ಮುಂಬೈ: ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಸಿಎಸ್ಕೆ ತಂಡದ ನಾಯಕ ಎಂಎಸ್ ಧೋನಿ ಅವರ ಹೆಸರಿನಲ್ಲಿ ಹೊಸ ಹಾಡೊಂದನ್ನು ಸಿದ್ದಪಡಿಸುತ್ತಿದ್ದು, ಅದರ ಒಂದು ತುಣುಕನ್ನು ಹಂಚಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟರ್ನಲ್ಲಿ ಈ ವಿಚಾರವನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಚಾಂಪಿಯನ್ ಡಿಜಿ ಬ್ರಾವೋ, ಮುಂದಿನ ಹಾಡು, ಹಿಸ್ ಬ್ರದರ್, ಹಿಸ್ ಬ್ರದರ್, ಫ್ರಮ್ ಅನದರ್ ಮದರ್" ಧೋನಿಗಾಗಿ ಸಿದ್ದಪಡಿಸಿದ್ದಾರೆಂದು ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಂಡಿದೆ.
-
Champion @DJBravo47's next song is for 'his brudah, his brudah from anodah muddah' - @msdhoni No.7! 😍🦁💛 #AnbuDenLions #WhistlePodu pic.twitter.com/4075ewbJti
— Chennai Super Kings (@ChennaiIPL) April 20, 2020 " class="align-text-top noRightClick twitterSection" data="
">Champion @DJBravo47's next song is for 'his brudah, his brudah from anodah muddah' - @msdhoni No.7! 😍🦁💛 #AnbuDenLions #WhistlePodu pic.twitter.com/4075ewbJti
— Chennai Super Kings (@ChennaiIPL) April 20, 2020Champion @DJBravo47's next song is for 'his brudah, his brudah from anodah muddah' - @msdhoni No.7! 😍🦁💛 #AnbuDenLions #WhistlePodu pic.twitter.com/4075ewbJti
— Chennai Super Kings (@ChennaiIPL) April 20, 2020
" ಸಹೋದರನಾದ ಎಂಎಸ್ ಧೋನಿಗಾಗಿ ಹೊಸ ಹಾಡೊಂದನ್ನು ಸಿದ್ದಪಡಿಸುತ್ತಿದ್ದು, ಅದರ ಸ್ಯಾಂಪಲ್ ಹೀಗಿದೆ "ಎಂದು ಹಾಡಿನ ಕೆಲವು ಸಾಲುಗಳನ್ನು ಹೇಳಿದ್ದಾರೆ.
ಬ್ರಾವೋ ಹಾಗೂ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಟೀಮ್ ಮೇಟ್ಗಳಾಗಿದ್ದಾರೆ. ಇಬ್ಬರು ಆಟಗಾರರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಬ್ರಾವೋ ಭಾರತ ತಂಡದ ಮಾಜಿ ನಾಯಕನನ್ನು ಸದಾ ಗೌರವದಿಂದ ಕಾಣುತ್ತಾರೆ.
ಬ್ರಾವೋ 2011ರಿಂದ ಸಿಎಸ್ಕೆ ತಂಡಲ್ಲಿದ್ದಾರೆ. ಅವರು ಸಿಎಸ್ಕೆ ಪರ 104 ಪಂದ್ಯಗಳನ್ನಾಡಿದ್ದು 121 ವಿಕೆಟ್ ಪಡೆದಿದ್ದಾರೆ. ವಿಂಡೀಸ್ ಆಲ್ರೌಂಡರ್ ಎರಡು ಬಾರಿ(2014-2015) ಪರ್ಪಲ್ ಕ್ಯಾಪ್ ಪಡೆದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಧೋನಿ ನಾಯಕತ್ವದಲ್ಲಿ 2010,2011 ಹಾಗೂ 2018ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇನ್ನು 5 ಬಾರಿ ರನ್ನರ್ ಅಪ್ ಆಗಿದೆ.