ದುಬೈ : ಡೆಲ್ಲಿ ಕ್ಯಾಪಿಟಲ್ ತಂಡ 13ನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಟೂರ್ನಿಯಲ್ಲಿ ಆಡಿರು 5 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಸೋತಿರುವ ಡೆಲ್ಲಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಲೀಗ್ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದರೂ ಐಪಿಎಲ್ನ ಬೆಸ್ಟ್ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಅಜಿಂಕ್ಯಾ ರಹಾನೆಯವರಿಗೆ ಮಾತ್ರ ಇನ್ನು ಒಂದು ಪಂದ್ಯದಲ್ಲೂ ಆಡುವ ಅವಕಾಶ ನೀಡದಿರುವುದು ಚರ್ಚೆಗೀಡಾಗಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಡೆಲ್ಲಿಕ್ಯಾಪಿಟಲ್ಸ್ ಅಧಿಕಾರಿಯೊಬ್ಬರು, ತಂಡದ ಆರಂಭಿಕರಿಬ್ಬರು ಉತ್ತಮ ಲಯದಲ್ಲಿರುವುದರಿಂದ ರಹಾನೆ ಇನ್ನೂ ಸ್ವಲ್ಪದಿನ ಕಾಯಬೇಕಾಗುತ್ತದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಏನು ಹೇಳಲಾಗುತ್ತದೆಯೋ ಅದು ತಂಡದ ಆಯ್ಕೆಯ ಮಾನದಂಡವಾಗುವುದಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ರಹಾನೆ ಒಬ್ಬ ಅದ್ಭುತ ಆಟಗಾರ ಹಾಗೂ ಅವರ ಅನುಭವದಿಂದ ತಂಡಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಸಾಮಾನ್ಯ ವಿಷಯವೇನೆಂದ್ರೆ, ಶಿಖರ್ ಧವನ್ ಹಾಗೂ ಪೃಥ್ವಿ ಶಾ ಅದ್ಭುತ ಲಯದಲ್ಲಿದ್ದಾರೆ. ನಾವು ಕಳೆದ ಎರಡು ಸೀಸನ್ಗಳಿಂದ ಆಡುತ್ತಿರುವ ಆಟಗಾರರ ಮೇಲೆ ನಂಬಿಕೆಯಿಡಬೇಕು.
ಅಲ್ಲದೆ ಶಾ ಹಾಗೂ ಧವನ್ ನಮ್ಮ ತಂಡದ ಅತ್ಯುತ್ತಮ ಆಟಗಾರರು. ಹಾಗಾಗಿ, ಈ ಜೋಡಿ ಬ್ರೇಕ್ ಆಗದೆ ಏನನ್ನೂ ಫಿಕ್ಸ್ ಮಾಡಲು ಸಾಧ್ಯವಿಲ್ಲ. ಧವನ್ ಹಾಗೂ ಪೃಥ್ವಿ ಉತ್ತಮವಾಗಿ ಆಡುತ್ತಿರುವುದರಿಂದ ರಹಾನೆ ಇನ್ನಷ್ಟು ದಿನ ಕಾಯಬೇಕು ಎಂದು ಅಧಿಕಾರಿ ಎಎನ್‌ಐಗೆ ತಿಳಿಸಿದ್ದಾರೆ.
ಟೂರ್ನಿಯ ಮಧ್ಯೆ ಆಟಗಾರರನ್ನು ವರ್ಗಾವಣೆ ಮಾಡುವ ಅವಕಾಶವಿರುವುದರಿಂದ ರಹಾನೆಯನ್ನು ಬಿಟ್ಟುಕೊಡಬಹುದೇ? ಎಂದು ಕೇಳಿದ್ದಕ್ಕೆ, ನಾವು ರಹಾನೆಯನ್ನು ಟೂರ್ನಿ ಮಧ್ಯೆ ಬಿಟ್ಟುಕೊಡಲು ಕರೆ ತಂದಿಲ್ಲ, ಅವರು ಈಗಲೂ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಉತ್ತರಿಸಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಾದ್ರೂ ಆಡಿಸಬಹುದೇ ಎಂದು ಕೇಳಿದ್ದಕ್ಕೆ, ರಹಾನೆಯನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದರಿಂದ ಆತನಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದರೂ ಇದರ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.