ETV Bharat / sports

ಜಗದೀಶನ್ ಅವರಲ್ಲಿಲ್ಲದ 'ಸ್ಪಾರ್ಕ್' ಜಾಧವ್​-ಚಾವ್ಲಾರಲ್ಲಿದೆಯೇ?: ಧೋನಿ ಹೇಳಿಕೆಗೆ ಶ್ರೀಕಾಂತ್​ ಕಿಡಿ - ಕೆದಾರ್ ಜಾಧವ್​ ನ್ಯೂಸ್

ಚೆನ್ನೈ ಸೂಪರ್​ ಕಿಂಗ್ಸ್ ತಂಡ 2020ರ ಐಪಿಎಲ್​ ಆವೃತ್ತಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ 7 ಸೋಲು ಹಾಗೂ 3 ಗೆಲುವು ಪಡೆದು ಕೊನೆಯ ಸ್ಥಾನದಲ್ಲಿದೆ. ಆದರೂ ಧೋನಿ ಯುವ ಆಟಗಾರರಿಗೆ ಅವಕಾಶ ನೀಡದೆ ಟೂರ್ನಿಯುದ್ದಕ್ಕೂ ಕೇದಾರ್ ಜಾಧವ್​ ಹಾಗೂ ಪಿಯೂಷ್​ ಚಾವ್ಲಾ ಅವರಿಗೆ ಅವಕಾಶ ನೀಡುತ್ತಿರುವುದಕ್ಕೆ ಮಾಜಿ ಕ್ರಿಕೆಟಿಗ ಶ್ರೀಕಾಂತ್ ಟೀಕಿಸಿದ್ದಾರೆ.

ಎಂಎಸ್ ಧೋನಿ
ಎಂಎಸ್ ಧೋನಿ
author img

By

Published : Oct 20, 2020, 4:16 PM IST

ನವದೆಹಲಿ: 13ನೇ ಐಪಿಎಲ್​ನಲ್ಲಿ ಹೀನಾಯ ಪ್ರದರ್ಶನ ತೋರುತ್ತಿದ್ದರೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಯ್ಕೆ ವಿಚಾರದಲ್ಲಿ ನಾಯಕ ಎಂ.ಎಸ್.ಧೋನಿಯ ಮಂತ್ರವನ್ನು ಮಾಜಿ ಕ್ರಿಕೆಟಿಗ ಕ್ರಿಸ್​ ಶ್ರೀಕಾಂತ್​ ಟೀಕಿಸಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್ ತಂಡ 2020ರ ಐಪಿಎಲ್​ ಆವೃತ್ತಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ 7 ಸೋಲು ಹಾಗೂ 3 ಗೆಲುವು ಪಡೆದು ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೂ ಧೋನಿ ಯುವ ಆಟಗಾರರಿಗೆ ಅವಕಾಶ ನೀಡದೆ ಟೂರ್ನಿಯುದ್ದಕ್ಕೂ ಕೇದಾರ್ ಜಾಧವ್​ ಹಾಗೂ ಪಿಯೂಷ್​ ಚಾವ್ಲಾ ಅವರಿಗೆ ಅವಕಾಶ ನೀಡುತ್ತಿರುವುದನ್ನು ಟೀಕಿಸಿದ್ದಾರೆ.

"ಆಯ್ಕೆಯ ವಿಚಾರದಲ್ಲಿ ಧೋನಿ ನಿಲುವುಗಳೇನು? ಎನ್​.ಜಗದೀಶನ್ ಅವರಲ್ಲಿ 'ಸ್ಪಾರ್ಕ್'​ ಕಾಣುತ್ತಿಲ್ಲ ಎಂದು ಹೇಳುತ್ತಾರೆ. ಆದರೆ ಜಾಧವ್ ಅವ​ರಲ್ಲಿ ಅವರು ಸ್ಪಾರ್ಕ್ ಕಾಣುತ್ತಿದ್ದಾರೆಯೇ? ಇದು ನಿಜಕ್ಕೂ ಹಾಸ್ಯಾಸ್ಪದ. ಧೋನಿ ಅವರ ಈ ಉತ್ತರವನ್ನು ನಾನು ಸ್ವೀಕರಿಸುವುದಿಲ್ಲ. ಟೂರ್ನಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತನ್ನಿಂದ ತಾನೇ ಮುಗಿಸಿಕೊಂಡಿದೆ" ಎಂದು ​ ಶ್ರೀಕಾಂತ್,​ ಧೋನಿ ಹೇಳಿಕೆಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.​

ಧೋನಿ ರಾಜಸ್ಥಾನದ ವಿರುದ್ಧದ ಪಂದ್ಯದ ನಂತರ ಯುವ ಆಟಗಾರರಿಗೆ ಅವಕಾಶ ನೀಡದ ಕಾರಣವಾಗಿ ಮಾತನಾಡುತ್ತಾ, "ಯುವ ಆಟಗಾರರಲ್ಲಿ ನನಗೆ ಯಾವುದೇ ಸ್ಪಾರ್ಕ್​ ಅಥವಾ ತುಡಿತ ಕಾಣುತ್ತಿಲ್ಲ" ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ಸಹ ಕಿಡಿಕಾರಿದ್ದರು.

ನಾನು ಧೋನಿಯ ಈ ಮಾತನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದಿರುವ ಶ್ರೀಕಾಂತ್, ಅವರು(ಧೋನಿ) ಮಾತನಾಡುವ ಪ್ರಕ್ರಿಯೆಯೇ ಅರ್ಥಹೀನವಾಗಿದೆ. ಅವರ ಆಯ್ಕೆ ಪ್ರಕ್ರಿಯೆ ತಪ್ಪಾಗಿದೆ. ಜಾಧವ್, ಪಿಯೂಷ್ ಚಾವ್ಲಾ ಅವರಂತ ಹಿರಿಯ ಆಟಗಾರರು ಆಡಲಿಲ್ಲ. ಅವರಿಗೆ 15 ಕೋಟಿ ರೂ. ನೀಡಿ ಖರೀದಿಸಿರುವುದೆಲ್ಲಾ ವ್ಯರ್ಥವಾಗಿದೆ ಎಂದು ಹೇಳಿದ್ದಾರೆ.

"ಎಂಎಸ್‌ ಧೋನಿ ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರು ಶ್ರೇಷ್ಠ ನಾಯಕ, ಆದರೆ, ಆಯ್ಕೆ ಪ್ರಕ್ರಿಯೆ ವಿಷಯ ಬಂದಾಗ ಅವರ ನಿಲುವುಗಳನ್ನು ಒಪ್ಪಲು ಸಾಧ್ಯವಿಲ್ಲ" ಎಂದು ಶ್ರೀಕಾಂತ್‌ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.