ಲಂಡನ್: 2008ರ ಅಂಡರ್-19 ವಿಶ್ವಕಪ್ನಲ್ಲಿ ನಾನು ಮತ್ತು ಕೇನ್ ವಿಲಿಯಮ್ಸನ್ ನಾಯಕತ್ವದ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಇದೀಗ ನಾವಿಬ್ಬರು ಹಿರಿಯ ತಂಡದ ಕ್ಯಾಪ್ಟನ್ಗಳಾಗಿದ್ದು, ಮತ್ತೊಮ್ಮೆ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗುತ್ತಿದ್ದೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಾಳೆ ಭಾರತ-ನ್ಯೂಜಿಲ್ಯಾಂಡ್ ತಂಡಗಳ ನಡುವೆ ವಿಶ್ವಕಪ್ನ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ವಿರಾಟ್ ಕೊಹ್ಲಿ ಮಾತನಾಡಿದರು. ನಾಳೆ ಮೈದಾನದಲ್ಲಿ ವಿಲಿಯಮ್ಸನ್ ಮೀಟ್ ಆದಾಗ ನಾನು ಈ ಹಿಂದೆ ಇಬ್ಬರು ಮುಖಾಮುಖಿಯಾಗಿದ್ದ ಪಂದ್ಯದ ಬಗ್ಗೆ ಹೇಳುವೆ. ಬರೋಬ್ಬರಿ 11 ವರ್ಷಗಳ ನಂತರ ಇಬ್ಬರು ವಿಶ್ವಕಪ್ನಲ್ಲಿ ನಮ್ಮ ನಮ್ಮ ತಂಡಗಳನ್ನ ಪ್ರತಿನಿಧಿಸಿ ಕಣಕ್ಕಿಳಿಯುತ್ತಿದ್ದು, ನಿಜಕ್ಕೂ ಇದು ಹೆಮ್ಮೆಯ ವಿಚಾರ ಎಂದರು.
-
Virat Kohli, on New Zealand captain Kane Williamson&he captaining their sides in WC semis after doing the same in 2008 U-19 WC semis: When we meet tomorrow I'll remind him. It's nice to realise that 11 yrs after, we're captaining our respective nations again in a senior World Cup pic.twitter.com/08AQLPhelB
— ANI (@ANI) July 8, 2019 " class="align-text-top noRightClick twitterSection" data="
">Virat Kohli, on New Zealand captain Kane Williamson&he captaining their sides in WC semis after doing the same in 2008 U-19 WC semis: When we meet tomorrow I'll remind him. It's nice to realise that 11 yrs after, we're captaining our respective nations again in a senior World Cup pic.twitter.com/08AQLPhelB
— ANI (@ANI) July 8, 2019Virat Kohli, on New Zealand captain Kane Williamson&he captaining their sides in WC semis after doing the same in 2008 U-19 WC semis: When we meet tomorrow I'll remind him. It's nice to realise that 11 yrs after, we're captaining our respective nations again in a senior World Cup pic.twitter.com/08AQLPhelB
— ANI (@ANI) July 8, 2019
ಅಂಡರ್-19 ವಿಶ್ವಕಪ್ನಲ್ಲಿ ಆಡಿರುವ ಅನೇಕ ಪ್ಲೇಯರ್ಸ್ ಅವರ ತಂಡದಲ್ಲೂ ಇದ್ದಾರೆ. ನಮ್ಮ ತಂಡದಲ್ಲೂ ಇದ್ದಾರೆ. ಈಗಲೂ ಅದ್ಭುತವಾದ ಕ್ರಿಕೆಟ್ ಅವರು ಆಡುತ್ತಿದ್ದು, ನಿಜಕ್ಕೂ ನಾಳೆಯ ಪಂದ್ಯ ತುಂಬಾ ರೋಚಕತೆಯಿದೆ ಕೂಡಿರುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ. ಮತ್ತೊಂದು ವಿಶ್ವಕಪ್ನಲ್ಲಿ ನಾವು ನಮ್ಮ ತಂಡಗಳನ್ನ ಪ್ರತಿನಿಧಿಸಿ ಮುಖಾಮುಖಿಯಾಗಲಿದ್ದೇವೆ ಎಂದು ನಾನು ಖಂಡಿತವಾಗಿ ಉಹಿಸಿಕೊಂಡಿರಲಿಲ್ಲ ಎಂದು ಕೊಹ್ಲಿ ಇದೇ ವೇಳೆ ಹೇಳಿದ್ದಾರೆ.
ಉಭಯ ತಂಡಗಳಿಗೆ ನಾಳೆಯ ಪಂದ್ಯ ಮಹತ್ವದಾಗಿದ್ದು, ಈಗಾಗಲೇ ಲೀಗ್ ಪಂದ್ಯಗಳನ್ನಾಡಿರುವ ನಮಗೆ ಸೆಮಿಫೈನಲ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತೇವೆ ಎಂಬುದರ ಮೇಲೆ ನಮ್ಮ ಮುಂದಿನ ಹಾದಿ ನಿರ್ಧಾರವಾಗುತ್ತದೆ ಎಂದು ತಿಳಿಸಿದ್ದಾರೆ.
ವಿಶ್ವಕಪ್ ಸೆಮಿಫೈನಲ್ನ ಮೊದಲ ಪಂದ್ಯದಲ್ಲಿ ನಾಳೆ ಭಾರತ-ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿದ್ದು, ಗೆಲುವು ತಂಡ ಫೈನಲ್ಗೆ ಪ್ರವೇಶ ಪಡೆದುಕೊಳ್ಳಲಿದೆ.