ನವದೆಹಲಿ: ಭಾರತದ ಹಿರಿಯ ಬ್ಯಾಟ್ಸ್ಮನ್ ಸುರೇಶ್ ರೈನಾ ನೆಟ್ಸ್ಗೆ ಮರಳಿದ್ದು, ಭಾರತದ ಹಿರಿಯ ಬೌಲರ್ಗಳಾದ ಮೊಹಮ್ಮದ್ ಶಮಿ ಹಾಗೂ ಪಿಯುಷ್ ಚಾವ್ಲಾ ಅವರ ಬೌಲಿಂಗ್ಗೆ ಬ್ಯಾಟಿಂಗ್ ನಡೆಸಿದ್ದಾರೆ.
ಚಾವ್ಲಾ ಮತ್ತು ಶಮಿ ಅವರ ಬೌಲಿಂಗ್ ಎದುರಿಸುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಕೆಂಡ್ನಲ್ಲಿ ಪಿಯುಷ್ ಚಾವ್ಲಾ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ಅಭ್ಯಾಸವನ್ನು ಆನಂದಿಸಲು ಸಿದ್ದವಾಗಿದ್ದೇನೆ . ಇದೇ ವೇಗವನ್ನು ಮುಂದು ವರಿಸಿಕೊಂಡು ಹೋಗುತ್ತೇವೆ. ವೀಕೆಂಡ್ ಅನ್ನು ಉತ್ತಮ ರೀತಿಯಲ್ಲಿ ಆರಂಭಿಸಿದ್ದೇವೆ. ಸಣ್ಣ ವಿಜಯಗಳನ್ನು ಆನಂದಿಸಿ. ಹ್ಯಾಪಿ ವೀಕೆಂಡ್ ಎಂದು ಟ್ವೀಟ್ ಮಾಡಿದ್ದಾರೆ.
-
When you nailed your practice this week and ready to enjoy the weekend practice with none other than @MdShami11 & piyush Chawla 🏏 Keeping the momentum going!
— Suresh Raina🇮🇳 (@ImRaina) July 18, 2020 " class="align-text-top noRightClick twitterSection" data="
Good start to the weekend! 💪🤍 Enjoy the little victories, Happy weekend !😎✌️ pic.twitter.com/H2mtSmhP4t
">When you nailed your practice this week and ready to enjoy the weekend practice with none other than @MdShami11 & piyush Chawla 🏏 Keeping the momentum going!
— Suresh Raina🇮🇳 (@ImRaina) July 18, 2020
Good start to the weekend! 💪🤍 Enjoy the little victories, Happy weekend !😎✌️ pic.twitter.com/H2mtSmhP4tWhen you nailed your practice this week and ready to enjoy the weekend practice with none other than @MdShami11 & piyush Chawla 🏏 Keeping the momentum going!
— Suresh Raina🇮🇳 (@ImRaina) July 18, 2020
Good start to the weekend! 💪🤍 Enjoy the little victories, Happy weekend !😎✌️ pic.twitter.com/H2mtSmhP4t
ಇನ್ನು ಈಗಾಗಲೆ ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ,ಮತ್ತು ಉಮೇಶ್ ಯಾದವ್ ಅಭ್ಯಾಸ ಶುರು ಮಾಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಭಾರತದ ವಿಕೆಟ್ ಕೀಪರ್ ಜೊತೆ ರೈನಾ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.
ಭಾರತ ಕ್ರಿಕೆಟ್ನಿಂದ ಕಳೆದ ಎರಡು ವರ್ಷಗಳಿಂದ ದೂರವಿರುವ ಸುರೇಶ್ ರೈನಾ ಬ್ಲೂ ಜರ್ಸಿ ತೊಡಲು ಉತ್ಸಾಹ ತೋರಿತ್ತಿದ್ದಾರೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿ ಮತ್ತೆ ಟೀಮ್ ಇಂಡಿಯಾಗೆ ಮರಳಬೇಕೆಂದುಕೊಂಡಿರುವ ರೈನಾ ಆಸೆಯನ್ನು ಕೋವಿಡ್ 19 ಸಾಂಕ್ರಾಮಿಕ ರೋಗ ಸ್ವಲ್ಪ ಸಮಯ ಮುಂದೂಡುವಂತೆ ಮಾಡಿದೆ.