ಮುಂಬೈ : 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ 2021ರ ಆವೃತ್ತಿಗಾಗಿ ಶನಿವಾರ ನೂತನ ಜರ್ಸಿ ಬಿಡುಗಡೆ ಮಾಡಿದೆ. ಈ ಜರ್ಸಿಯನ್ನು ಫ್ಯಾಷನ್ ಡಿಸೈನರ್ಗಳಾದ ಶಾಂತನು ಮತ್ತು ನಿಖಿಲ್ ಎಂಬುುವರು ಡಿಸೈನ್ ಮಾಡಿದ್ದಾರೆ.
ಈ ಜರ್ಸಿಯಲ್ಲಿ ವಿಶ್ವದ ಪಂಚಭೂತಗಳಾದ ನೀರು, ಭೂಮಿ, ಬೆಂಕಿ, ಗಾಳಿ ಮತ್ತು ಆಕಾಶಗಳನ್ನು ಸೆರೆಹಿಡಿದಿದ್ದು, ಇವು 5 ಬಾರಿಯ ಚಾಂಪಿಯನ್ ಸಾರವನ್ನು ಸೂಚಿಸುತ್ತಿದೆ ಎಂದು ತಿಳಿದು ಬಂದಿದೆ.
-
We will take the field in #IPL2021 wearing our colours with pride! 👕✨
— Mumbai Indians (@mipaltan) March 27, 2021 " class="align-text-top noRightClick twitterSection" data="
🗣 पलटन, तयार का? 😎
Pre-order - https://t.co/Oo7qj5m4cN#OneFamily #MumbaiIndians pic.twitter.com/2sXlDg97XQ
">We will take the field in #IPL2021 wearing our colours with pride! 👕✨
— Mumbai Indians (@mipaltan) March 27, 2021
🗣 पलटन, तयार का? 😎
Pre-order - https://t.co/Oo7qj5m4cN#OneFamily #MumbaiIndians pic.twitter.com/2sXlDg97XQWe will take the field in #IPL2021 wearing our colours with pride! 👕✨
— Mumbai Indians (@mipaltan) March 27, 2021
🗣 पलटन, तयार का? 😎
Pre-order - https://t.co/Oo7qj5m4cN#OneFamily #MumbaiIndians pic.twitter.com/2sXlDg97XQ
ಜರ್ಸಿ ಮತ್ತು ಅದರ ಸಾರದ ಕುರಿತು ಮಾತನಾಡಿದ ಮುಂಬೈ ಇಂಡಿಯನ್ಸ್ ವಕ್ತಾರರು, "ಮುಂಬೈ ಇಂಡಿಯನ್ಸ್ ಪ್ರತಿವರ್ಷ ತನ್ನ ಮೂಲ ಮೌಲ್ಯಗಳು ಮತ್ತು ಸಿದ್ಧಾಂತಗಳ ಮೇಲೆ ನಿರ್ಮಿಸಲಾದ ಪರಂಪರೆಯನ್ನು ಮುಂದುವರಿಸುತ್ತಿದೆ. ನಮ್ಮ ಐದು ಐಪಿಎಲ್ ಪ್ರಶಸ್ತಿಗಳು ಈ ಮೌಲ್ಯಗಳಿಗೆ ನಮಗಿರುವ ಬದ್ಧತೆಗೆ ಸಾಕ್ಷಿಯಾಗಿದೆ. ಈ ವರ್ಷ ಜರ್ಸಿಯ ಮೂಲಕ ಅದನ್ನು ಸೂಚಿಸಲು ಸಾಧ್ಯವಾಗಿದೆ " ಎಂದು ತಿಳಿಸಿದ್ದಾರೆ.
-
One Team. #OneFamily. One Jersey. 💙
— Mumbai Indians (@mipaltan) March 27, 2021 " class="align-text-top noRightClick twitterSection" data="
Presenting our new MI jersey for #IPL2021 👕✨
Paltan, pre-order yours from @thesouledstore now - https://t.co/Oo7qj5m4cN#MumbaiIndians pic.twitter.com/F0tBT6TXcq
">One Team. #OneFamily. One Jersey. 💙
— Mumbai Indians (@mipaltan) March 27, 2021
Presenting our new MI jersey for #IPL2021 👕✨
Paltan, pre-order yours from @thesouledstore now - https://t.co/Oo7qj5m4cN#MumbaiIndians pic.twitter.com/F0tBT6TXcqOne Team. #OneFamily. One Jersey. 💙
— Mumbai Indians (@mipaltan) March 27, 2021
Presenting our new MI jersey for #IPL2021 👕✨
Paltan, pre-order yours from @thesouledstore now - https://t.co/Oo7qj5m4cN#MumbaiIndians pic.twitter.com/F0tBT6TXcq
"ಪ್ರತಿವರ್ಷ ನಮ್ಮ ಜರ್ಸಿಗಳನ್ನು ವಿನ್ಯಾಸಗೊಳಿಸಲು ಸಾಕಷ್ಟು ಚಿಂತನೆಗಳಿವೆ ನಮ್ಮ ಮುಂದಿರುತ್ತವೆ. ಯಾಕೆಂದರೆ, ಇದನ್ನು ನಮ್ಮ ಆಟಗಾರರು ಮತ್ತು ಅಭಿಮಾನಿಗಳು ಹೆಮ್ಮೆ ಮತ್ತು ಗೌರವದಿಂದ ಧರಿಸುತ್ತಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ.
ಇದು ದೇಶದ ಅತ್ಯಂತ ಯಶಸ್ವಿ ಕ್ರೀಡಾ ಕ್ಲಬ್ ಆಗಲು ನಮಗೆ ಸಹಾಯ ಮಾಡಿದೆ. ಈ ಋತುವಿನಲ್ಲಿ ಪಂಚಭೂತಗಳನ್ನು ನಮ್ಮ ಜರ್ಸಿಯಲ್ಲಿ ಧರಿಸಲು ನಿರ್ಧರಿಸಿದ್ದೇವೆ" ಎಂದು ವಕ್ತಾರರು ಹೇಳಿದರು.
ಮುಂಬೈ ಇಂಡಿಯನ್ಸ್ ನೂತನ ಜರ್ಸಿಯನ್ನು ಅನಾವರಣಗೊಳಿಸಿರುವ ವಿಡಿಯೋವನ್ನು ತನ್ನ ಟ್ವಿಟರ್ನಲ್ಲಿ ಬಿಡುಗಡೆ ಮಾಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಇದನ್ನು ಓದಿ: "Our King Is Back"... ಸಿಎಸ್ಕೆ ಜರ್ಸಿಯಲ್ಲಿ ಕಂಡ ರೈನಾ ಬಗ್ಗೆ ಬ್ರಾವೋ ಟ್ವೀಟ್!