ETV Bharat / sports

ಕೊರೊನಾ ವಿರುದ್ಧ ಇನ್‌ಸ್ವಿಂಗ್‌.. ಸಾವಿರಾರು ಹಸಿದ ಹೊಟ್ಟೆ ತುಂಬಿಸುತ್ತಿರುವ ಮೊಹ್ಮದ್ ಶಮಿ.. - Shami helping amid COVID-19 crisis

ಆಹಾರ ಪ್ಯಾಕೇಟ್​ಗಳು ಮತ್ತು ಮಾಸ್ಕ್​ ನೀಡುವ ಮೂಲಕ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅಲ್ಲದೆ ಜನರನ್ನು ಮನೆ ತಲುಪಿಸಲು ಕೂಡ ಶಮಿ ಸಹಾಯ ಮಾಡುತ್ತಿದ್ದಾರೆ. ಶಮಿಯ ಈ ಮಾನವೀಯತೆ ಕೆಲಸವನ್ನು ಬಿಸಿಸಿಐ ತನ್ನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

WATCH: India cricketer Mohammad Shami helps poor by distributing masks, food packets in UP amid COVID-19 crisis
ಮೊಹಮ್ಮದ್​ ಶಮಿ
author img

By

Published : Jun 2, 2020, 7:33 PM IST

ನವದೆಹಲಿ : ಸಂಕಷ್ಟದಲ್ಲಿರುವ ಬಡವರು, ನಿರಾಶ್ರಿತರು, ಕಾರ್ಮಿಕರ ನೆರವಿಗೆ ಧಾವಿಸಿರುವ ಭಾರತದ ಕ್ರಿಕೆಟಿಗ ಮೊಹಮ್ಮದ್​ ಶಮಿ ಆಹಾರ ಮತ್ತು ಮಾಸ್ಕ್​​​​ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉತ್ತರಪ್ರದೇಶದ ಬಿಜ್ನೋರ್​​​​ ನಗರದ ಸಮೀಪದ ಸಹಸ್ಪುರದ ತಮ್ಮ ಮನೆಯ ಬಳಿ ವಲಸಿಗರಿಗಾಗಿ ಮೊಹಮ್ಮದ್​​ ಶಮಿ ಆಹಾರ ವಿತರಣಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಕಾರ್ಮಿಕರಿಗೆ, ನಿರಾಶ್ರಿತರಿಗೆ, ಬಡವರಿಗೆ ಬೇಕಾದ ಅಗತ್ಯದ ವಸ್ತುಗಳನ್ನು ವಿತರಣೆ ಮಾಡುತ್ತಿದ್ದಾರೆ.

  • As #IndiaFightsCorona, @MdShami11 comes forward to help people trying to reach home by distributing food packets & masks on National Highway No. 24 in Uttar Pradesh. He has also set up food distribution centres near his house in Sahaspur.

    We are in this together🙌🏾 pic.twitter.com/gpti1pqtHH

    — BCCI (@BCCI) June 2, 2020 " class="align-text-top noRightClick twitterSection" data=" ">

ಆಹಾರ ಪ್ಯಾಕೇಟ್​ಗಳು ಮತ್ತು ಮಾಸ್ಕ್​ ನೀಡುವ ಮೂಲಕ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅಲ್ಲದೆ ಜನರನ್ನು ಮನೆ ತಲುಪಿಸಲು ಕೂಡ ಶಮಿ ಸಹಾಯ ಮಾಡುತ್ತಿದ್ದಾರೆ. ಶಮಿಯ ಈ ಮಾನವೀಯತೆ ಕೆಲಸವನ್ನು ಬಿಸಿಸಿಐ ತನ್ನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ. ಬಿಸಿಸಿಐ ಹಂಚಿಕೊಂಡಿರುವ ಟ್ವೀಟ್​​ನಲ್ಲಿ 42 ಸೆಕೆಂಡ್​ಗಳ ವಿಡಿಯೋ ಇದೆ.

ಅಲ್ಲದೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರೂ ಇದೇ ರೀತಿ ಸೇವೆ ಮಾಡುತ್ತಿದ್ದಾರೆ. ಆಹಾರ ಪ್ಯಾಕೇಟ್​​​ಗಳನ್ನು ಸಂಕಷ್ಟದಲ್ಲಿರುವವರಿಗೆ ವಿತರಿಸುತ್ತಿದ್ದಾರೆ. ದೇಣಿಗೆ ನೀಡುವಂತೆ ಅವರ ಅನುಯಾಯಿಗಳಿಗೆ ಮನವಿ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.