ETV Bharat / sports

ಮೊದಲ ದಿನ ಅಶ್ವಿನ್​ ಬೌಲಿಂಗ್​ ಎದುರಿಸಿದ್ದು ನನಗೆ ಸವಾಲೆನಿಸಿತು: ಪುಕೋವ್​ಸ್ಕಿ - team india

ಪುಕೋವ್​ಸ್ಕಿ 110 ಎಸೆತಗಳನ್ನು ಎದುರಿಸಿ 62 ರನ್​ಗಳಿಸಿ ನವ್​ದೀಪ್​ ಸೈನಿಗೆ ವಿಕೆಟ್​ ಒಪ್ಪಿಸಿದರು. ಆದರೆ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾದರು.

ರವಿ ಚಂದ್ರನ್ ಅಶ್ವಿನ್​- ವಿಲ್​ ಪುಕೋವ್​ಸ್ಕಿ
ರವಿ ಚಂದ್ರನ್ ಅಶ್ವಿನ್​- ವಿಲ್​ ಪುಕೋವ್​ಸ್ಕಿ
author img

By

Published : Jan 7, 2021, 5:51 PM IST

ಸಿಡ್ನಿ: ಗುರುವಾರ ಭಾರತದ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್​ಮನ್​ ವಿಲ್ ಪುಕೋವ್​ಸ್ಕಿ, ಮೊದಲ ದಿನ ತಾವು ಎದುರಿಸಿದ ಬೌಲರ್​ಗಳಲ್ಲಿ ರವಿಚಂದ್ರನ್​ ಅಶ್ವಿನ್​ ಅತ್ಯಂತ ವಿಶಿಷ್ಠ ಬೌಲರ್​ ಆಗಿದ್ದರು ಎಂದು ತಿಳಿಸಿದ್ದಾರೆ.

22 ವರ್ಷದ ಆಟಗಾರ​ ಇಂದು ಆರಂಭಿಕನಾಗಿ ಕಣಕ್ಕಿಳಿದಿದ್ದರು. ತಮ್ಮ ಜೊತೆಗಾರ ಡೇವಿಡ್​ ವಾರ್ನರ್​ ಕೇವಲ 5 ರನ್​ಗಳಿಗೆ ವಿಕೆಟ್​ ಒಪ್ಪಿಸಿದರೂ ಎದೆಗುಂದದೆ ಭಾರತೀಯ ಬ್ಯಾಟ್ಸ್​ಮನ್​ಗಳ ದಾಳಿಯನ್ನು ಕೆಚ್ಚೆದೆಯಿಂದ ಎದುರಿಸಿದ್ದಾರೆ. ಮೊದಲ ದಿನದಾಟದಲ್ಲಿ 62 ರನ್​ಗಳಿಸಿ ಮೊದಲ ಪಂದ್ಯವನ್ನೇ ಸ್ಮರಣೀಯ ಮಾಡಿಕೊಂಡರು.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ದಿನ ಸಂಪೂರ್ಣ ನಂಬಲಾಗದ ಅನುಭವವಾಗಿದೆ. ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರಿಂದ ನಾನು ಮೈದಾನದ ಹೊರಗೆ ಮತ್ತು ಒಳಗೆ ಬಹಳ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದೇನೆ ಎಂದು ಪಂದ್ಯದ ನಂತರ ನಡೆದ ವರ್ಚುವಲ್​ ಮಾಧ್ಯಮಗೋಷ್ಠಿಯಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ವಿಲ್​ ಪುಕೋವ್​ ಸ್ಕಿ

"ಅವರೆಲ್ಲರೂ(ಭಾರತೀಯ ಬೌಲರ್​ಗಳು) ಅತ್ಯುತ್ತಮ ಬೌಲರ್​ಗಳು. ಮೊದಲ ಪಂದ್ಯವನ್ನಾಡಿದ ನನಗೆ ಅಶ್ವಿನ್​ ಬೌಲಿಂಗ್​ ಅತ್ಯಂತ ವಿಶಿಷ್ಟವಾಗಿ ಕಂಡುಬಂತು. ಬುಮ್ರಾ ಅವರದ್ದೂ ವಿಶಿಷ್ಠ ಆ್ಯಕ್ಷನ್​ ಆಗಿದೆ. ಆದರೆ ಅಶ್ವಿನ್​ ವಿಭಿನ್ನ ಶೈಲಿಯನ್ನು ಹೊರತುಪಡಿಸಿಯೂ ನನಗೆ ವಿಶಿಷ್ಟವೆನಿಸಿದರು. ಏಕೆಂದರೆ ಅವರು ಶಾರ್ಟ್​ ಬೌಲ್​ ಮಾಡುವಾಗಲೂ ಕೂಡ ವಿಭಿನ್ನ ಮಾರ್ಪಾಡುಗಳೊಂದಿಗೆ ಎಸೆಯುತ್ತಿದ್ದರು" ಎಂದು ಪುಕೋವ್​ಸ್ಕಿ ಭಾರತೀಯ ಬೌಲರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ರಾಷ್ಟ್ರಗೀತೆ ಹಾಡುವ ವೇಳೆ ಭಾವುಕರಾಗಿದ್ದಕ್ಕೆ ಕಾರಣ ತಿಳಿಸಿದ ಸಿರಾಜ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.