ದುಬೈ: ಭಾರತ ತಂಡದ ಯುವ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದು, ಅವರ ತಾಳ್ಮೆ ಹಾಗೂ ಎಲ್ಲ ಆಟಗಾರರಿಂದ ಅತ್ಯುತ್ತಮವಾದುದನ್ನು ಹೊರತರಬೇಕೆನ್ನುವ ಅವರ ಗುಣ ನನಗೆ ಸ್ಪೂರ್ತಿ ಎಂದು ಹೇಳಿಕೊಂಡಿದ್ದಾರೆ.
ಎಂಎಸ್ ಧೋನಿ ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ದಿನ ತಮ್ಮ 16 ವರ್ಷಗಳ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ. ಧೋನಿ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ರಾಹುಲ್ ಧೋನಿ ಜೊತೆ ಕ್ರಿಕೆಟ್ ಆಡಿದ್ದೇನೆ ಎಂದು ಹೇಳಿಕೊಳ್ಳುವುದೇ ಒಂದು ದೊಡ್ಡ ಗೌರವ ಎಂದಿದ್ದಾರೆ.
-
Interview - @lionsdenkxip Captain @klrahul11 speaks to @RajalArora about his ideology as a Captain, idolizing @msdhoni and more....
— IndianPremierLeague (@IPL) August 25, 2020 " class="align-text-top noRightClick twitterSection" data="
📹📹https://t.co/wlEP3Ijmbo #Dream11IPL pic.twitter.com/MDpdHCnEi1
">Interview - @lionsdenkxip Captain @klrahul11 speaks to @RajalArora about his ideology as a Captain, idolizing @msdhoni and more....
— IndianPremierLeague (@IPL) August 25, 2020
📹📹https://t.co/wlEP3Ijmbo #Dream11IPL pic.twitter.com/MDpdHCnEi1Interview - @lionsdenkxip Captain @klrahul11 speaks to @RajalArora about his ideology as a Captain, idolizing @msdhoni and more....
— IndianPremierLeague (@IPL) August 25, 2020
📹📹https://t.co/wlEP3Ijmbo #Dream11IPL pic.twitter.com/MDpdHCnEi1
" ಎಂಎಸ್ ಧೋನಿ ಅವರೊಂದಿಗೆ ಆಟವಾಡುವುದೇ ಒಂದು ದೊಡ್ಡ ಗೌರವ ಮತ್ತು ನಿತ್ಯವೂ ಒಂದು ದೊಡ್ಡ ಕಲಿಕೆಯಾಗಿರುತ್ತಿತ್ತು. ಅವರ ಜೊತೆಗೆ ಆಡಿರುವ ಕ್ಷಣಗಳನ್ನು ನನ್ನ ಜೀವನದ ಮತ್ತು ವೃತ್ತ್ತಿ ಜೀವನದ ಉಳಿದ ಭಾಗವನ್ನು ಒಂದು ಅಮೂಲ್ಯವಾದ ಕ್ಷಣ ಎಂದು ನಾನು ಪರಿಗಣಿಸುತ್ತೇನೆ. ಮೈದಾನದಲ್ಲಿ ಧೋನಿ ಜೊತೆ ನಾನು ಆಡಿರುವ ಕೆಲವು ಜೊತೆಯಾಟಗಳು ಇದರಲ್ಲಿ ಸೇರಿವೆ" ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಟ್ವಿಟರ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ರಾಹುಲ್ ಹೇಳಿಕೊಂಡಿದ್ದಾರೆ.
"ಅವರು ಹೊಂದಿದ್ದ ಶಾಂತತೆ ಮತ್ತು ಪ್ರತಿಯೊಬ್ಬ ಆಟಗಾರರಿಂದಲೂ ಉತ್ತಮವಾದದ್ದನ್ನು ಹೊರ ತರುತ್ತಿದ್ದ ರೀತಿಯನ್ನು ಎಲ್ಲರೂ ಕಲಿಯಲು ಪ್ರಯತ್ನಿಸುತ್ತಾರೆ "ಎಂದು ಅವರು ತಮ್ಮ ಹೇಳಿಕೆಯಲ್ಲಿ ಸ್ಮರಿಸಿದ್ದಾರೆ.
ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ನಲ್ಲಿ ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ.
ಈ ತಂಡಕ್ಕೆ ಕರ್ನಾಟಕದವರೇ ಆದ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿರುವುದರಿಂದ ತಮ್ಮ ನಾಯಕತ್ವದ ಕೆಲಸವನ್ನು ಸುಲಭವಾಗಲಿದೆ. ಅವರು ರೂಪಿಸಿದ ಯೋಜನೆಗಳನ್ನು ಮೈದಾನದಲ್ಲಿ ಪ್ರಯೋಗಿಸುವುದು ಮಾತ್ರ ನನ್ನ ಕೆಲಸ ಎಂದು ರಾಹುಲ್ ತಿಳಿಸಿದ್ದಾರೆ.