ಮುಂಬೈ: ಭಾರತದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನನಗೆ ಮೈದಾನದ ಹೊರಗೆ ಹಾಗೂ ಒಳಗೆ ಹಾಗೂ ಹೊರಗೆ ಮಾರ್ಗದರ್ಶಕರಾಗಿದ್ದಾರೆ. ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅಭಿಪ್ರಾಯಪಟ್ಟಿದ್ದಾರೆ.
ಎಂ.ಎಸ್. ಧೋನಿ 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಕೊನೆಯ ಬಾರಿ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಇವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ದೆಹಲಿಯ ಯುವ ಬ್ಯಾಟ್ಸ್ಮನ್ ಡೆಲ್ಲಿ ಕ್ಯಾಪಿಟಲ್ ಜೊತಗೆ ನಡೆದ ಇನ್ಸ್ಟಾಗ್ರಾಮ್ ಲೈವ್ ಸಂವಾದದಲ್ಲಿ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಧೋನಿ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ರಿಷಭ್ ಪಂತ್ ತಿಳಿಸಿದ್ದಾರೆ. "ಧೋನಿ ನನಗೆ ಮಾರ್ಗದರ್ಶಕರಿದ್ದಂತೆ. ಅವರು ನನಗೆ ಮೈದಾನದೊಳಗೆ ಹಾಗು ಹೊರಗೆ ಸಹಾಯ ಮಾಡಿದ್ದಾರೆ. ನನಗೆ ಗೊಂದಲವಿರುವ ಕೆಲವು ವಿಚಾರಗಳನ್ನು ಅರ್ಥಮಾಡಿಸಿಕೊಡಲು ಅವರು ಪ್ರಯತ್ನಿಸುತ್ತಾರೆ. ಆದರೆ ಅವರ ಮೇಲೆ ಅವಲಂಬಿತನಾಗದಿರಲು ಪ್ರಯತ್ನಿಸುತ್ತಿದ್ದೇನೆ"ಎಂದಿದ್ದಾರೆ.
ಇನ್ನು ಧೋನಿ ತಮ್ಮ ಮೆಂಟರ್ ಮಾತ್ರವಲ್ಲದೆ ನನ್ನ ಫೇವರೇಟ್ ಬ್ಯಾಟಿಂಗ್ ಪಾರ್ಟ್ನರ್ ಕೂಡ ಆಗಿದ್ದಾರೆ. ನಾವು ಜೊತೆಯಾಗಿ ಬ್ಯಾಟಿಂಗ್ ನಡೆಸಲು ಕೆಲವು ಅವಕಾಶಗಳು ಸಿಕ್ಕಿವೆ. ಮಹಿ ಬಾಯ್ ಇದ್ದರೆ, ಎಲ್ಲವೂ ವಿಂಗಡಿಸಲ್ಪಟ್ಟಿರುತ್ತವೆ. ನೀವು ಅದನ್ನು ಅನುಸರಿಸಿದರೆ ಸಾಕು ಎಂದು ಪಂತ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ರೋಹಿತ್, ವಿರಾಟ್ರಂತಹ ಹಿರಿಯ ಆಟಗಾರರ ಜೊತೆ ಬ್ಯಾಟಿಂಗ್ ನಡೆಸಿದರೆ, ಅದೊಂದು ವಿಶೇಷ ಅನುಭವ ಸಿಗುತ್ತದೆ. ಅವರಿಂದ ಕೆಲವು ಮಾರ್ಗದರ್ಶನ ಪಡೆಯಬಹುದು ಎಂದು 22 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ತಿಳಿಸಿದ್ದಾರೆ.
ಧೋನಿ ಉತ್ತರಾಧಿಕಾರಿ ಎಂದೇ ಕರೆಸಿಕೊಂಡಿದ್ದ ರಿಷಭ್ ಪಂತ್ ಆರಂಭದಲ್ಲಿ ಅಬ್ಬರಿಸಿದರಾದರೂ ನಂತರ ಸಿಕ್ಕ ಹೆಚ್ಚಿನ ಅವಕಾಶಗಳನ್ನು ವ್ಯರ್ಥ ಮಾಡಿದರು. ಇವರ ವೈಫಲ್ಯದಿಂದ ಟೀಮ್ ಮ್ಯಾನೇಜ್ಮೆಂಟ್ ರಾಹುಲ್ರನ್ನು ಅನಿವಾರ್ಯವಾಗಿ ವಿಕೆಟ್ ಕೀಪಿಂಗ್ಗೆ ಆಯ್ಕೆ ಮಾಡಿದೆ.
ಆದರೆ ಯುವ ಆಟಗಾರನ ಬೆಂಬಲಕ್ಕೆ ನಿಂತಿರುವ ರೋಹಿತ್, ರೈನಾ ಅವರಂತಹ ಅನುಭವಿ ಆಟಗಾರರು, ಪಂತ್ ಇನ್ನು 20-21ರ ಯುವ ಆಟಗಾರ. ಆತನ ಮೇಲೆ ಒತ್ತಡ ಏರುವುದು ಬೇಡ. ಆತನ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೆಚ್ಚಿನ ಅವಕಾಶ ನೀಡಿದರೆ ಮುಂದೊಂದು ದಿನ ಯುವರಾಜ್ -ಸೆಹ್ವಾಗ್ರಂತಹ ಬ್ಯಾಟ್ಸ್ಮನ್ ಆಗಲಿದ್ದಾರೆ ಎಂದು ಹೇಳಿದ್ದರು.