ಕ್ಯಾನ್ಬೆರಾ: ಯುಜ್ವೇಂದ್ರ ಚಹಾಲ್ ಆಡುವ ಯಾವುದೇ ಯೋಜನೆ ಇರಲಿಲ್ಲ. ಆದರೆ concussion replacement ನಿಯಮದ ಪ್ರಕಾರ ಜಡೇಜಾ ಬದಲಿಗೆ ಬೌಲಿಂಗ್ ಮಾಡಿದ ಅವರು, ಉತ್ತಮ ಪ್ರದರ್ಶನ ತೋರಿದರು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಜಡೇಜಾ ಬದಲಿಗೆ ಬೌಲಿಂಗ್ ಮಾಡಿದ ಚಹಾಲ್, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಮ್ಯಾಚ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.
ಜಡೇಜಾ ಗಾಯಗೊಂಡು ಪೆವಿಲಿಯನ್ಗೆ ಮರಳಿದ ಬಳಿಕ ಅವರ ಸ್ಥಾನ ತುಂಬಿದ ಚಹಾಲ್ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ 11 ರನ್ಗಳ ಜಯ ಗಳಿಸಲು ನೆರವಾದರು.
-
Three wickets apiece for Natarajan and Chahal as #TeamIndia take a 1-0 lead in the three-match T20I series.@yuzi_chahal is adjudged Man of the Match for his brilliant figures of 3/25.#AUSvIND pic.twitter.com/mvq3Kl8esa
— BCCI (@BCCI) December 4, 2020 " class="align-text-top noRightClick twitterSection" data="
">Three wickets apiece for Natarajan and Chahal as #TeamIndia take a 1-0 lead in the three-match T20I series.@yuzi_chahal is adjudged Man of the Match for his brilliant figures of 3/25.#AUSvIND pic.twitter.com/mvq3Kl8esa
— BCCI (@BCCI) December 4, 2020Three wickets apiece for Natarajan and Chahal as #TeamIndia take a 1-0 lead in the three-match T20I series.@yuzi_chahal is adjudged Man of the Match for his brilliant figures of 3/25.#AUSvIND pic.twitter.com/mvq3Kl8esa
— BCCI (@BCCI) December 4, 2020
ಜಡೇಜಾ 23 ಎಸೆತಗಳಲ್ಲಿ ಅಜೇಯ 44 ರನ್ ಗಳಿಸುವ ಮೂಲಕ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಜಡೇಜಾ ತಲೆಗೆ ಚೆಂಡು ಬಿದ್ದು ಗಾಯಗೊಂಡ ಕಾರಣ ಅವರ ಸ್ಥಾನ ತುಂಬಿದ ಚಹಾಲ್, 4 ಓವರ್‌ಗಳಲ್ಲಿ 25 ರನ್ ಕೊಟ್ಟು 3 ವಿಕೆಟ್ ಪಡೆದರು.
ಈ ಕುರಿತು ಮಾತನಾಡಿದ ತಂಡದ ನಾಯಕ ಕೊಹ್ಲಿ, ಚಹಾಲ್ ಆಡುವ ಯಾವುದೇ ಯೋಜನೆ ಇರಲಿಲ್ಲ. ಜಡ್ಡು (ಜಡೇಜಾ) ತಲೆಗೆ ಗಾಯಗೊಂಡ ಕಾರಣ ಚಹಾಲ್ ಆಡಬೇಕಾಯಿತು ಎಂದಿದ್ದಾರೆ.