ಕೋಲ್ಕತಾ : ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾಟ್ವೆಸ್ಟ್ ಫೈನಲ್ ಪಂದ್ಯ ತಮ್ಮ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ ಪಂದ್ಯ ಎಂದು ಹೇಳಿಕೊಂಡಿದ್ದಾರೆ. ಜುಲೈ13, 2002ರಲ್ಲಿ ಗಂಗೂಲಿ ನೇತೃತ್ವದ ಯುವ ತಂಡ ಇಂಗ್ಲೆಂಡ್ ನೆಲದಲ್ಲಿ 326 ರನ್ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿ ನಾಟ್ವೆಸ್ಟ್ ಟ್ರೋಫಿ ಎತ್ತಿ ಹಿಡಿದಿತ್ತು.
ಮೊಹಮ್ಮದ್ ಕೈಫ್ ಆ ಪಂದ್ಯದಲ್ಲಿ 87 ರನ್ಗಳಿಸುವ ಮೂಲಕ ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಅವರಿಗೆ ಸೂಕ್ತ ಬೆಂಬಲ ನೀಡಿದ್ದ ಯುವರಾಜ್ ಸಿಂಗ್ ಸಹಾ 69 ರನ್ಗಳಿಸಿದ ಭಾರತಕ್ಕೆ ಒಂದು ಅದ್ಭುತ ಗೆಲುವು ತಂದುಕೊಟ್ಟಿದ್ದರು. ಆ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಗಂಗೂಲಿ ತಮ್ಮ ಜರ್ಸಿಯನ್ನು ಬಿಚ್ಚಿ ತಿರುಗಿಸುವ ಮೂಲಕ ಆ್ಯಂಡ್ರ್ಯೂ ಫ್ಲಿಂಟಾಫ್ ಅವರಿಗೆ ತಿರುಗೇಟು ನೀಡಿದ್ದರು.
"ಅದೊಂದು ಅದ್ಭುತ ಕ್ಷಣ, ಅದನ್ನು ನಾನು ಸಾಗಿಸಿಕೊಂಡು ಹೋಗುತ್ತಿದ್ದೇವೆ. ಆದರೆ, ಯಾವ ಕ್ರೀಡೆಯಲ್ಲಾದ್ರೂ ಅಂತಹ ಗೆಲುವು ಪಡೆದಾಗ, ನೀವು ಇನ್ನೂ ಹೆಚ್ಚಿನ ರೀತಿ ಸಂಭ್ರಮಿಸುತ್ತೀರಿ. ನಾನು ತಂಡದ ಭಾಗವಾಗಿದ್ದ ಕ್ರಿಕೆಟ್ನಲ್ಲಿ ಅದೊಂದು ಅತ್ಯದ್ಭುತ ಪಂದ್ಯವಾಗಿತ್ತು" ಎಂದು ಭಾರತದ ಟೆಸ್ಟ್ ಆರಂಭಿಕ ಬ್ಯಾಟ್ಸ್ಮನ್ ಮಯಾಂಂಕ್ ಅಗರ್ವಾಲ್ ಅವರು ಬಿಸಿಸಿಐ ಪೇಜ್ನಲ್ಲಿ ನಡೆಸಿದ ಲೈವ್ ಕಾರ್ಯಕ್ರಮದಲ್ಲಿ ದಾದಾ ಹೇಳಿಕೊಂಡಿಕೊಂಡಿದ್ದಾರೆ.
ಇನ್ನು 2003ರ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಹಾಗೂ ನಾಟ್ವೆಸ್ಟ್ ಗೆಲುವನ್ನು ಹೋಲಿಕೆ ಮಾಡಿ ಎಂದು ಕೇಳಿದಾಗ ಗಂಗೂಲಿ, ಆ ಎರಡು ತಮ್ಮದೇ ಸ್ಥಾನವನ್ನು ಪಡೆದಿವೆ. ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ವಿಶ್ವಕಪ್ ಫೈನಲ್ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಆ ತಂಡ ಆ ಕಾಲದ ಅತ್ಯುತ್ತಮ ತಂಡವಾಗಿತ್ತು. ಆದರೆ, ಫೈನಲ್ಗೂ ಹಿಂದಿನ ಆಸ್ಟ್ರೇಲಿಯಾ ಹೊರೆತುಪಡಿಸಿ ಎಲ್ಲ ಪಂದ್ಯಗಳನ್ನು ಗೆದ್ದಿದ್ದು ನನ್ನ ಪ್ರಕಾರ ಅದ್ಭುತ ಸಾಧನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
-
You asked, Dada answered :)#DadaOpensWithMayank https://t.co/q3Ehfg0AFP pic.twitter.com/a1FQW14Dl3
— BCCI (@BCCI) July 5, 2020 " class="align-text-top noRightClick twitterSection" data="
">You asked, Dada answered :)#DadaOpensWithMayank https://t.co/q3Ehfg0AFP pic.twitter.com/a1FQW14Dl3
— BCCI (@BCCI) July 5, 2020You asked, Dada answered :)#DadaOpensWithMayank https://t.co/q3Ehfg0AFP pic.twitter.com/a1FQW14Dl3
— BCCI (@BCCI) July 5, 2020
ನಾಟ್ವೆಸ್ಟ್ ತನ್ನದೇ ಆದ ಹೊಳಪನ್ನು ಹೊಂದಿದೆ. ಶನಿವಾರ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿ ಗಮನಾರ್ಹ ಭಾವನೆಗಳನ್ನು ತವರಿಗೆ ತರಲಾಗಿತ್ತು. ನಾವು 5 ಟೆಸ್ಟ್ ಪಂದ್ಯಗಳ ಸರಣಿಗೆ ಅಲ್ಲಿಗೆ ಪಯಣಿಸುವಾಗ ನೀವು ಅಲ್ಲಿಗೆ ಹೋಗುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದು ಮಯಾಂಕ್ಗೆ ಹೇಳಿದರು.
ಇನ್ನು 2019ರ ವಿಶ್ವಕಪ್ ಫೈನಲ್ ಪಂದ್ಯದ ಕಾಮೆಂಟರಿ ಮಾಡಿದ್ದು ನಂಬಲಸಾಧ್ಯವಾಗಿತ್ತು ಎಂದಿದ್ದಾರೆ.