ETV Bharat / sports

ಕಡಿಮೆಯಾಯ್ತು ಕೆಎಲ್​ ಮೇಲಿನ ನಂಬಿಕೆ; ಆಫ್ರಿಕಾ ವಿರುದ್ಧದ ಟೆಸ್ಟ್​ಗೆ ಹಿಟ್​ಮ್ಯಾನ್​ ಆರಂಭಿಕ - ಟೆಸ್ಟ್​ ಕ್ರಿಕೆಟ್​​ ಪಂದ್ಯ

ಟೀಂ ಇಂಡಿಯಾ ಟೆಸ್ಟ್​ ಕ್ರಿಕೆಟ್​ನ ಆರಂಭಿಕ ಆಟಗಾರ ಕೆಎಲ್​ ರಾಹುಲ್ ನಿರಂತರ​ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದು, ಅವರ ಸ್ಥಾನಕ್ಕೆ ಹಿರಿಯ ಅನುಭವಿ ಆಟಗಾರನಿಗೆ ಚಾನ್ಸ್​ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಕೆಎಲ್​ ರಾಹುಲ್​​​
author img

By

Published : Sep 10, 2019, 5:53 PM IST

ಮುಂಬೈ: ಟೀಂ ಇಂಡಿಯಾ ಟೆಸ್ಟ್​​​ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಕನ್ನಡಿಗ ಕೆಎಲ್​ ರಾಹುಲ್​, ಕಳೆದ ಕೆಲ ಟೆಸ್ಟ್​​ ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಹಿರಿಯ ಆಟಗಾರನಿಗೆ ಮಣೆ ಹಾಕಲು ಆಯ್ಕೆ ಸಮಿತಿ ಮುಂದಾಗಿದೆ.

ವೆಸ್ಟ್​ ಇಂಡೀಸ್​ ವಿರುದ್ಧ ಮುಕ್ತಾಯಗೊಂಡ ಎರಡು ಟೆಸ್ಟ್​​ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿರುವ ಕೆಎಲ್​ ರಾಹುಲ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಕಳೆದ ವಿಶ್ವಕಪ್​​ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು 5 ದಾಖಲೆಯ ಶತಕ ಬಾರಿಸಿರುವ ರೋಹಿತ್​ ಶರ್ಮಾಗೆ ಟೆಸ್ಟ್​​ನಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲು ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ.

Rohit sharma
ಎಂಎಸ್​ಕೆ ಪ್ರಸಾದ್ ಮತ್ತು ರೋಹಿತ್​ ಶರ್ಮಾ

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​​, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​​ ಪಂದ್ಯದಲ್ಲಿ ರೋಹಿತ್​ ಶರ್ಮಾ ಆಡುವ 11ರಲ್ಲಿ ಚಾನ್ಸ್​ ಪಡೆದುಕೊಳ್ಳಲಿದ್ದು, ಆರಂಭಿಕ ಸ್ಥಾನಕ್ಕೆ ಅವರನ್ನು ಆಡಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಷ್ಟು ದಿನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿದ್ದ ಶರ್ಮಾ, ವೆಸ್ಟ್​ ಇಂಡೀಸ್​ ವಿರುದ್ಧ ಕಣಕ್ಕಿಳಿದಿರಲಿಲ್ಲ. ಇನ್ನು ಕಳೆದ ಎರಡು ಟೆಸ್ಟ್​​ ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ಭರ್ಜರಿ ಬ್ಯಾಟಿಂಗ್​ ಮಾಡಿರುವ ಕಾರಣ, ರೋಹಿತ್​ ಶರ್ಮಾಗೆ ಆರಂಭಿಕರಾಗಿ ಬಡ್ತಿ ನೀಡುವ ಚಾನ್ಸ್​ ದಟ್ಟವಾಗಿದೆ.

ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗಾಗಿ ಈಗಾಗಲೇ ನಾವು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ರೋಹಿತ್​ ಶರ್ಮಾಗೆ ಈ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದೇವೆ. ಕೆಎಲ್​ ರಾಹುಲ್​ ಓರ್ವ ಅದ್ಭುತ ಬ್ಯಾಟ್ಸ್​ಮನ್​. ಆದರೆ ಇದೀಗ ವಿಕೆಟ್​ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದಿದ್ದಾರೆ.

Intro:Body:

ಕಡಿಮೆಯಾಯ್ತು ಕೆಎಲ್​ ಮೇಲಿನ ನಂಬಿಕೆ... ಆಫ್ರಿಕಾ ವಿರುದ್ಧದ ಟೆಸ್ಟ್​ಗೆ ಹಿಟ್​ಮ್ಯಾನ್​ ಆರಂಭಿಕ! 

ಮುಂಬೈ: ಟೀಂ ಇಂಡಿಯಾ ಟೆಸ್ಟ್​​​ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಕನ್ನಡಿಗ ಕೆಎಲ್​ ರಾಹುಲ್​, ಕಳೆದ ಕೆಲ ಟೆಸ್ಟ್​​ ಪಂದ್ಯಗಳಿಂದ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗಾಗಿ ಬೇರೆ ಆರಂಭಿಕನ ಮೊರೆ ಹೋಗಲು ಆಯ್ಕೆ ಸಮಿತಿ ಮುಂದಾಗಿದೆ. 

ವೆಸ್ಟ್​ ಇಂಡೀಸ್​ ವಿರುದ್ಧ ಮುಕ್ತಾಯಗೊಂಡ ಎರಡು ಟೆಸ್ಟ್​​ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿರುವ ಕೆಎಲ್​ ರಾಹುಲ್​ ಹೇಳಿಕೊಳ್ಳುವಂತಹ ಬ್ಯಾಟಿಂಗ್​​ ಪ್ರದರ್ಶನ ನೀಡಿಲ್ಲ. ಹೀಗಾಗಿ ಕಳೆದ ವಿಶ್ವಕಪ್​​ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಐದು ದಾಖಲೆಯ ಶತಕ ಬಾರಿಸಿರುವ ರೋಹಿತ್​ ಶರ್ಮಾಗೆ ಟೆಸ್ಟ್​​ನಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲು ಅವಕಾಶ ನೀಡಲು ಆಯ್ಕೆ ಸಮಿತಿ ಮುಂದಾಗಿದೆ ಎಂದು ತಿಳಿದು ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​​, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​​ ಪಂದ್ಯದಲ್ಲಿ ರೋಹಿತ್​ ಶರ್ಮಾ ಆಡುವ 11ರಲ್ಲಿ ಚಾನ್ಸ್​ ಪಡೆದುಕೊಳ್ಳಲಿದ್ದು, ಆರಂಭಿಕ ಸ್ಥಾನಕ್ಕೆ ಅವರನ್ನ ಆಡಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಇಷ್ಟು ದಿನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿದ್ದ ರೋಹಿತ್​ ಶರ್ಮಾ, ವೆಸ್ಟ್​ ಇಂಡೀಸ್​ ವಿರುದ್ಧ ಕಣಕ್ಕಿಳಿದಿರಲಿಲ್ಲ. ಇನ್ನು ಕಳೆದ ಎರಡು ಟೆಸ್ಟ್​​ ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ಭರ್ಜರಿ ಬ್ಯಾಟಿಂಗ್​ ಮಾಡಿರುವ ಕಾರಣ, ರೋಹಿತ್​ ಶರ್ಮಾಗೆ ಆರಂಭಿಕರಾಗಿ ಬಡ್ತಿ ನೀಡುವ ಚಾನ್ಸ್​ ದಟ್ಟವಾಗಿದೆ. 

ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗಾಗಿ ಈಗಾಗಲೇ ನಾವು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ರೋಹಿತ್​ ಶರ್ಮಾಗೆ ಈ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದೇವೆ. ಕೆಎಲ್​ ರಾಹುಲ್​ ಓರ್ವ ಅದ್ಭುತ ಬ್ಯಾಟ್ಸ್​ಮನ್​. ಆದರೆ ಇದೀಗ ವಿಕೆಟ್​ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.