ಕರಾಚಿ: ಪ್ರಪಂಚದಾದ್ಯಂತ ಕೊರೊನಾ ಸೋಂಕಿಗೆ 5,500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ಸೋಂಕಿನ ಕೇಂದ್ರಬಿಂದು ಆಗಿರುವ ಚೀನಾ ಮೇಲೆ ಶೋಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಆಹಾರ ಪದ್ಧತಿಯನ್ನು ಟೀಕಿಸಿದ್ದಾರೆ.
-
Coronavirus:Shoaib Akhtar lashes out at China
— Capitano (@Dakkar_P) March 15, 2020 " class="align-text-top noRightClick twitterSection" data="
Former Pakistan cricketer in strange outburst on viral video
“I don’t understand why you have to eat things like bats, drink their blood and urine and spread some virus across the globe” pic.twitter.com/thGPfO4b07
">Coronavirus:Shoaib Akhtar lashes out at China
— Capitano (@Dakkar_P) March 15, 2020
Former Pakistan cricketer in strange outburst on viral video
“I don’t understand why you have to eat things like bats, drink their blood and urine and spread some virus across the globe” pic.twitter.com/thGPfO4b07Coronavirus:Shoaib Akhtar lashes out at China
— Capitano (@Dakkar_P) March 15, 2020
Former Pakistan cricketer in strange outburst on viral video
“I don’t understand why you have to eat things like bats, drink their blood and urine and spread some virus across the globe” pic.twitter.com/thGPfO4b07
'ನನಗೆ ಅರ್ಥವಾಗುತ್ತಿಲ್ಲ - ದೇವರು ನಿಮಗೆ ತುಂಬಾ ಆಹಾರ ಪದಾರ್ಥಗಳನ್ನು ಕೊಟ್ಟಿರುವಾಗ ನೀವು ಅದನ್ನು ಏಕೆ ತಿನ್ನಬಾರದು? ಬಾವಲಿಗಳು, ಬೆಕ್ಕುಗಳು ಮತ್ತು ನಾಯಿಗಳನ್ನು ಏಕೆ ತಿನ್ನಬೇಕು, ಅವುಗಳ ಮೂತ್ರ, ರಕ್ತವನ್ನು ಕುಡಿದು ಮತ್ತು ಇಡೀ ಜಗತ್ತಿಗೆ ವೈರಸ್ ಹರಡುವುದೇ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕು ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ ಸೂಪರ್ ಲೀಗ್ ಮೇಲೆ ಪ್ರಭಾವ ಬೀರಿರುವ ಬಗ್ಗೆ ಆಖ್ತರ್ ನಿರಾಶೆ ವ್ಯಕ್ತಪಡಿಸಿದ್ದಾರೆ.
'ಇಡೀ ಜಗತ್ತು ಅಪಾಯದಲ್ಲಿದೆ. ಕೊರೊನಾ ವೈರಸ್ ಕಾರಣದಿಂದ ವಿದೇಶಿ ಆಟಗಾರರು ಪಿಎಸ್ಎಲ್ ಟೂರ್ನಿ ತೊರೆಯುತ್ತಿದ್ದಾರೆ. ಐಪಿಎಲ್ ಅನ್ನು ಏಪ್ರಿಲ್ 15 ರವರೆಗೆ ಮುಂದೂಡಲಾಗಿದೆ, ಇದರಿಂದಾಗಿ ಭಾರಿ ನಷ್ಟವಾಗುತ್ತದೆ' ಎಂದು ರಾವಲ್ಪಿಂಡಿ ಎಕ್ಸ್ಪ್ರೆಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಂದೇಶಗಳಲ್ಲಿ ಕೊರೊನಾ ವೈರಸ್ ಬಗ್ಗೆ ತಮಾಷೆ ಮಾಡಬೇಡಿ. ದಯವಿಟ್ಟು ತಿನ್ನುವ ಮೊದಲು ಕೈ ತೊಳೆಯಿರಿ ಎಂದು ಅಖ್ತರ್ ಸಲಹೆ ನೀಡಿದ್ದಾರೆ.