ನಿಗಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕೆಲ ಆಟಗಾರ್ತಿಯರು ಯುಎಇ ತಲುಪಿದ್ದಾರೆ.

Women's T20 Challenge
ಯುಎಇ ತಲುಪಿದ ಹರ್ಮನ್‌ಪ್ರೀತ್ ಕೌರ್

ದುಬೈ: ಮಹಿಳಾ ಟಿ-20 ಚಾಲೆಂಜ್ ಟೂರ್ನಿಗಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಗುರುವಾರ ಯುಎಇ ತಲುಪಿದ್ದಾರೆ.

ಜೆಮಿಮಾ ರೋಡ್ರಿಗಸ್ ಮತ್ತು ಜುಲಾನ್ ಗೋಸ್ವಾಮಿ ಕೂಡ ಯುಎಇಗೆ ತಲುಪಿದ್ದಾರೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವಿಟರ್​ನಲ್ಲಿ ಆಟಗಾರ್ತಿಯರು ಆಗಮಿಸಿರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.

ಯುಎಇಯಲ್ಲಿ ನವೆಂಬರ್ 4ರಿಂದ ನವೆಂಬರ್ 9ರವರೆಗೆ ನಡೆಯಲಿರುವ ಮಹಿಳಾ ಟಿ-20 ಚಾಲೆಂಜ್‌ನಲ್ಲಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ನೇತೃತ್ವದ ಸೂಪರ್ ​ನೋವಾಸ್, ಟ್ರೈಲ್‌ ಬ್ಲೇಜರ್ಸ್ ಮತ್ತು ವೆಲಾಸಿಟಿ ತಂಡಗಳು ಸ್ಪರ್ಧಿಸಲಿವೆ. ನಾಲ್ಕು ಪಂದ್ಯಗಳ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ನ ಕೆಲವು ಪ್ರಮುಖ ಆಟಗಾರ್ತಿಯರು ಇರಲಿದ್ದಾರೆ.

ಕಳೆದ ವರ್ಷದ ಫೈನಲಿಸ್ಟ್​ಗಳಾದ ಸೂಪರ್​ ನೋವಾಸ್​ ಮತ್ತು ವೆಲಾಸಿಟಿ ತಂಡಗಳು 2020ರ ಮಹಿಳಾ ಟಿ-20 ಚಾಲೆಂಜ್​ನ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.