ETV Bharat / sports

ಬುಮ್ರಾ, ಶಮಿ ಜುಗಲ್​ ಬಂದಿಗೆ ತತ್ತರಿಸಿದ ವಿಂಡೀಸ್.. ಫಾಲೋ ಆನ್​ ಹೇರದ ಭಾರತಕ್ಕೆ ಆರಂಭಿಕ ಆಘಾತ.. - ಭಾರತ- ವೆಸ್ಟ್​ ಇಂಡೀಸ್​ 2ನೇ ಟೆಸ್ಟ್​

ಭಾನುವಾರ 7 ವಿಕೆಟ್​ಗೆ 87 ರನ್​ಗಳಿಂದ 3ನೇ ದಿನದ ಆಟ ಮುಂದುವರಿಸಿದ ವೆಸ್ಟ್​ ಇಂಡೀಸ್​​ ತಂಡದ ಬ್ಯಾಟ್ಸ್​ಮ್ಯಾನ್​ಗಳು ಭಾರತದ ಮಾರಕ ದಾಳಿಯ ಎದುರು ರನ್​ ಗಳಿಸಲು ಪರದಾಡಿದರು. ಜಹ್ಮರ್​ ಹ್ಯಾಮಿಲ್ಟನ್​ 5, ರಹಕೀಮ್​ ಕಾರ್ನ್​ವಾಲ್​ 14, ಕೆಮರ್​ ರೋಚ್​ 17 ತಂಡದ ಮೊತ್ತ ಮೂರಂಕಿ ದಾಟಿಸುವಲ್ಲಿ ಶ್ರಮಿಸಿದರು.

ಸಾಂದರ್ಭಿಕ ಚಿತ್ರ
author img

By

Published : Sep 1, 2019, 11:49 PM IST

ಕಿಗ್​ಸ್ಟನ್​: ವೇಗಿ ಜಸ್ಪ್ರೀತ್​ ಬುಮ್ರಾ ಹಾಗೂ ಮೊಹ್ಮದ್​ ಅವರ ಮಾರಕ ಬೌಲಿಂಗ್​ ದಾಳಿ​ಗೆ ಸಿಲುಕಿದ ವೆಸ್ಟ್​ ಇಂಡೀಸ್​ 2ನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟದಲ್ಲಿ 117 ರನ್​ಗೆ ಸರ್ವಪತನವಾಯಿತು.

ಭಾನುವಾರ 7 ವಿಕೆಟ್​ಗೆ 87 ರನ್​ಗಳಿಂದ 3ನೇ ದಿನದ ಆಟ ಮುಂದುವರಿಸಿದ ವಿಂಡೀಸ್​ ತಂಡದ ಬ್ಯಾಟ್ಸ್​ಮ್ಯಾನ್​ಗಳು ಭಾರತದ ಮಾರಕ ದಾಳಿಯ ಎದುರು ರನ್​ ಗಳಿಸಲು ಪರದಾಡಿದರು. ಜಹ್ಮರ್​ ಹ್ಯಾಮಿಲ್ಟನ್​ 05, ರಹಕೀಮ್​ ಕಾರ್ನ್​​ವಅಲ್​ 14, ಕೆಮರ್​ ರೋಚ್​ 17 ತಂಡದ ಮೊತ್ತ ಮೂರಂಕಿ ಸಾಟಿಸುವಲ್ಲಿ ಶ್ರಮಿಸಿದರು. ವೇಗಿ ಜಸ್ಪ್ರೀತ್​ ಬುಮ್ರಾ ಹ್ಯಾಟ್ರಿಕ್​ ಸೇರಿದಂತೆ 6 ವಿಕೆಟ್​ ಪಡೆದರು. ಶಮಿ 2 ಹಾಗೂ ಇಶಾಂತ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್​ ಕಬಳಿಸಿದರು.

ಭಾರತದ ಫಾಲೋ ಆನ್ ಹೇರದೆ ಎರಡನೇ ಇನ್ನಿಂಗ್ಸ್​ ಆರಂಭಿಸಿದೆ. ಆರಂಭಿಕ ಮಯಾಂಕ್​ ಅಗರ್​ವಾಲ್​ 4 ರನ್​ ಗಳಿಸಿ ರೋಚ್​ ಎಸೆತದಲ್ಲಿ ಎಲ್​ಬಿಡಬ್ಲ್ಯೂಗೆ ಬಲಿಯಾದರು. ಲೋಕೇಶ್​ ರಾಹುಲ್​ 6ರನ್ ಪೇರಿಸಿ ಹ್ಯಾಮಿಲ್ಟನ್ ಕ್ಯಾಚ್​ ನೀಡಿ ರೋಚ್​ಗೆ ವಿಕೆಟ್​ ಒಪ್ಪಿಸಿದರು. ಚೇತೇಶ್ವರ ಪೂಜಾರ (19) ರನ್​ ಹಾಗೂ ನಾಯಕ ವಿರಾಟ್​ ಕೊಹ್ಲಿ (0) ರನ್​ ಗಳಿಸಿ ಆಡುತ್ತಿದ್ದಾರೆ. ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 36 ರನ್​ ಗಳಿಸಿ 2 ವಿಕೆಟ್​ ಕಳೆದುಕೊಂಡಿದ್ದು, 335 ರನ್​​ಗಳ ಮುನ್ನಡೆ ಸಾಧಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.