ಸಿಡ್ನಿ: ಭಾರತ ತಂಡದ ಸೀಮಿತ ಓವರ್ಗಳ ಸರಣಿ ಹತ್ತಿರ ಬರುತ್ತಿದ್ದು, ಆಸೀಸ್ ಪ್ರವಾಸದಲ್ಲಿರುವ ಭಾರತ ತಂಡ ಕೋವಿಡ್ ಟೆಸ್ಟ್ ಮುಗಿಸಿ ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿದೆ.
ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿರುವ ಯಾರ್ಕರ್ ಕಿಂಗ್ ನಟರಾಜನ್ ಬೌಲಿಂಗ್ ಮಾಡುವ ವಿಡಿಯೋವೊಂದನ್ನು ಬಿಸಿಸಿಐ ಶೇರ್ ಮಾಡಿಕೊಂಡಿದ್ದು, ಮೊದಲ ಬಾರಿಗೆ ಭಾರತ ತಂಡಕ್ಕಾಗಿ ಆಡುವ ಕನಸು ನನಸಾದ ಕ್ಷಣ ಎಂದು ಬರೆದುಕೊಂಡಿದೆ. ನಟರಾಜನ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಬದಲಿಗೆ ಭಾರತ ಟಿ20 ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
-
We have seen him bowl with a lot of success in the @IPL and here is @Natarajan_91 bowling in the #TeamIndia nets for the first time after his maiden India call-up! A dream come true moment. 👏 pic.twitter.com/WqrPI0Ab7I
— BCCI (@BCCI) November 15, 2020 " class="align-text-top noRightClick twitterSection" data="
">We have seen him bowl with a lot of success in the @IPL and here is @Natarajan_91 bowling in the #TeamIndia nets for the first time after his maiden India call-up! A dream come true moment. 👏 pic.twitter.com/WqrPI0Ab7I
— BCCI (@BCCI) November 15, 2020We have seen him bowl with a lot of success in the @IPL and here is @Natarajan_91 bowling in the #TeamIndia nets for the first time after his maiden India call-up! A dream come true moment. 👏 pic.twitter.com/WqrPI0Ab7I
— BCCI (@BCCI) November 15, 2020
"2020ರ ಐಪಿಎಲ್ನಲ್ಲಿ ಸಾಕಷ್ಟು ಯಶಸ್ವಿಯಾಗಿದ್ದ ಟಿ ನಟರಾಜನ್ ಭಾರತ ತಂಡಕ್ಕೆ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಇದು ಅವರ ಭಾರತ ತಂಡದಲ್ಲಿ ಆಡಬೇಕೆಂಬ ಕನಸು ನನಸಾದ ಕ್ಷಣ" ಎಂದು ಬರೆದುಕೊಂಡು ವಿಡಿಯೋ ಟ್ವೀಟ್ ಮಾಡಿದೆ.
-
Here's the plank challenge ft @mayankcricket @RealShubmanGill @im_manishpandey! What's your personal best? #TeamIndia #AUSvIND pic.twitter.com/ht2azzZmjC
— BCCI (@BCCI) November 15, 2020 " class="align-text-top noRightClick twitterSection" data="
">Here's the plank challenge ft @mayankcricket @RealShubmanGill @im_manishpandey! What's your personal best? #TeamIndia #AUSvIND pic.twitter.com/ht2azzZmjC
— BCCI (@BCCI) November 15, 2020Here's the plank challenge ft @mayankcricket @RealShubmanGill @im_manishpandey! What's your personal best? #TeamIndia #AUSvIND pic.twitter.com/ht2azzZmjC
— BCCI (@BCCI) November 15, 2020
ನಟರಾಜನ್ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. ಅವರು 16 ಪಂದ್ಯಗಳಿಂದ 15 ವಿಕೆಟ್ ಪಡೆದು ಮಿಂಚಿದ್ದ ಅವರು ಟೂರ್ನಿಯಲ್ಲಿ ಗರಿಷ್ಠ ಯಾರ್ಕರ್(160) ಮಾಡಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕು ಮುನ್ನ ಮಯಾಂಕ್ ಅಗರ್ವಾಲ್ , ಶುಬ್ಮನ್ ಗಿಲ್ ಮತ್ತು ಮನೀಶ್ ಪಾಂಡೆ ಜಿಮ್ನಲ್ಲಿ ಪ್ಲಾಂಕ್ ಚಾಲೆಂಜ್ ಮಾಡುವ ಚಿತ್ರಗಳನ್ನು ಶೇರ್ ಮಾಡಿಕೊಂಡಿತ್ತು.
ಕೋವಿಡ್ ಟೆಸ್ಟ್ನಲ್ಲಿ ನೆಗೆಟಿವ್ ಪಡೆದ ಬೆನ್ನಲ್ಲೇ ಭಾರತ ತಂಡದ ಆಟಗಾರರು ಮೈದಾನಕ್ಕೆ ಆಗಮಿಸಿ ಅಭ್ಯಾಸ ಆರಂಭಿಸಿದ್ದಾರೆ. ಕೊಹ್ಲಿ ಹಾಗೂ ಪೂಜಾರ ಕ್ಯಾಚ್ ಪ್ರಾಕ್ಟೀಸ್ ಮಾಡಿದರೆ, ವೇಗದ ಬೌಲರ್ಗಳು ರನ್ನಿಂಗ್ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ.
ಭಾರತ ತಂಡದ ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 27 ರಂದು ಮೊದಲ ಏಕದಿನ ಪಂದ್ಯವನ್ನಾಡಲಿದೆ.