ETV Bharat / sports

ಕಿವೀಸ್​ ವಿರುದ್ಧ ಏಕದಿನ ಸರಣಿಗೆ ಪೃಥ್ವಿ ಶಾ ಏಕೆ? ಮಯಾಂಕ್​ ಏಕಿಲ್ಲ? ಅಂಕಿಅಂಶ ಹೇಳುವುದೇನು? - ಮಯಾಂಕ್ ​ಅಗರ್​ವಾಲ್-ಪೃಥ್ವಿ ಶಾ

ಕರ್ನಾಟಕದ ಮಯಾಂಕ್​ ಅಗರ್​ವಾಲ್​ ಈ ಹಿಂದೆ ಶಿಖರ್​ ಧವನ್​ ಗಾಯಗೊಂಡ ಎರಡು ಸಂದರ್ಭದಲ್ಲಿ ತಂಡಕ್ಕೆ ಬದಲಿ ಆಟಗಾರನಾಗಿ ಸೇರಿಕೊಂಡಿದ್ದರು. ಈ ಬಾರಿ ಶಿಖರ್​ ಧವನ್​ ಗಾಯಗೊಂಡಿದ್ದು, ನ್ಯೂಜಿಲ್ಯಾಂಡ್​ ಪ್ರವಾಸಕ್ಕೆ ಮಾತ್ರ ಮಯಾಂಕ್​ ಅಗರ್​ವಾಲ್​ರನ್ನು ಕಡೆಗಣಿಸಿ ಪೃಥ್ವಿ ಶಾರನ್ನು ಆಯ್ಕೆ ಮಾಡಿರುವುದೇ ಆಶ್ಚರ್ಯಕ್ಕೆ ಕಾರಣವಾಗಿದೆ.

ಪೃಥ್ವಿ ಶಾ-ಮಯಾಂಕ್​ ಅಗರ್​ವಾಲ್​
ಪೃಥ್ವಿ ಶಾ-ಮಯಾಂಕ್​ ಅಗರ್​ವಾಲ್​
author img

By

Published : Jan 23, 2020, 2:16 PM IST

ಮುಂಬೈ: ಭಾರತ ತಂಡ ಕಿವೀಸ್ ಪ್ರವಾಸ ಕೈಗೊಂಡಿದ್ದು ಗಾಯಾಳು ಧವನ್​ ಬದಲಿಗೆ ಯುವ ಆಟಗಾರ ಪೃಥ್ವಿ ಶಾರನ್ನು ಆಯ್ಕೆ ಮಾಡಿದೆ. ಆದರೆ ಅವರಿಗಿಂತ ಅನುಭವಿಯಾಗಿರುವ ಮಯಾಂಕ್​ರನ್ನು ಕಡೆಗಣಿಸಿರುವುದು ಆಶ್ಚರ್ಯವಾಗಿದೆ.

ಕರ್ನಾಟಕದ ಮಯಾಂಕ್​ ಅಗರ್​ವಾಲ್​ ಈ ಹಿಂದೆ ಶಿಖರ್​ ಧವನ್​ ಗಾಯಗೊಂಡ ಎರಡು ಸಂದರ್ಭದಲ್ಲಿ ತಂಡಕ್ಕೆ ಬದಲಿ ಆಟಗಾರನಾಗಿ ಸೇರಿಕೊಂಡಿದ್ದರು. ವಿಶ್ವಕಪ್​ನಲ್ಲಿ ಧವನ್​ ಗಾಯಗೊಂಡಾಗ ಅಂಬಾಟಿ ರಾಯುಡುರನ್ನು ಕಡೆಗಣಿಸಿದ್ದೇಕೆ ಎಂಬ ಪ್ರಶ್ನೆಗೆ ಬಿಸಿಸಿಐ ಆರಂಭಿಕನ ಸ್ಥಾನಕ್ಕೆ ಆರಂಭಿಕನನ್ನೇ ಆಯ್ಕೆಮಾಡಿದ್ದೇವೆ ಎಂದು ಉತ್ತರಿಸಿತ್ತು.

ಆದರೆ ಈ ಬಾರಿ ಶಿಖರ್​ ಧವನ್​ ಗಾಯಗೊಂಡಿದ್ದು, ನ್ಯೂಜಿಲ್ಯಾಂಡ್​ ಪ್ರವಾಸಕ್ಕೆ ಮಾತ್ರ ಮಯಾಂಕ್​ ಅಗರ್​ವಾಲ್​ರನ್ನು ಕಡೆಗಣಿಸಿ ಪೃಥ್ವಿ ಶಾರನ್ನು ಆಯ್ಕೆ ಮಾಡಿರುವುದೇ ಆಶ್ಚರ್ಯಕ್ಕೆ ಕಾರಣವಾಗಿದೆ. ಆದರೆಮಯಾಂಕ್​ ಅಗರ್​ವಾಲ್​ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಪೃಥ್ವಿ ಶಾಗಿಂತ ಅತ್ಯುತ್ತಮ ಅಂಕಿಅಂಶ ಹೊಂದಿದ್ದಾರೆ.

ಪೃಥ್ವಿ ಶಾ 21 ಲಿಸ್ಟ್​ ಎ ಪಂದ್ಯಗಳಲ್ಲಿ 44.25 ಸರಾರಸರಿಯಲ್ಲಿ 1195 ರನ್​ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 6 ಅರ್ಧಶತಕ ಸೇರಿದೆ. ಮಯಾಂಕ್​ ಅಗರ್​ವಾಲ್​ 81 ಲಿಸ್ಟ್​ ಎ ಪಂದ್ಯಗಳಲ್ಲಿ 50.11 ಸರಾಸರಿಯಲ್ಲಿ 3909ರನ್​ಗಳಿಸಿದ್ದಾರೆ. ಅವರು 15 ಅರ್ಧಶತಕ, 13 ಶತಕಗಳಿಸಿದ್ದಾರೆ. ಇನ್ನು ಮತ್ತೊಬ್ಬ ಉದಯೋನ್ಮುಖ ಬ್ಯಾಟ್ಸ್​ಮನ್​ ಶುಬ್ಮನ್​ ಗಿಲ್​ 53 ಏಕದಿನ ಪಂದ್ಯಗಳಲ್ಲಿ 47.53 ಸರಾಸರಿಯಲ್ಲಿ 2234 ರನ್​ಗಳಿಸಿದ್ದಾರೆ. ಇವರು 11 ಅರ್ಧಶತಕ ಹಾಗೂ 6 ಶತಕ ಸಿಡಿಸಿದ್ದಾರೆ.

ಈ ಮೂವರ ಅಂಕಿಅಂಶಗಳನ್ನು ಗಮನಿಸಿದರೆ ಮಯಾಂಕ್​ ಅಗರ್​ವಾಲ್​ ಸರಾಸರಿ, ರನ್​ಗಳಿಗೆ ಹಾಗೂ ಶತಕ-ಅರ್ಧಶತಗಳಲ್ಲಿ ಬಹಳ ಮುಂದಿದ್ದಾರೆ. ಇನ್ನು ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಹೆಚ್ಚುವರಿ ಆರಂಭಿಕನಾಗಿ ಆಯ್ಕೆಯಾಗಿರುವ ಪೃಥ್ವಿ ಶಾಗಿಂತ ಗಿಲ್​ ಹಾಗೂ ಮಯಾಂಕ್​ ಅಗರ್​ವಾಲ್​ ಮುಂದಿದ್ದಾರೆ. ಮಯಾಂಕ್​ಗೆ ಒಂದು ಅವಕಾಶವನ್ನು ನೀಡದೆ ಅವರ ಸಾಮರ್ಥ್ಯವನ್ನು ಪದೇ ಪದೇ ಬಿಸಿಸಿಐ ಕಡೆಗಣಿಸುತ್ತಿರುವುದು ಕ್ರೀಡಾಬಿಮಾನಿಗಳ ಅಸಮಧಾನಕ್ಕೆ ಕಾರಣವಾಗಿದೆ.

ಪೃಥ್ವಿ ಶಾ ಉತ್ತಮ ಬ್ಯಾಟ್ಸ್​ಮನ್​ ಎಂಬುದರಲ್ಲಿ ಎರುಡು ಮಾತಿಲ್ಲ. ಆದರೆ ಈ ಹಿಂದಿನ ಕಿವೀಸ್ ಪ್ರವಾಸದಲ್ಲಿ ಶುಬ್ಮನ್​ ಗಿಲ್​ ಭಾರತ ತಂಡದಲ್ಲಿದ್ದರು. ಇನ್ನು ಮಯಾಂಕ್​ ಅಗರ್​ವಾಲ್​ ಕೂಡ ವಿಶ್ವಕಪ್​ ತಂಡಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದರು. ಜೊತೆಗೆ ಇತ್ತೀಚೆಗೆ ಮುಗಿದ ವಿಂಡೀಸ್​ ವಿರುದ್ಧದ ಏಕದಿನ ತಂಡದಲ್ಲೂ ಅವಕಾಶ ಪಡೆದಿದ್ದರು. ಅಲ್ಲದೆ ಅವರು ಟೆಸ್ಟ್​ ತಂಡದ ಆರಂಭಿಕನಾಗಿ ಉತ್ತಮ ದಾಖಲೆ ಹೊಂದಿದ್ದಾರೆ. ಹಾಗಾಗಿ ಶಾ ಗಿಂತ ಮಯಾಂಕ್​ ಅಥವಾ ಗಿಲ್​ ಉತ್ತಮವಾದ ಆಯ್ಕೆಯಾಗಿತ್ತು ಎಂಬುದು ಕ್ರಿಕೆಟ್​ ತಜ್ಞರ ಅಭಿಮತವಾಗಿದೆ.

ಕಿವೀಸ್​ ಏಕದಿನ ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಪೃಥ್ವಿ ಶಾ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಕೇದಾರ್ ಜಾಧವ್

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.