ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ಬಾಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್ ಅಂತರದ ಸೋಲು ಕಂಡಿದೆ.
-
The 10-wicket loss was 🇮🇳's first defeat in the ICC World Test Championship 🏆 #NZvIND pic.twitter.com/FletOSBASs
— ICC (@ICC) February 24, 2020 " class="align-text-top noRightClick twitterSection" data="
">The 10-wicket loss was 🇮🇳's first defeat in the ICC World Test Championship 🏆 #NZvIND pic.twitter.com/FletOSBASs
— ICC (@ICC) February 24, 2020The 10-wicket loss was 🇮🇳's first defeat in the ICC World Test Championship 🏆 #NZvIND pic.twitter.com/FletOSBASs
— ICC (@ICC) February 24, 2020
ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತ್ತು. ನಾಲ್ಕನೇ ದಿನದಾಟದಲ್ಲಿ 39 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಮುಂದುವರೆಸಿದ ಭಾರತ ಕೆಲ ಓವರ್ಗಳಲ್ಲೇ ಆಲೌಟ್ (191/10) ಆದ ಕಾರಣ ಕೇವಲ 8 ರನ್ಗಳ ಲೀಡ್ ಪಡೆಯಿತು. ಮೂರನೇ ದಿನದ ಅಂತ್ಯಕ್ಕೆ ಕ್ರೀಸ್ನಲ್ಲಿದ್ದ ಅಜಿಂಕ್ಯ ರಹಾನೆ (29) ಹಾಗೂ ಹನುಮ ವಿಹಾರಿ (15) ಇಂದು ಬೇಗ ಔಟ್ ಆದರು. ಬಳಿಕ ರಿಷಬ್ ಪಂತ್ 25 ರನ್ ಬಾರಿಸಿದ್ದರಿಂದ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಇನ್ನುಳಿದಂತೆ ಆರ್. ಅಶ್ವಿನ್ 4, ಇಶಾಂತ್ ಶರ್ಮಾ 12, ಮೊಹಮದ್ ಶಮಿ 2* ಹಾಗೂ ಜಸ್ಪ್ರೀಪ್ ಬುಮ್ರಾ ಶೂನ್ಯಕ್ಕೆ ಔಟ್ ಆದರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 5, ಟ್ರೆಂಟ್ ಬೌಲ್ಟ್ 4 ಹಾಗೂ ಗ್ರಾಂಡೋಮ್ 1 ವಿಕೆಟ್ ಪಡೆದರು.
ಬಳಿಕ ಗೆಲುವಿಗೆ ಅಗತ್ಯವಿದ್ದ 9 ರನ್ಗಳನ್ನು ವಿಕೆಟ್ ನಷ್ಟವಿಲ್ಲದೆ ಬಾರಿಸಿದ ಕಿವೀಸ್ ಗೆಲುವಿನ ಕೇಕೆ ಹಾಕಿತು. ಅಲ್ಲದೆ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 165 ರನ್ಗಳಿಗೆ ಆಲೌಟ್ ಆಗಿತ್ತು. ಬಳಿಕ ನ್ಯೂಜಿಲೆಂಡ್ 348 ರನ್ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತ್ತಲ್ಲದೆ, 183 ರನ್ಗಳ ಮುನ್ನಡೆ ಸಾಧಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್ನಲ್ಲೂ ವೈಫಲ್ಯ ಅನುಭವಿಸಿದ ಕೊಹ್ಲಿ ಪಡೆ 191 ರನ್ಗೆ ಸರ್ವಪತನ ಕಂಡು ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳಿಂದ ಮುಖಭಂಗ ಅನುಭವಿಸಿದೆ.
ಟೆಸ್ಟ್ ಚಾಂಪಿಯನ್ಷಿಪ್ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕೊಹ್ಲಿ ಪಡೆಗೆ ಇದು ಮೊದಲ ಸೋಲಾಗಿದೆ. ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ಫೆ.28ರಿಂದ ಆರಂಭಗೊಳ್ಳಲಿದ್ದು, ಸರಣಿ ಸೋಲು ತಪ್ಪಿಸಿಕೊಳ್ಳಲು ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ.