ಮೆಲ್ಬೋರ್ನ್: ಕೊರೊನಾದಿಂದಾಗಿ ಕೆಲವು ಕ್ರೀಡಾಕೂಟಗಳು ಮುಂದೂಡಲ್ಪಟ್ಟರೆ ಇನ್ನೂ ಕೆಲವು ಕ್ರೀಡಾಕೂಟಗಳು ರದ್ದಾಗಿದ್ದವು. ಆದರೆ ಟಿ20 ವಿಶ್ವಕಪ್ ಏನಾಗುವುದು ಎಂಬುದು ಕೂತೂಹಲಕಾರಿಯಾಗಿದೆ.
ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ನಿಂದ 18 ರಿಂದ ನವೆಂಬರ್ 15ರವರೆಗೆ ನಡೆಯಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದ ವಿಶ್ವಕಪ್ ಮುಂದೂಡಬಹುದಾ ಅಥವಾ ರದ್ದಾಗುವುದೇ ಎಂಬ ಗೊಂದಲದಲ್ಲಿದ್ದರೆ, ಐಸಿಸಿ ಮಾತ್ರ ಇನ್ನು ವಿಶ್ವಕಪ್ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕಾಗುವುದಿಲ್ಲ ಎಂದು ಐಸಿಸಿ ಸ್ಪಷ್ಟನೆ ಪಡೆಸಿದೆ.
ಕೊರೊನಾ ಸೋಂಕು ಭೀತಿಯಿಂದ ಆಸ್ಟ್ರೇಲಿಯಾವು ತನ್ನ ಗಡಿಗಳನ್ನು ಮುಚ್ಚಿದ್ದು, ಪ್ರಯಾಣ ನಿರ್ಬಂಧಗಳನ್ನು ಹೇರಿದೆ. ಈ ಹಿನ್ನೆಲೆಯಲ್ಲಿ ಟಿ-20 ವಿಶ್ವಕಪ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗುತ್ತದೆ ಅಥವಾ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿ ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಬೇಕಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
"ನಾವು ಐಸಿಸಿ ಟೂರ್ನಿಗಳನ್ನು ನಿಗದಿತ ಯೋಜನೆಯಲ್ಲೆ ನಡೆಸಲು ಮುಂದುವರಿಯುತ್ತಿದ್ದೇವೆ. ಆದರೆ ಈ ವಿಚಾರ ಕುರಿತು ತ್ವರಿತಗತಿಯಲ್ಲಿ ಬದಲಾಗುತ್ತಿರುವ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ವಿವೇಕಯುತ ಮತ್ತು ಜವಾಬ್ದಾರಿಯಿಂದ ಪರಿಹಾರೋಪಾಯ ಕಂಡುಕೊಳ್ಳಬೇಕಾಗುತ್ತದೆ"ಎಂದು ಐಸಿಸಿ ಅಧಿಕಾರಿಯೊಬ್ಬರು ಸ್ಕೈ ಸ್ಫೊರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೊರೊನಾ ಯಾವ ಸ್ಥಿತಿಯಲ್ಲಿದೆ ಎಂಬುದರ ಆದಾರದ ಮೇಲೆ ಲಭ್ಯವಿರುವ ಆಯ್ಕೆಗಳನ್ನು ಅನ್ವೇಷಣೆ ನಡೆಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಟಿ-20 ವಿಶ್ವಕಪ್ ಆರಂಭವಾಗಲು ಇನ್ನೂ ಆರು ತಿಂಗಳು ಕಾಲಾವಕಾಶವಿದೆ. . ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಸೇರಿದಂತೆ ಎಲ್ಲ ಮಧ್ಯಸ್ಥಗಾರರ ಜೊತೆ ಚರ್ಚಿಸಿ ವಿಶ್ವಕಪ್ ಬಗ್ಗೆ ನಿರ್ದಾರ ತೆಗೆದುಕೊಳ್ಳಲಾಗುವುದು ಎಂದು ಐಸಿಸಿ ತಿಳಿಸಿದೆ.