ಬ್ರಿಸ್ಬೇನ್: ಶುಕ್ರವಾರ ಆರಂಭವಾಗುವ ಬಾರ್ಡರ್ - ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದವಾಡಲು ಆಸ್ಟ್ರೇಲಿಯಾ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಗಬ್ಬಾಕ್ಕೆ ಕಾಲಿಟ್ಟಿದ್ದು, ಇದು ಅವರ ನೂರನೆ ಟೆಸ್ಟ್ ಪಂದ್ಯವಾಗಿದೆ.
ತಮ್ಮ ವೃತ್ತಿಜೀವನದ ಮುಂಬರುವ ಸಂತೋಷದ ಕ್ಷಣದ ಕುರಿತು ಪ್ರತಿಕ್ರಿಯಿಸಿದ ಲಿಯಾನ್, "ಬಹಳ ಅದ್ಭುತವಾಗಿದೆ.. ಹೆಮ್ಮೆಯ" ಅನುಭವ ಎಂದು ಹೇಳಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ ಕಣಕ್ಕಿಳಿದರೆ ಆಸೀಸ್ ಪರ 100 ಟೆಸ್ಟ್ ಪಂದ್ಯವಾಡಿದ 13ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇದಲ್ಲದೇ ಲಿಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಗಳಿಸುವ ಮೂಲಕ ಮಹತ್ವದ ಮೈಲಿಗಲ್ಲು ತಲುಪುವ ಹಾದಿಯಲ್ಲಿದ್ದು, ಇಲ್ಲಿಯವರೆಗೆ 396 ವಿಕೆಟ್‌ಗಳನ್ನು ಪಡೆದಿದ್ದು, ಭಾರತ ವಿರುದ್ಧದ ಈ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ 4 ವಿಕೆಟ್ ಪಡೆದು ಹೊಸ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ.
"ಗಬ್ಬಾ" ಮೈದಾನ ಸಾಂಪ್ರದಾಯಿಕವಾಗಿ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದಿದ್ದರೂ, ಉತ್ತಮ ಬೌನ್ಸ್ ತನಗೆ ಸರಿಹೊಂದುತ್ತದೆ ಎಂದು ಲಿಯಾನ್ ನಂಬಿದ್ದಾರೆ.