ETV Bharat / sports

'ಅದೊಂದು ಸುಂದರ ಅನುಭವ' ತಂದೆಯಾಗುವ ಬಗ್ಗೆ ವಿರಾಟ್​ ಕೊಹ್ಲಿ ಮಾತು ಕೇಳಿ! - ಅನುಷ್ಕಾ ಶರ್ಮಾ ಪ್ರೆಗ್ನೆಸ್ಸಿ

ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ತಂದೆಯಾಗುವ ಖುಷಿಯಲ್ಲಿದ್ದು, ಅದೇ ವಿಚಾರವಾಗಿ ಇದೇ ಮೊದಲ ಬಾರಿಗೆ ಅವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

Virat Kohli
Virat Kohli
author img

By

Published : Sep 3, 2020, 8:46 PM IST

ದುಬೈ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ​ ಪತ್ನಿ ಅನುಷ್ಕಾ ಶರ್ಮಾ ಗರ್ಭವತಿಯಾಗಿರುವ ವಿಷಯವನ್ನ ಕಳೆದ ಕೆಲ ದಿನಗಳ ಹಿಂದೆ ಸ್ಟಾರ್​ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಮೊದಲ ಬಾರಿಗೆ ವಿರಾಟ್​ ಈ ವಿಷಯವಾಗಿ ಮಾತನಾಡಿದ್ದಾರೆ.

ತಂದೆಯಾಗುವ ಖುಷಿ ಹಂಚಿಕೊಂಡ ವಿರಾಟ್​​

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಭಾಗಿಯಾಗಲು ಸದ್ಯ ದುಬೈನಲ್ಲಿರುವ ವಿರಾಟ್​ ಕೊಹ್ಲಿ, ಹೌದು, ಅದೊಂದು ಅದ್ಭುತ ಅನುಭವ. ನಾನು ಹೇಳಬಹುದು ಅಷ್ಟೆ. ಆದರೆ ಅದರ ಬಗ್ಗೆ ವಿವರಣೆ ನೀಡುವುದು ತುಂಬಾ ಕಷ್ಟ. ನಿಜವಾಗಲೂ ಇದೊಂದು ಭಾವನಾತ್ಮಕ ಹಾಗೂ ಸಂತೋಷಕರ ವಿಚಾರ ಎಂದಿದ್ದಾರೆ.

ಡಿಸೆಂಬರ್ 11,2017 ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿ, ಟ್ವೀಟರ್​​ನಲ್ಲಿ ಕಳೆದ ಕೆಲ ದಿನಗಳ ಹಿಂದೆ ಫೋಟೋ ಶೇರ್​ ಮಾಡಿ 2021ರ ಜನವರಿಯಲ್ಲಿ ನಾವು ಮೂವರಾಗಲಿದ್ದೇವೆ ಎಂದು ಹೇಳಿದ್ದರು. ಇದೇ ವೇಳೆ ಕಳೆದ ಆರು ತಿಂಗಳಿಂದ ಕ್ರಿಕೆಟ್​​ನಿಂದ ದೂರ ಉಳಿದಿದ್ದ ವಿಚಾರವಾಗಿ ಮಾತನಾಡಿರುವ ಕೊಹ್ಲಿ, ಆರಂಭದಲ್ಲಿ ಅಭ್ಯಾಸಕ್ಕೆ ಹೋಗುವಾಗ ನನಗೆ ಆತಂಕವಾಯಿತು. ಕಳೆದ 9-10 ವರ್ಷಗಳಲ್ಲಿ ಇಷ್ಟೊಂದು ದೀರ್ಘಾವಧಿ ವಿಶ್ರಾಂತಿ ಪಡೆದುಕೊಂಡಿರುವುದು ಇದೇ ಮೊದಲು. ಎಲ್ಲ ಸಮಯದಲ್ಲೂ ಆಟ ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಕ್ರೀಡಾಂಗಣದಲ್ಲಿ ಯಾವುದೇ ಅಭಿಮಾನಿಗಳಿಲ್ಲದೇ ಕ್ರಿಕೆಟ್​​ ಆಡುವುದು ಖಂಡಿತ, ಹೊಸ ಅನುಭವ. 2010ರಲ್ಲಿ ರಣಜಿ ಟ್ರೋಫಿ ವೇಳೆ ಇಂತಹ ಅನುಭವ ನನನಗೆ ಆಗಿದೆ. ಆದರೆ 10 ವರ್ಷದಿಂದ ಪ್ರತಿ ಪಂದ್ಯದಲ್ಲೂ ಅಭಿಮಾನಿಗಳು ನಮ್ಮೊಂದಿಗೆ ಇದ್ದರು ಎಂದು ತಿಳಿಸಿದ್ದಾರೆ. ದುಬೈನಲ್ಲಿ ಸೆಪ್ಟೆಂಬರ್​ 19ರಿಂದ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಈಗಾಗಲೇ ಎಲ್ಲ ಪ್ರಾಂಚೈಸಿ ಪ್ಲೇಯರ್ಸ್​​​​ ಅರಬ್​ ದೇಶದಲ್ಲಿ ಅಭ್ಯಾಸದಲ್ಲಿ ಭಾಗಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.