ಕಟಕ್: ಇಂದು ನಡೆದ ವುಮೆನ್ಸ್ ಟಿ20 ಚಾಲೆಂಜ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವೇದಾ ಕೃಷ್ಣಮೂರ್ತಿ ನಾಯಕತ್ವದ ಇಂಡಿಯಾ ಸಿ ತಂಡ ಇಂಡಿಯಾ ಬಿ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಇಂಡಿಯಾ ಸಿ ತಂಡ ಮೊದಲ ಬಾರಿ ಕಪ್ ಗೆದ್ದು ಸಂಭ್ರಮಿಸಿದೆ. ಇಂಡಿಯಾ ಸಿ ಪರ ಉತ್ತಮ ಆಟವಾಡಿದ ಶಪಾಲಿ ವರ್ಮಾ ಅಬ್ಬರದ 85 ರನ್ ಗಳಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.
-
India 'C' are the champions! 🏆🏆
— BCCI Women (@BCCIWomen) January 10, 2020 " class="align-text-top noRightClick twitterSection" data="
Shafali Verma stars with the bat as India ‘C’ beat India ‘B’ by eight wickets to win the @paytm #T20ChallengerTrophy #Final.
Scorecard 👉👉https://t.co/WhUYptq15Q#INDBvINDC pic.twitter.com/5LXjXYoFwf
">India 'C' are the champions! 🏆🏆
— BCCI Women (@BCCIWomen) January 10, 2020
Shafali Verma stars with the bat as India ‘C’ beat India ‘B’ by eight wickets to win the @paytm #T20ChallengerTrophy #Final.
Scorecard 👉👉https://t.co/WhUYptq15Q#INDBvINDC pic.twitter.com/5LXjXYoFwfIndia 'C' are the champions! 🏆🏆
— BCCI Women (@BCCIWomen) January 10, 2020
Shafali Verma stars with the bat as India ‘C’ beat India ‘B’ by eight wickets to win the @paytm #T20ChallengerTrophy #Final.
Scorecard 👉👉https://t.co/WhUYptq15Q#INDBvINDC pic.twitter.com/5LXjXYoFwf
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ಪಡೆ, ನಿಗದಿತ 20 ಒವರ್ಗಳಲ್ಲಿ 6 ವಿಕೆಟ್ಗೆ ಕೇವಲ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಮೃತಿ ಮಂದಾನ ಕೇವಲ 3 ರನ್ ಗಳಸಿ ರಾಜೇಶ್ವರಿ ಗಾಯಕ್ವಾಡ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಇವರ ಜೊತೆ ಇನ್ನಿಂಗ್ಸ್ ಆರಂಭಿಸಿದ ವೆಲ್ಲಸ್ವಾಮಿ ವನಿತಾ ತಕ್ಕ ಮಟ್ಟಿಗೆ ರನ್ ಗಳಿಸಿದ್ದನ್ನು ಬಿಟ್ಟರೆ ಇವರಿಗೆ ತಂಡದ ಯಾವುದೇ ಆಟಗಾರರು ಸಾಥ್ ನಿಡಲಿಲ್ಲ. ಆದ್ರೆ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಆಲ್ ರೌಂಡರ್ ಪೂಜಾ ವಸ್ತ್ರಾಕರ್ ಬಿರುಸಿನ ಆಟವಾಡಿ ಕೇವಲ 22 ಎಸೆತಗಳಲ್ಲಿ 3 ಬೌಂಡರಿ, 3 ಮೂರು ಭರ್ಜರಿ ಸಿಕ್ಸ್ರ ಸಮೇತ 43 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಇನ್ನು ಅಂಜೂ ಪಾಟೀಲ್ 20, ರೀಚ್ಚಾ ಗೋಷ್ 15, ವೆಲ್ಲಸ್ವಾಮಿ ವನಿತಾ 25, ಇವರನ್ನ ಬಿಟ್ಟರೆ ಯಾವೊಬ್ಬ ಆಟಗಾರ್ತಿಯೂ ಎರಡಂಕಿ ಮೊತ್ತ ದಾಟಲಿಲ್ಲ.
ಇಂಡಿಯಾ ಸಿ ಪರ ಭರ್ಜರಿ ಬೌಲಿಂಗ್ ಮಾಡಿದ ಮನಾಲಿ ದಾಕ್ಷಿಣಿ 3 ವಿಕೆಟ್ ಪಡೆದು ಮಿಂಚಿದರು. ಈ ಸಾಧರಣ ಮೊತ್ತವನ್ನು ಬೆನ್ನಟ್ಟಿದ ಇಂಡಿಯಾ ಸಿ ತಂಡ ಕೇವಲ 15.2 ಓವರ್ಗಳಲ್ಲಿ ಗುರಿ ಮುಟ್ಟಿತು. ಓಪನರ್ ಆಗಿ ಕಣಕ್ಕಿಳಿದ ಶಫಾಲಿ ವರ್ಮಾ ಮತ್ತು ಮಾದುರಿ ಮೆಹ್ತಾ ಮೊದಲ ವಿಕೇಟ್ ಗೆ 77ರನ್ಗಳ ಜೊತೆ ಆಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟರು. 20 ರನ್ ಗಳಿಸಿದಾಗ ಮಾದುರಿ ಮೆಹ್ತಾ ಅಂಜು ಪಾಟೀಲ್ ಎಸೆದ ಅದ್ಭತ ರನ್ ಔಟ್ಗೆ ಬಲಿಯಾದರು. ನಂತರ ಕ್ರೀಸ್ಗಿಳಿದ ನಾಯಕಿ ವೇದಾ ಕೃಷ್ಣಮೂರ್ತಿ15 ರನ್ ಗಳಿಸಿ ಶಫಾಲಿ ವರ್ಮಾ ಗೆ ಉತ್ತಮ ಸಾಥ್ ನೀಡಿದರು. ವೇದಾ ವಿಕೆಟ್ ನಂತರ ಕ್ರೀಸ್ ಗಿಳಿದ ದಯಾಳನ್ ಹೇಮಲತಾ 6 ರನ್ ಗಳಿಸಿ ಔಟಾಗದೆ ಉಳಿದರು. ಅಂತಿಮವಾಗಿ ಇಂಡಿಯಾ ಸಿ ತಂಡ ಕೇವಲ 15.2 ಓವರ್ಗಳಲ್ಲಿ ಗುರಿ ಮುಟ್ಟಿ 8 ವಿಕೆಟ್ಗಳ ಭರ್ಜರಿ ಸಾಧಿಸಿದೆ.