ಹೈದರಾಬಾದ್: ಕೇನ್ ವಿಲಿಯಮ್ಸನ್ ಹಾಗೂ ಭುವನೇಶ್ವರ್ ಜೊತೆಗೆ ಖುಷಿಯಿಂದ ಸಮಯ ಕಳೆಯುತ್ತಿರುವ ಹಳೆಯ ವಿಡಿಯೋವನ್ನು ಸನ್ರೈಸರ್ಸ್ ಕ್ಯಾಪ್ಟನ್ ಡೇವಿಡ್ ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೊರೊನಾ ಲಾಕ್ಡೌನ್ ವೇಳೆ ಎಲ್ಲ ಮಾದರಿಯ ಕ್ರಿಕೆಟ್ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ಕ್ರಿಕೆಟ್ನಿಂದ ದೂರವಾಗಿರುವ ಕ್ರಿಕೆಟಿಗರು ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿ ಕ್ರಿಕೆಟ್ ಕುರಿತ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
- " class="align-text-top noRightClick twitterSection" data="
">
ಆದರೆ, ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಮಾತ್ರ ಕುಟುಂಬದೊಂದಿಗೆ ಬಹಳ ಎಂಜಾಯ್ ಮಾಡುತ್ತಿದ್ದಾರೆ. ಮೊನ್ನೆ ತಾನೆ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ ‘ಅಲಾ ವೈಕುಂಟಪುರಂಲೋ’ ಚಿತ್ರದ ‘ಬುಟ್ಟ ಬೊಮ್ಮಾ’ ಚಿತ್ರ ಹಾಡಿಗೆ ತನ್ನ ಮಡದಿ ಹಾಗೂ ಮಗಳೊಂದಿಗೆ ನೃತ್ಯ ಮಾಡಿ ಭಾರತೀಯರ ಮನ ಗೆದ್ದಿದ್ದ ವಾರ್ನರ್ ಇದೀಗ ಮತ್ತೆ ತಮ್ಮ ಟೀಮ್ಮೇಟ್ಗಳಾದ ಕೇನ್ ವಿಲಿಯಮ್ಸನ್ ಹಾಗೂ ಭಾರತದ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಜೊತೆಗೆ ಶೂಟಿಂಗ್ ಸಮಯದಲ್ಲಿ ಮಾಡಿರುವ ನೃತ್ಯದ ತುಣಕೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯಾದಲ್ಲಿ ಮೂವರು ಪ್ರಸಿದ್ಧ ಕ್ರಿಕೆಟಿಗರು ಪಾಪ್ ಸಾಂಗ್ ‘ವಾಟ್ ಇಸ್ ಲವ್’ಗೆ ಕುಳಿತು ನೃತ್ಯ ಮಾಡುತ್ತಿದ್ದಾರೆ. ಅದರಲ್ಲೂ ವಾರ್ನರ್ ಹಿಂದಿನ ಸೀಟ್ನಲ್ಲಿ ಕುಳಿತು ತುಂಬಾ ಎಂಜಾಯ್ ಮಾಡುತ್ತಿದ್ದಾರೆ.
ಈ ಮೂವರು ಈ ಬಾರಿಯೂ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲೇ ಇದ್ದರು. ಆದರೆ, ಕೊರೊನಾ ಭೀತಿಯಿಂದ ಐಪಿಎಲ್ ಅನಿರ್ದಾಷ್ಟಾವಧಿಗೆ ಮುಂದೂಡಿದ್ದರಿಂದ ಈ ಮೂವರು ದಿಗ್ಗಜರ ಆಟವನ್ನು ನೋಡಲು ಅಭಿಮಾನಿಗಳು ಕಾಯುವಂತಾಗಿದೆ.