ಪೋರ್ಟ್ ಆಫ್ ಸ್ಪೇನ್: ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆತಿಥೇಯ ವೆಸ್ಟ್ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಆರಂಭದಲ್ಲಿ ಪಂದ್ಯಕ್ಕೆ ವರುಣರಾಯ ಅಡ್ಡಿಪಡಿಸಿದೆ.
ವೆಸ್ಟ್ ಇಂಡೀಸ್ ತಾನು ಎದುರಿಸಿರುವ 1.5 ಓವರ್ಗಳಲ್ಲಿ 8ರನ್ಗಳಿಕೆ ಮಾಡಿದ್ದು, ಯಾವುದೇ ವಿಕೆಟ್ ಕಳೆದುಕೊಂಡಿಲ್ಲ. ಈ ವೇಳೆ ಮಳೆ ಶುರುವಾಗಿದೆ.
ಈಗಾಗಲೇ ಸರಣಿಯಲ್ಲಿ ಮೊದಲ ಪಂದ್ಯ ಮಳೆಗಾಹುತಿಯಾಗಿದ್ದು, ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದೆ. ಇಂದಿನ ಪಂದ್ಯದಲ್ಲೂ ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಆದರೆ ವೆಸ್ಟ್ ಇಂಡೀಸ್ ಗೆಲುವಿನೊಂದಿಗೆ ಸರಣಿ ಸಮಬಲ ಮಾಡಿಕೊಳ್ಳುವ ತವಕದಲ್ಲಿದೆ.
ಟೀಂ ಇಂಡಿಯಾ ತಂಡದಲ್ಲಿ ಕೇವಲ ಒಂದು ಬದಲಾವಣೆ ಮಾಡಲಾಗಿದ್ದು, ಕುಲ್ದೀಪ್ ಯಾದವ್ ಸ್ಥಾನಕ್ಕೆ ಯಜುವೇಂದ್ರ ಚಹಲ್ಗೆ ಚಾನ್ಸ್ ನೀಡಲಾಗಿದೆ. ವಿಂಡೀಸ್ ತಂಡದಲ್ಲಿ ಶೆಲ್ಡನ್ ಕಾಟ್ರೆಲ್ ಸ್ಥಾನಕ್ಕೆ ಕೀಮೊ ಪೌಲ್, ಹಾಗೂ ಒಶಾನ್ ಥಾಮಸ್ ಜಾಗಕ್ಕೆ ಫ್ಯಾಬಿಯನ್ ಅಲೆನ್ ಆಯ್ಕೆಗೊಂಡಿದ್ದಾರೆ.
ತಂಡ ಇಂತಿವೆ
ಟೀಂ ಇಂಡಿಯಾ: ಶಿಖರ್ ಧವನ್,ರೋಹಿತ್ ಶರ್ಮಾ,ವಿರಾಟ್ ಕೊಹ್ಲಿ,ರಿಷಭ್ ಪಂತ್,ಶ್ರೇಯಸ್ ಅಯ್ಯರ್,ಕೇದಾರ್ ಜಾಧವ್,ರವಿಂದ್ರ ಜಡೇಜಾ,ಭುವನೇಶ್ವರ್ ಕುಮಾರ್,ಮೊಹಮ್ಮದ್ ಶಮಿ,ಚಹಲ್,ಖಲೀಲ್ ಅಹ್ಮದ್
ವೆಸ್ಟ್ ಇಂಡೀಸ್: ಕ್ರಿಸ್ ಗೇಲ್,ಇವಲ್ ಲಿವಿಸ್,ಶೈ ಹೋಪ್,ಶಿಮ್ರಾನ್ ಹೆಟ್ಮಾಯರ್,ಪೋರನ್,ಚೇಸ್,ಜಾಸನ್ ಹೊಲ್ಡರ್,ಬ್ರಾಥ್ವೈಟ್,ಅಲಿನ್,ಕಿಮೋ ಪೌಲ್,ರೋಚ್