ETV Bharat / sports

ಸ್ವಿಂಗ್ ಕಿಂಗ್ ಭುವಿ ಕಮ್​ಬ್ಯಾಕ್​: ಕೆಕೆಆರ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿ ಸನ್​ ರೈಸರ್ಸ್​ - ಭುವನೇಶ್ವರ್ ಕುಮಾರ್​ ಕಮ್​ಬ್ಯಾಕ್

ಇತ್ತ ಕೆಕೆಆರ್​ ಸಮತೋಲನ ತಂಡವನ್ನು ಹೊಂದಿದ್ದು, ಹೈದರಾಬಾದ್​ ವಿರುದ್ಧದ ತನ್ನ ಪ್ರಾಬಲ್ಯವನ್ನು ಮುಂದುವರೆಸಲು ಎದುರು ನೋಡುತ್ತಿದೆ. ಲೀಗ್​ನಲ್ಲಿ 19 ಬಾರಿ ಮುಖಾಮುಖಿಯಲ್ಲಿ ಕೋಲ್ಕತ್ತಾ 12 ಬಾರಿ ವಾರ್ನರ್​ ಬಳಗವನ್ನು ಬಗ್ಗುಬಡಿದಿದೆ. ಅಲ್ಲದೆ ಈ ಬಾರಿ ತಂಡಕ್ಕೆ ಶಕಿಬ್ ಅಲ್ ಹಸನ್​, ಹರ್ಭಜನ್​ ಸಿಂಗ್ ಅಂತಹ ಸ್ಪಿನ್​ ದಿಗ್ಗಜರು ತಂಡ ಸೇರಿರುವುದು ಕೂಡ ತಂಡಕ್ಕೆ ಹೆಚ್ಚಿನ ಬಲ ತಂದಿದೆ.

ಡೇವಿಡ್ ವಾರ್ನರ್​- ಇಯಾನ್ ಮಾರ್ಗನ್
ಡೇವಿಡ್ ವಾರ್ನರ್​- ಇಯಾನ್ ಮಾರ್ಗನ್
author img

By

Published : Apr 11, 2021, 3:49 PM IST

ಚೆನ್ನೈ: ಗಾಯದ ಕಾರಣ ಕಳೆದ ವರ್ಷದ ಐಪಿಎಲ್​ ತಪ್ಪಿಸಿಕೊಂಡಿದ್ದ ವೇಗಿ ಭುವನೇಶ್ವರ್ ಕುಮಾರ್​ ಸನ್ ​ರೈಸರ್ಸ್​ ತಂಡವನ್ನು ಸೇರಿಕೊಂಡಿದ್ದು, ಇಂದು ನಡೆಯುವ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಶುಭಾರಂಭ ಮಾಡಲು ಸಜ್ಜಾಗಿದೆ.

ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಎರಡೂ ತಂಡಗಳು 14ನೇ ಆವೃತ್ತಿಯಲ್ಲಿ ತಮ್ಮ ಮೊದಲ ಪಂದ್ಯವನ್ನಾಡಲಿವೆ. ಸತತ 5 ವರ್ಷಗಳಿಂದ ಪ್ಲೇ ಆಫ್​ ತಲುಪುವಲ್ಲಿ ಯಶಸ್ವಿಯಾಗಿರುವ ಸನ್ ​ರೈಸರ್ಸ್​ ಹೈದರಾಬಾದ್​ ತಂಡ ಕಳೆದ ಬಾರಿಗಿತಂಲೂ ಪ್ರಬಲವಾಗಿದೆ.

ಭುವನೇಶ್ವರ್​ ಕುಮಾರ್​, ರಶೀದ್ ಖಾನ್, ಟಿ.ನಟರಾಜನ್​ ಅಂತಹ ಶ್ರೇಷ್ಠ ಬೌಲರ್​ಗಳ ಜೊತೆಗೆ ಡೇವಿಡ್​ ವಾರ್ನರ್​, ಜಾನಿ ಬೈರ್​ಸ್ಟೋವ್​, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್​ ಹಾಗೂ ಜೇಸನ್ ರಾಯ್​ ಅಂತಹ ಟಿ-20 ಸ್ಪೆಷಲಿಸ್ಟ್​ಗಳಿದ್ದಾರೆ. ಇವರ ಜೊತೆಗೆ ಯುವ ಆಟಗಾರರಾದ ವಿಜಯ್ ಶಂಕರ್, ಅಬ್ದುಲ್ ಸಮದ್, ಪ್ರಿಯಂ ಗರ್ಗ್​, ವಿರಾಟ್ ಸಿಂಗ್ , ಅಭಿಶೇಕ್ ಶರ್ಮಾ ಅಂತಹ ಯುವ ಆಟಗಾರರ ಬಳಗ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಕಾಯುತ್ತಿದೆ.

ಇತ್ತ ಕೆಕೆಆರ್​ ಕೂಡ ಸಮತೋಲನ ತಂಡವನ್ನು ಹೊಂದಿದ್ದು, ಹೈದರಾಬಾದ್​ ವಿರುದ್ಧದ ತನ್ನ ಪ್ರಾಬಲ್ಯವನ್ನು ಮುಂದುವರೆಸಲು ಎದುರು ನೋಡುತ್ತಿದೆ. ಲೀಗ್​ನಲ್ಲಿ 19 ಬಾರಿ ಮುಖಾಮುಖಿಯಲ್ಲಿ ಕೋಲ್ಕತ್ತಾ 12 ಬಾರಿ ವಾರ್ನರ್​ ಬಳಗವನ್ನು ಬಗ್ಗುಬಡಿದಿದೆ. ಅಲ್ಲದೆ ಈ ಬಾರಿ ತಂಡಕ್ಕೆ ಶಕಿಬ್ ಅಲ್ ಹಸನ್​, ಹರ್ಭಜನ್​ ಸಿಂಗ್ ಅಂತಹ ಸ್ಪಿನ್​ ದಿಗ್ಗಜರು ತಂಡ ಸೇರಿರುವುದು ಕೂಡ ತಂಡಕ್ಕೆ ಹೆಚ್ಚಿನ ಬಲ ತಂದಿದೆ.

ಶುಬ್ಮನ್​ ಗಿಲ್, ದಿನೇಶ್ ಕಾರ್ತಿಕ್ ನಾಯಕ ಇಯಾನ್ ಮಾರ್ಗನ್​ ಜೊತೆಗೆ ಸ್ಫೋಟಕ ಬ್ಯಾಟ್ಸ್​ಮನ್ ಆ್ಯಂಡ್ರೆ ರಸೆಲ್ ಮತ್ತು ಸುನೀಲ್ ನರೈನ್ ಅಂತಹ ಆಲ್​ರೌಂಡರ್​ಗಳು ತಂಡಕ್ಕೆ ಬಲ ತರಲಿದ್ದಾರೆ.

ಇನ್ನು ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ್ದ ಪ್ರಸಿದ್ ಕೃಷ್ಣ, ಆಸೀಸ್​ ಸ್ಟಾರ್​ ಪ್ಯಾಟ್​ ಕಮ್ಮಿನ್ಸ್​ ಜೊತೆಗೆ ದೇಶಿ ಪ್ರತಿಭೆಗಳಾದ ಶಿವಂ ಮಾವಿ, ಕಮಲೇಶ್ ನಾಗರಕೋಟಿ ವೇಗದ ಬೌಲಿಂಗ್ ವಿಭಾಗದ ಬೆನ್ನೆಲುಬಾಗಿದ್ದಾರೆ. ಸ್ಪಿನ್​ ವಿಭಾಗದಲ್ಲಿ ನರೈನ್ ಮತ್ತು ಶಕಿಬ್ ಜೊತೆಗೆ ಕುಲ್ದೀಪ್ ಯಾದವ್​ ಮತ್ತು ತಮಿಳುನಾಡಿನ ವರುಣ್ ಚಕ್ರವರ್ತಿ ತಂಡದಲ್ಲಿದ್ದಾರೆ.

ಚೆನ್ನೈ ಪಿಚ್​ ಸ್ಪಿನ್​ ಸ್ನೇಹಿಯಾಗಿರುವುದರಿಂದ ಎರಡೂ ತಂಡಗಳಿಂದಲೂ ಪ್ರಬಲ ಪೈಪೋಟಿ ನಿರೀಕ್ಷಿಸಬಹುದಾಗಿದೆ.

ತಂಡಗಳು:

ಎಸ್‌ಆರ್‌ಹೆಚ್: ಡೇವಿಡ್ ವಾರ್ನರ್ (ನಾಯಕ), ಭುವನೇಶ್ವರ್ ಕುಮಾರ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಶ್ರೀವಾತ್ಸ ಗೋಸ್ವಾಮಿ, ಟಿ.ನಟರಾಜನ್, ವಿಜಯ್ ಶಂಕರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಜೇಸನ್ ರಾಯ್, ಜೇಸನ್ ಹೋಲ್ಡರ್, ಪ್ರಿಯಮ್ ಗರ್ಗ್, ವಿರಾಟ್ ಸಿಂಗ್, ಕೇದಾರ್ ಜಾಧವ್, ಮುಜೀಬ್ ಉರ್ ರೆಹಮಾನ್, ಜೆ ಸುಚಿತ್, ಅಭಿಷೇಕ್ ಶರ್ಮಾ, ಬಾಸಿಲ್ ಥಂಪಿ.

ಕೆಕೆಆರ್: ಶುಬ್ಮನ್ ಗಿಲ್, ನಿತೀಶ್ ರಾಣಾ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಇಯೊನ್ ಮೋರ್ಗಾನ್ (ನಾಯಕ), ಆಂಡ್ರೆ ರಸ್ಸೆಲ್, ಸುನಿಲ್ ನರೈನ್, ವರುಣ್ ಸಿವಿ, ಕುಲದೀಪ್ ಯಾದವ್, ಪ್ಯಾಟ್ ಕಮ್ಮಿನ್ಸ್, ಲಾಕಿ ಫರ್ಗ್ಯುಸನ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ಸಂದೀಪ್ ವಾರಿಯರ್, ಪ್ರಸಿದ್ ಕೃಷ್ಣ, ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರಾ, ಕರುಣ್ ನಾಯರ್, ಹರ್ಭಜನ್ ಸಿಂಗ್, ಬೆನ್ ಕಟಿಂಗ್, ವೆಂಕಟೇಶ್ ಅಯ್ಯರ್, ಪವನ್ ನೇಗಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.