ETV Bharat / sports

ನಾವು ಅತ್ಯುತ್ತಮ ಸಮತೋಲನ ತಂಡ ಹೊಂದಿದ್ದೇವೆ : ಮೈಕಲ್ ಹಸ್ಸಿ

ಯುಎಇನಲ್ಲಿ ನಡೆದಿದ್ದ 2020ರ ಆವೃತ್ತಿಯಲ್ಲಿ ಮೂರು ಬಾರಿಯ ಚಾಂಪಿಯನ್​ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ಮೊದಲ ಬಾರಿಗೆ ಐಪಿಎಲ್​ ಇತಿಹಾಸದಲ್ಲೇ ಪ್ಲೇಆಫ್ ತಲುಪದೇ ಹೊರಬಿದ್ದಿತ್ತು..

ಮೈಕಲ್ ಹಸ್ಸಿ
ಮೈಕಲ್ ಹಸ್ಸಿ
author img

By

Published : Apr 3, 2021, 7:57 PM IST

ಮುಂಬೈ : ಸಿಎಸ್​ಕೆ ಎಲ್ಲಾ ವಿಭಾಗದಲ್ಲೂ ಉತ್ತಮ ಆಟಗಾರರನ್ನು ಹೊಂದಿದೆ. ಕಳೆದ ಆವೃತ್ತಿಯಲ್ಲಿ ಮರೆಯಾಗದ ಪ್ರದರ್ಶನದ ನಂತರ ಹೊಸದಾಗಿ ಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಚೆನ್ನೈ ಸೂಪರ್​​ ಕಿಂಗ್ಸ್ ಬ್ಯಾಟಿಂಗ್ ಕೋಚ್​ ಮೈಜ್ ಹಸ್ಸಿ ಹೇಳಿದ್ದಾರೆ.

ಯುಎಇನಲ್ಲಿ ನಡೆದಿದ್ದ 2020ರ ಆವೃತ್ತಿಯಲ್ಲಿ ಮೂರು ಬಾರಿಯ ಚಾಂಪಿಯನ್​ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ಮೊದಲ ಬಾರಿಗೆ ಐಪಿಎಲ್​ ಇತಿಹಾಸದಲ್ಲೇ ಪ್ಲೇ ಆಫ್ ತಲುಪದೇ ಹೊರಬಿದ್ದಿತ್ತು. "ನಮ್ಮ ತಂಡದ ಸಮತೋಲಿತವಾಗಿದೆ ಎಂದು ನಾನು ಭಾವಿಸುತ್ತೇನೆ.

ಅದು ಬಹುಪಾಲು ವಿಭಾಗದಲ್ಲೂ ತುಂಬಾ ಆಳ ಹೊಂದಿದೆ. ಜತೆಗೆ ಹುಡುಗರಿಗೂ ಒಳ್ಳೆಯ ಉತ್ಸಾಹ ಹೊಂದಿದೆ. ಉತ್ತಮ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ" ಎಂದು ಸಿಎಸ್​ಕೆ ವೆಬ್​ಸೈಟ್​ಗೆ ಹಸ್ಸಿ ಹೇಳಿದ್ದಾರೆ. "ರಾಬಿನ್ ಉತ್ತಪ್ಪ, ಕೃಷ್ಣಪ್ಪ ಗೌತಮ್ ಮತ್ತು ಮೊಯಿನ್ ಅಲಿ ಅವರು ತಂಡ ಸೇರಿಕೊಂಡ ನಂತರ ಸಿಎಸ್​ಕೆ ಉತ್ತಮ ಸಮತೋಲನ ಕಂಡುಕೊಂಡಿದೆ.

ಈ ಮೂವರು ಅತ್ಯುತ್ತಮ ಸೇರ್ಪಡೆಗಳೆಂದು ನಾನು ಭಾವಿಸುತ್ತೇನೆ. ಅಲಿ ಅತ್ಯುತ್ತಮ ಆಲ್​ರೌಂಡರ್​, ರಾಬಿನ್​ ಸಾಕಷ್ಟು ಅನುಭವ ಹೊಂದಿದ್ದು, ಈ ಹಿಂದೆ ಗುಣಮಟ್ಟದ ಪ್ರದರ್ಶನ ತೋರಿದ್ದಾರೆ. ಕೆ ಗೌತಮ್​ ಒಬ್ಬ ಅದ್ಭುತ ಪ್ರತಿಭೆ. ನಾವು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಬಹುದು" ಎಂದಿದ್ದಾರೆ.

ಪ್ರಸ್ತುತ ಮುಂಬೈನಲ್ಲಿ ಬೀಡುಬಿಟ್ಟಿರುವ ಚೆನ್ನೈ ತಂಡ ಏಪ್ರಿಲ್ 10ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ತಮ್ಮ ಮೊದಲ ಪಂದ್ಯವನ್ನಾಡಲಿದೆ.

ಇದನ್ನು ಓದಿ:ಹೆಜಲ್​ವುಡ್​ ಬದಲಾಗಿ ಬೇರೆ ಆಟಗಾರನನ್ನು ಆಯ್ಕೆ ಮಾಡುವ ಅವಶ್ಯಕತೆ ತಂಡಕ್ಕಿಲ್ಲ: ಸಿಎಸ್​ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.