ಕೋಲ್ಕತಾ : ಎರಡು ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿರುವ ಕೋಲ್ಕತಾ ನೈಟ್ ರೈಡರ್ಸ್ಹಾಗೂಸನ್ ರೈಸರ್ಸ್ ಹೈದರಾಬಾದ್ ನಡುವೆ ಇಂದು ಕೋಲ್ಕತಾದ ಈಡನ್ ಗಾರ್ಡನ್ ಮೈದಾನಲ್ಲಿ ಐಪಿಎಲ್‌ನ 12ನೇ ಆವೃತ್ತಿಯ 2 ನೇ ಪಂದ್ಯ ನಡೆಯಲಿದೆ. ಬಲಿಷ್ಠ ಬ್ಯಾಟಿಂಗ್ ಶಕ್ತಿ, ಉತ್ತಮ ಆಲ್ರೌಂಡರ್ಗಳು, ಚಾಣಾಕ್ಷ ಸ್ಪಿನ್ನರ್ಗಳ ದಂಡನ್ನೇ ಹೊಂದಿರುವ ಕೋಲ್ಕತಾ ನೈಟ್ರೈಡರ್ಸ್ ತವರಿನ ಲಾಭ ಪಡೆಯಲಿದೆ.
ಎಸ್ಆರ್ಹೆಚ್ v/s ಕೆಕೆಆರ್ ಗೆಲುವು -ಸೋಲು :
ಈವರೆಗೆ ಎರಡೂ ತಂಡಗಳು 15 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೆಕೆಆರ್ 9ರಲ್ಲಿ ಗೆಲುವು ಸಾಧಿಸಿದೆ. ಸನ್ರೈಸರ್ಸ್ 6 ಪಂದ್ಯಗಳಲ್ಲಿ ಗೆಲುವು ಕಂಡಿದೆ.ಈಡನ್ ಗಾರ್ಡನ್ನಲ್ಲಿ ನೋಡುವುದಾದರೆ ಎರಡು ತಂಡಗಳು 7 ಬಾರಿ ಮುಖಾಮುಖಿಯಾಗಿದ್ದು, ಕೆಕೆಆರ್ 5 ಬಾರಿ ಜಯಗಳಿಸಿದ್ದು, ಸನ್ರೈಸರ್ಸ್ 2 ಬಾರಿ ಮಾತ್ರ ಗೆಲುವು ಸಾಧಿಸಿದೆ.
ಉತ್ತಪ್ಪ v/s ವಾರ್ನರ್:
ಕೆಕೆಆರ್ ಆರಂಭಿಕ ಆಟಗಾರ ಉತ್ತಪ್ಪ ಸನ್ರೈಸರ್ಸ್ ವಿರುದ್ಧ 391 ರನ್ಗಳಿಸಿದ್ದಾರೆ. ಸನ್ರೈಸರ್ಸ್ನ ಪರ ಆಡುವ ಡೇವಿಡ್ ವಾರ್ನರ್ ಕೆಕೆಆರ್ ವಿರುದ್ಧ 381 ರನ್‌ಳಿಸಿದ್ದು ಟಾಪ್ ಸ್ಕೋರರ್ ಆಗಿದ್ದಾರೆ.
ಬೌಲಿಂಗ್ ಹಣಾಹಣಿ :
ಕೆಕೆಆರ್ ವಿರುದ್ಧ 17 ವಿಕೆಟ್ ಪಡೆದಿರುವ ಭುವನೇಶ್ವರ್ ಸನ್ರೈಸರ್ಸ್ ಪರ ಟಾಪ್ ಬೌಲರ್ ಆಗಿದ್ದಾರೆ. ಕೆಕೆಆರ್ ಪರ ಕುಲದೀಪ್ ಯಾದವ್ ಹಾಗೂ ಸುನೀಲ್ ನರೈನ್ ತಲಾ10 ವಿಕೆಟ್ ಪಡೆದಿದ್ದಾರೆ.
ತಂಡದ ಬಲಾಬಲ :
ಕೆಕೆಆರ್ ತಂಡದಲ್ಲಿ ಆಲ್ರೌಂಡರ್ ಸ್ಥಾನದಲ್ಲಿ ಆ್ಯಂಡ್ರ್ಯೂ ರಸೆಲ್, ಜೋ ಡೆನ್ಲಿ, ಸುನೀಲ್ ನರೈನ್, ಕಾರ್ಲೋಸ್ ಬ್ರಾಥ್ವೈಟ್ ಇದ್ದಾರೆ. ಬ್ಯಾಟಿಂಗ್ನಲ್ಲಿ ನೋಡುವುದಾದರೆ ಕ್ರಿಸ್ ಲಿನ್, ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ಶುಭ್ಮನ್ ಗಿಲ್, ನಿತಿಶ್ ರಾಣಾ ಇದ್ದಾರೆ. ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ, ಲೂಕಿ ಫರ್ಗ್ಯುಸನ್, ಹರ್ರಿ ಗಾರ್ನಿ, ಸಂದೀಪ್ ವಾರಿಯರ್, ಕೆಸಿ ಕಾರಿಯಪ್ಪ ಇದ್ದು ಒಟ್ಟಾರೆ ತಂಡ ಸಮತೋಲನದಿಂದ ಕೂಡಿದೆ.
ಹೈದರಾಬಾದ್ ತಂಡ ಕೂಡ ಕಳಪೆಯೇನಲ್ಲ. ಬ್ಯಾಟಿಂಗ್ನಲ್ಲಿ ಸ್ಫೋಟಕ ಆಟಗಾರರಾದ ಜಾನಿ ಬ್ಯಾರ್ಸ್ಟೋವ್, ಡೇವಿಡ್ ವಾರ್ನರ್,ಕೇನ್ ವಿಲಿಯಮ್ಸನ್,ಮಾರ್ಟಿನ್ ಗಫ್ಲಿಲ್, ಮನೀಷ್ ಪಾಂಡೆ, ರಿಕಿ ಭುವಿ, ವೃದ್ಧಿಮಾನ್ ಸಹಾ ತಂಡದ ಭಾಗವಾಗಲಿದ್ದಾರೆ, ಆಲ್ರೌಂಡರ್ ವಿಭಾಗದಲ್ಲಿ ಯೂಸಫ್ ಪಠಾಣ್, ಶಕಿಭ್ ಹಲ್ ಹಸನ್, ಅಭಿಶೇಕ್ ಶರ್ಮಾ, ವಿಜಯ್ ಶಂಕರ್, ಮಹಮ್ಮದ್ ನಭಿ ಹಾಗೂ ಬೌಲರ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ರಶೀದ್ ಖಾನ್, ಬಾಸಿಲ್ ತಂಪಿ, ಬಿಲ್ಲಿ ಸ್ಟ್ಯಾನ್ಲೇಕ್, ಟಿ ನಟರಾಜನ್, ಖಲೀಲ್ ಅಹ್ಮದ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ ಇದ್ದು ಸನ್ರೈಸರ್ಸ್ ತಂಡ ಕೂಡ ಬಲಿಷ್ಠ ತಂಡವಾಗಿದೆ.