ETV Bharat / sports

ಆಸ್ಟ್ರೇಲಿಯಾ ಆಟಗಾರರು ನಮ್ಮನ್ನು ಲಿಫ್ಟ್ ಒಳಕ್ಕೆ ಸೇರಿಸುತ್ತಿರಲಿಲ್ಲ: ಅಶ್ವಿನ್ - ಆಸ್ಟ್ರೇಲಿಯಾ vs ಭಾರತ ಟೆಸ್ಟ್ ಸರಣಿ

ಒಂದೇ ಬಯೋ ಬಬಲ್​​ನಲ್ಲಿ ಇದ್ದರೂ ಆಸ್ಟ್ರೇಲಿಯಾ ಆಟಗಾರರು ಭಾರತದ ಆಟಗಾರರನ್ನು ಲಿಫ್ಟ್ ಒಳಕ್ಕೆ ಸೇರಿಸುತ್ತಿರಲಿಲ್ಲ ಎಂದು ಟೀಂ ಇಂಡಿಯಾ ಆಟಗಾರರ ಆರ್​.ಆಶ್ವಿನ್ ಹೇಳಿದ್ದಾರೆ.

Ravichandran Ashwin
ಆರ್​.ಆಶ್ವಿನ್
author img

By

Published : Jan 25, 2021, 8:17 AM IST

ಹೈದರಾಬಾದ್: ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಆಟಗಾರರೊಂದಿಗೆ ಲಿಫ್ಟ್ ಒಳಗೆ ಪ್ರವೇಶಿಸಲು ಭಾರತೀಯ ಆಟಗಾರರಿಗೆ ಅವಕಾಶ ನೀಡಲಿಲ್ಲ ಎಂದು ರವಿಚಂದ್ರನ್ ಅಶ್ವಿನ್ ಬಹಿರಂಗಪಡಿಸಿದ್ದಾರೆ.

ಭಾರತದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರೊಂದಿಗೆ ಮಾತುಕತೆ ನಡೆಸಿರುವ ವಿಡಿಯೋವನ್ನು ಆರ್​.ಅಶ್ವಿನ್ ಯೂಟ್ಯೂಬ್​ನಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ನಾವು ಸಿಡ್ನಿಗೆ ತಲುಪಿದ ನಂತರ ಅವರು ನಮ್ಮನ್ನು ತೀವ್ರ ನಿರ್ಬಂಧಗಳಿಂದ ಬಂಧಿಸಿದರು. ಸಿಡ್ನಿಯಲ್ಲಿ ಒಂದು ವಿಶಿಷ್ಟವಾದ ಘಟನೆ ನಡೆದಿತ್ತು. ಇದು ನಿಜಕ್ಕೂ ವಿಚಿತ್ರವಾದದ್ದು. ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಒಂದೇ ಬಯೋ ಬಬಲ್​ನಲ್ಲಿ ಇದ್ದೆವು. ಆದರೆ ಆಸ್ಟ್ರೇಲಿಯಾದ ಆಟಗಾರರು ಲಿಫ್ಟ್‌ನಲ್ಲಿದ್ದಾಗ ಅದರೊಳಗೆ ಭಾರತೀಯ ಆಟಗಾರರನ್ನು ಅನುಮತಿಸುತ್ತಿರಲಿಲ್ಲ"ಎಂದಿದ್ದಾರೆ.

  • " class="align-text-top noRightClick twitterSection" data="">

"ಆ ಸಮಯದಲ್ಲಿ ನಾವು ತುಂಬಾ ಕೆಟ್ಟ ಅನುಭವವಾಯಿತು. ನಾವು ಒಂದೇ ಬಯೋ ಬಬಲ್​ನಲ್ಲಿ ಇದ್ದೆವು, ಆದರೆ ನೀವು ಲಿಫ್ಟ್‌ಗೆ ಹೋಗುತ್ತೀರಿ ಮತ್ತು ಅದೇ ಗುಳ್ಳೆಯಲ್ಲಿ ಉಳಿದುಕೊಂಡಿರುವ ಇನ್ನೊಬ್ಬ ವ್ಯಕ್ತಿಯೊಂದಿಗೆ ನೀವು ಜಾಗವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಜೀರ್ಣಿಸಿಕೊಳ್ಳಲು ನಮಗೆ ತುಂಬಾ ಕಷ್ಟವಾಯಿತು" ಎಂದು ಹೇಳಿದ್ದಾರೆ.

ಅಲ್ಲಿನ ಕಠಿಣ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಬ್ರಿಸ್ಬೇನ್‌ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲು ಭಾರತ ಹಿಂಜರಿಯುತ್ತಿದೆ ಎಂಬ ವರದಿಗಳು ಬಂದವು. ಆಟಗಾರರು ಹೋಟೆಲ್-ಮೈದಾನ-ಹೋಟೆಲ್ ಇದೇ ದಿನಚರಿಯಲ್ಲಿ ಉಳಿಯುವಂತೆ ಮಾಡಿದರು. ಆದಾಗ್ಯೂ, ಭಾರತ ಗಬ್ಬಾ ಮೈದಾನದಲ್ಲಿ ಆಡಿ 32 ವರ್ಷಗಳಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಮೊದಲ ತಂಡವಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.