ETV Bharat / sports

ಪೃಥ್ವಿ ಶಾ ಅದೊಂದು ಕೆಟ್ಟ ಸಿದ್ಧಾಂತ ಬದಲಾಯಿಸಿಕೊಂಡ್ರೆ ಭಾರತದ ಸೂಪರ್ ಸ್ಟಾರ್ ಆಗ್ತಾರೆ : ಪಾಂಟಿಂಗ್ ಭವಿಷ್ಯ - ಡೆಲ್ಲಿ ಕ್ಯಾಪಿಟಲ್ಸ್​ ಪೃಥ್ವಿ ಶಾ

ಫೃಥ್ವಿ ಶಾ ಕಳೆದ ಐಪಿಎಲ್​ನಲ್ಲಿ 13 ಪಂದ್ಯಗಳಿಂದ 2 ಅರ್ಧಶತಕಗಳ ಸಹಿತ 228 ರನ್​ ಗಳಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಧವನ್​, ಅಯ್ಯರ್, ಪಂತ್ ಹಾಗೂ ಬೌಲರ್​ಗಳ ಉತ್ತಮದ ಪ್ರದರ್ಶನದಿಂದ ಮೊದಲ ಬಾರಿಗೆ ಐಪಿಎಲ್ ಫೈನಲ್ ತಲುಪಿತ್ತು..

ಫೃಥ್ವಿ ಶಾ  -ರಿಕಿ ಪಾಂಟಿಂಗ್
ಫೃಥ್ವಿ ಶಾ -ರಿಕಿ ಪಾಂಟಿಂಗ್
author img

By

Published : Apr 5, 2021, 8:06 PM IST

ಮುಂಬೈ : ಭಾರತ ತಂಡದ ಯುವ ಬ್ಯಾಟ್ಸ್​ಮನ್​ರ ತರಬೇತಿ ಸಿದ್ಧಾಂತವನ್ನು ಬಹಿರಂಗಪಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಮುಂಬರುವ ಐಪಿಎಲ್​ಗೂ ಮುನ್ನ ತರಬೇತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಆತ ಅತ್ಯುತ್ತಮ ಬ್ಯಾಟ್ಸ್​ಮನ್ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ಆವೃತ್ತಿಗಳಿಂದ ಡೆಲ್ಲಿ ತಂಡದ ಕೋಚ್​ ಆಗಿರುವ ರಿಕಿ ಪಾಂಟಿಂಗ್ 21 ವರ್ಷದ ಪೃಥ್ವಿ ಶಾರನ್ನು ತುಂಬಾ ಹತ್ತಿರದಿಂದ ನೋಡಿದ್ದಾರೆ. ಶಾ ಪಂದ್ಯಗಳಲ್ಲಿ ರನ್​ಗಳಿಸದ ಸಂದರ್ಭದಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ತಿರಸ್ಕರಿಸುತ್ತಿದ್ದರು ಎಂದು ಪಾಂಟಿಂಗ್ ತಿಳಿಸಿದ್ದಾರೆ.

ಆತ(ಪೃಥ್ವಿ ಶಾ) ಕಳೆದ ವರ್ಷ ತನ್ನ ಬ್ಯಾಟಿಂಗ್​ನಲ್ಲಿ ಆಸಕ್ತಿಕರ ಸಿದ್ಧಾಂತವನ್ನು ಹೊಂದಿದ್ದ. ಯಾವಾಗ ರನ್​ಗಳಿಸುವುದಿಲ್ಲವೋ, ಹಾಗೆಲ್ಲಾ ನೆಟ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಅದೇ ರೀತಿ ಪಂದ್ಯದಲ್ಲಿ ಉತ್ತಮ ರನ್​ಗಳಿಸಿದರೆ ಎಲ್ಲಾ ಸಮಯದಲ್ಲೂ ಬ್ಯಾಟಿಂಗ್ ಮಾಡುತ್ತಿದ್ದ" ಎಂದು ಕ್ರಿಕೆಟ್ ಡಾಟ್​ ಕಾಮ್​ಗೆ ನೀಡಿದ ಸಂದರ್ಶನದಲ್ಲಿ ಪಾಂಟಿಂಗ್ ತಿಳಿಸಿದ್ದಾರೆ.

ಇದನ್ನು ಓದಿ:ಡಿಲ್ಲಿ ಕ್ಯಾಪಿಟಲ್ಸ್​ ನಾಯಕತ್ವವು ರಿಷಬ್​ ಪಂತ್​ನನ್ನು ಅತ್ಯುತ್ತಮ ಕ್ರಿಕೆಟಿಗನಾಗಿಸುತ್ತೆ: ರಿಕಿ ಪಾಂಟಿಂಗ್ ವಿಶ್ವಾಸ

ಶಾ ಕಳೆದ ಆವೃತ್ತಿಯಲ್ಲಿ 4 ಅಥವಾ 5 ಪಂದ್ಯಗಳಲ್ಲಿ 10 ರನ್​ಗಳಿಗಿಂತ ಕಡಿಮೆ ರನ್ ಗಳಿಸಿ ಔಟಾಗಿದ್ದ. ನಾನು ಅವನಿಗೆ ನೆಟ್ಸ್​ಗೆ ಹೋಗಿ ಕೆಲಸ ಮಾಡಬೇಕೆಂದರೆ, ಆತ ನನ್ನತ್ತ ನೋಡಿ, ಇಲ್ಲ, ನಾನು ಈ ದಿನ ಬ್ಯಾಟಿಂಗ್ ಮಾಡಲ್ಲ, ನನ್ನಿಂದ ಅದು ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ತಿಳಿಸಿದ್ದಾರೆ.

"ನನ್ನ ಪ್ರಕಾರ ಅವರು ಬದಲಾಗಿರಬಹುದು, ಕಳೆದ ಕೆಲವು ತಿಂಗಳುಗಳಿಂದ ಅವರು ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆಂದು ನನಗೆ ತಿಳಿದಿದೆ, ತನ್ನ ಬ್ಯಾಟಿಂಗ್ ಸಿದ್ಧಾಂತವನ್ನು ಬದಲಾಯಿಸಿಕೊಂಡಿದ್ದರೆ ಆಶಾದಾಯಕ ಎಂದು ಭಾವಿಸುತ್ತೇನೆ. ಯಾಕೆಂದರೆ, ನಾವು ಇಲ್ಲಿ ಅವರಿಂದ ಉತ್ತಮವಾದದ್ದನ್ನು ಪಡೆಯಲು ಸಾಧ್ಯವಾದರೆ, ಅವನು ಭಾರತದ ಭವಿಷ್ಯದ ಸೂಪರ್ ಸ್ಟಾರ್​ ಪ್ಲೇಯರ್ ಆಗಬಹುದು" ಎಂದಿದ್ದಾರೆ.

ನನ್ನ ಪ್ರಕಾರ ಆತನ ತರಬೇತಿ ಕೌಶಲ್ಯ ಬದಲಾಗಬೇಕು. ಯಾಕೆಂದರೆ, ಅವನು ಕೇವಲ ಡೆಲ್ಲಿ ಕ್ಯಾಪಿಟಲ್ಸ್​ಗೆ ಮಾತ್ರ ಸೀಮಿತವಲ್ಲ. ಆತ ಭಾರತಕ್ಕಾಗಿ ಸಾಕಷ್ಟು ಪಂದ್ಯಗಳನ್ನು ಆಡುವುದನ್ನು ನೀವೆಲ್ಲಾ ನೋಡುತ್ತೀರಾ ಎಂದು ನಾನು ಖಚಿತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಫೃಥ್ವಿ ಶಾ ಕಳೆದ ಐಪಿಎಲ್​ನಲ್ಲಿ 13 ಪಂದ್ಯಗಳಿಂದ 2 ಅರ್ಧಶತಕಗಳ ಸಹಿತ 228 ರನ್​ಗಳಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಧವನ್​, ಅಯ್ಯರ್, ಪಂತ್ ಹಾಗೂ ಬೌಲರ್​ಗಳ ಉತ್ತಮದ ಪ್ರದರ್ಶನದಿಂದ ಮೊದಲ ಬಾರಿಗೆ ಐಪಿಎಲ್ ಫೈನಲ್ ತಲುಪಿತ್ತು.

ಇದನ್ನು ಓದಿ : IPL 2021: ಡೆಲ್ಲಿ ಕ್ಯಾಪಿಟಲ್ಸ್​ ನಾಯಕನಾಗಿ ಬಡ್ತಿ ಪಡೆದ ರಿಷಭ್‌ ಪಂತ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.