ETV Bharat / sports

ಇಂಗ್ಲೆಂಡ್​ ವಿರುದ್ಧ ಬಯೋ ಸೆಕ್ಯೂರ್​ ತಾಣದಲ್ಲಿ ಸರಣಿ ನಡೆಸಲು ವೆಸ್ಟ್​ ಇಂಡೀಸ್​ ಒಪ್ಪಿಗೆ - ಬಯೋ ಸೆಕ್ಯೂರ್​ ತಾಣದಲ್ಲಿ ಕ್ರಿಕೆಟ್​ ಸರಣಿ

ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಳ್ಳಲು ಮುಂದಿನ ತಿಂಗಳು ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ಕೊರೊನಾ ವೈರಸ್​ ಭೀತಿಯಿಂದ ಜುಲೈ ತಿಂಗಳಿಗೆ ಮುಂದೂಡಲಾಗಿತ್ತು. ಇದೀಗ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಿದ್ದು, ಇದಕ್ಕೆ ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ ಕೂಡ ಒಪ್ಪಿಗೆ ಸೂಚಿಸಿದೆ.

ವೆಸ್ಟ್​ ಇಂಡೀಸ್​-ಇಂಗ್ಲೆಂಡ್​
ವೆಸ್ಟ್​ ಇಂಡೀಸ್​-ಇಂಗ್ಲೆಂಡ್​
author img

By

Published : May 30, 2020, 5:00 PM IST

ನವದೆಹಲಿ: ಕೊರೊನಾ ವೈರಸ್​ ಭೀತಿಯಿಂದ ಕಳೆದ ಮೂರು ತಿಂಗಳಿಂದ ಎಲ್ಲ ಕ್ರೀಡೆಗಳು ಸ್ಥಗಿತಗೊಂಡಿವೆ. ಆದರೆ, ಕೊರೊನಾ ಭೀತಿ ಕಡಿಮೆಯಾಗಿರುವುದರಿಂದ ಎಲ್ಲ ಕ್ರೀಡೆಗಳು ಪುನಾರಂಭವಾಗುವ ನಿರೀಕ್ಷೆಯಲ್ಲಿವೆ. ಈಗಾಗಲೆ ಕೆಲವು ಫುಟ್ಬಾಲ್​​ ಲೀಗ್​ ಮುಂದಿನ ತಿಂಗಳಿನಿಂದ ಆರಂಭವಾಗಲಿವೆ. ಇದೀಗ ಕ್ರಿಕೆಟ್​ ಕೂಡ ಪುನರಾರಂಭ ಪಡೆಯಲಿದ್ದು, ಇಂಗ್ಲೆಂಡ್​ ವಿರುದ್ಧದ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಳ್ಳಲು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ ಒಪ್ಪಿಗೆ ಸೂಚಿಸಿದೆ.

ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಳ್ಳಲು ಮುಂದಿನ ತಿಂಗಳು ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ಕೊರೊನಾ ವೈರಸ್​ ಭೀತಿಯಿಂದ ಜುಲೈ ತಿಂಗಳಿಗೆ ಮುಂದೂಡಲಾಗಿತ್ತು. ಇದೀಗ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಿದ್ದು, ಇದಕ್ಕೆ ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ ಕೂಡ ಒಪ್ಪಿಗೆ ಸೂಚಿಸಿದೆ.

ಮುಂಬರುವ ಇಂಗ್ಕೆಂಡ್​ ಪ್ರವಾಸಕ್ಕೆ ಮಂಡಳಿಯು ತಾತ್ವಿಕ ಅನುಮೋದನೆ ನೀಡಿದೆ. ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿಯ ವೈದ್ಯಕೀಯ ಸಿಬ್ಬಂದಿ ಮತ್ತು ಸಲಹೆಗಾರರು ಇಂಗ್ಲೆಂಡ್​ ಮತ್ತು ವೇಲ್ಸ್ ಕ್ರಿಕೆಟ್​ ಮಂಡಳಿಯ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಲಹೆಗಾರರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದ ನಂತರ ಪ್ರವಾಸಕ್ಕೆ ಒಪ್ಪಿಗೆ ನೀಡಿರುವುದಾಗಿ ವಿಂಡೀಸ್ ಕ್ರಿಕೆಟ್​ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಆಟಗಾರರು ಮತ್ತು ಸಿಬ್ಬಂದಿಯನ್ನ ಜೈವಿಕ ಸುರಕ್ಷಿತ (ಬಯೋ ಸೆಕ್ಯೂರ್​) ವಾತಾವರಣದಲ್ಲಿ ಇರಿಸಲು ಯೋಜನೆಗಳನ್ನು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಇಸಿಬಿಯಿಂದ ಸ್ವೀಕರಿಸಿದೆ ಮತ್ತು ಪರಿಶೀಲಿಸಿದೆ. ಈ ಸರಣಿಯ ಎಲ್ಲ ಪಂದ್ಯಗಳನ್ನು ಬಯೋ ಸೆಕ್ಯೂರ್​ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೇ ನಡೆಸಲಾಗುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜುಲೈನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿ ಮುಗಿಯುತ್ತಿದ್ದಂತೆ ಇಂಗ್ಲೆಂಡ್​​​​ ಮತ್ತು ಕ್ರಿಕೆಟ್ ಮಂಡಳಿ ಪಾಕಿಸ್ತಾನದ ವಿರುದ್ಧ ಮೂರು ಟೆಸ್ಟ್​ ಪಂದ್ಯಗಳನ್ನು ಆಡಲಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಇಂಗ್ಲೆಂಡ್​ ಆಟಗಾರರು ಶುಕ್ರವಾರ ತರಬೇತಿ ಆರಂಭಿಸಿದ್ದಾರೆ. ಇಸಿಬಿ 55 ಆಟಗಾರರನ್ನು ಆಯ್ಕೆ ಮಾಡಿದ್ದು, ಇವರೆಲ್ಲರೂ ಈಗಾಗಲೆ ತರಬೇತಿ ಪಡೆಯುತ್ತಿದ್ದಾರೆ.

ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳುವ ವೆಸ್ಟ್​ ಇಂಡೀಸ್ ಕ್ರಿಕೆಟಿಗರು ಹಾಗೂ ಸಿಬ್ಬಂದಿ ಮೆಡಿಕಲ್‌ ಸ್ಕ್ರೀನಿಂಗ್‌ ಹಾಗೂ ಕೋವಿಡ್‌-19 ಟೆಸ್ಟ್‌ಗೆ ಒಳಪಡಿಸಲಾಗುತ್ತದೆ. ಇನ್ನು ಈ ಪ್ರವಾಸಕ್ಕೆ ಖಾಸಗಿ ವಿಮಾನವನ್ನು ಬಳಸಿಕೊಳ್ಳಲಾಗುವುದು ಎಂದು ವಿಂಡೀಸ್​ ಕ್ರಿಕೆಟ್​ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.