ETV Bharat / sports

11ನೇ ಓವರ್​ನಲ್ಲೇ ಸಿರಾಜ್​ ಬದಲು ಅಶ್ವಿನ್​ಗೆ ಚೆಂಡು ನೀಡಿದ್ದೇಕೆ? ಬುಮ್ರಾ ಕೊಟ್ಟ ವಿವರಣೆ ಹೀಗಿದೆ!

author img

By

Published : Dec 26, 2020, 7:12 PM IST

ಪಿಚ್​ನಲ್ಲಿ ತೇವಾಂಶವಿದ್ದಿದ್ದರಿಂದ ಅಶ್ವಿನ್​ ಹೆಚ್ಚು ತಿರುವುಗಳನ್ನು ಪಡೆದರು ಎಂದು ಬುಮ್ರಾ ಹೇಳಿದ್ದಾರೆ. ಅಶ್ವಿನ್ ಈ ಪಂದ್ಯದಲ್ಲಿ ಮ್ಯಾಥ್ಯೂ ವೇಡ್​, ಸ್ಟಿವ್ ಸ್ಮಿತ್ ಮತ್ತು ಟಿಮ್ ಪೇನ್​ ವಿಕೆಟ್​ ಪಡೆದರು. ​

ಬಾಕ್ಸಿಂಗ್ ಡೇ ಟೆಸ್ಟ್​
ರವಿಚಂದ್ರನ್ ಅಶ್ವಿನ್​

ಮೆಲ್ಬೋರ್ನ್​: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್​ನಲ್ಲಿ ವೇಗಿ ಮೊಹಮ್ಮದ್​ ಸಿರಾಜ್​ಗಿಂತಲೂ ಮೊದಲೂ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​​ರನ್ನು ಏಕೆ ಕಣಕ್ಕಿಳಿಸಲಾಯಿತು ಎನ್ನುವುದನ್ನು ವೇಗಿ ಬುಮ್ರಾ ಬಹಿರಂಗಗೊಳಿಸಿದ್ದಾರೆ.

ಮೊದಲ ಸ್ಪೆಲ್​ನಲ್ಲಿ ಬುಮ್ರಾ ಮತ್ತು ಉಮೇಶ್​ ಯಾದವ್​ ತಲಾ 5 ಓವರ್​ ಎಸೆದಿದ್ದರು. ಆದರೆ 11ನೇ ಓವರ್​ನಲ್ಲೇ ರಹಾನೆ, ಅಶ್ವಿನ್​ ಕೈಗೆ ಚೆಂಡನ್ನು ನೀಡಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಮ್ರಾ, ಪಿಚ್​ನಲ್ಲಿ ತೇವಾಂಶ ಇದ್ದಿದ್ದರಿಂದ ಅಶ್ವಿನ್​ರನ್ನು ಬೇಗ ಬೌಲಿಂಗ್​ ಮಾಡಲು ಅವಕಾಶ ಕೊಡಲಾಯಿತು ಎಂದು ತಿಳಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ

"ನಾವು ಬೆಳಗ್ಗೆ ಬೌಲಿಂಗ್ ಮಾಡುವಾಗ ಪಿಚ್​ನಲ್ಲಿ​ ಸ್ವಲ್ಪ ತೇವಾಂಶವಿತ್ತು. ನೀವು ನೋಡಿದಂತೆ ಅಶ್ವಿನ್ ಮತ್ತು ಜಡ್ಡು (ರವೀಂದ್ರ ಜಡೇಜಾ) ಪಿಚ್​ನಲ್ಲಿ ಸ್ವಲ್ಪ ಸ್ಪಿನ್ ಮಾಡಿದ್ದರು. ನಾವು ತೇವಾಂಶವನ್ನು ಹೆಚ್ಚು ಬಳಸಿಕೊಳ್ಳಲು ಬಯಸಿದ್ದರಿಂದ ಆರಂಭದಲ್ಲೇ ಸ್ಪಿನ್ನರ್‌ಗಳನ್ನು ಕರೆತರುವ ತಂತ್ರ ಅನುಸರಿಸಿದೆವು. ಜೊತೆಗೆ ಅವರು ಉತ್ತಮ ಬೌನ್ಸ್ ಪಡೆಯುತ್ತಿದ್ದರು" ಎಂದು ಮೊದಲ ದಿನದ ಆಟದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬುಮ್ರಾ ತಿಳಿಸಿದ್ದಾರೆ.

2020ರಲ್ಲಿ ಕೊಹ್ಲಿಯನ್ನೇ ಹಿಂದಿಕ್ಕಿ ಗರಿಷ್ಠ ವೇತನ ಪಡೆದ ಸ್ಟಾರ್​ ಕ್ರಿಕೆಟಿಗ

ತೇವಾಂಶವಿದ್ದಿದ್ದರಿಂದ ಅಶ್ವಿನ್​ ಹೆಚ್ಚು ತಿರುವುಗಳನ್ನು ಪಡೆದರು ಎಂದು ಬುಮ್ರಾ ತಿಳಿಸಿದ್ದಾರೆ. ಅಶ್ವಿನ್ ಈ ಪಂದ್ಯದಲ್ಲಿ ಮ್ಯಾಥ್ಯೂ ವೇಡ್​, ಸ್ಟಿವ್ ಸ್ಮಿತ್ ಮತ್ತು ಟಿಮ್ ಪೇನ್​ ವಿಕೆಟ್​ ಪಡೆದರು. ​

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 72.3 ಓವರ್​ಗಳಲ್ಲಿ 195ಕ್ಕೆ ಆಲೌಟ್​ ಆಯಿತು. ಲಾಬುಶೇನ್​ 48 ರನ್​ ಗಳಿಸಿ ಗರಿಷ್ಠ ಸ್ಕೋರರ್​ ಆದರು. ಇತ್ತ ಭಾರತದ ಪರ ಬುಮ್ರಾ 3, ಅಶ್ವಿನ್ 3, ಸಿರಾಜ್ 2 ಹಾಗೂ ಜಡೇಜಾ 1 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಭಾರತ ಕೂಡ ಮಯಾಂಕ್ ಅಗರ್​ವಾಲ್(0) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ಆದರೆ ಶುಬ್ಮನ್​ ಗಿಲ್​​​ ಅಜೇಯ 28 ಹಾಗೂ ಪೂಜಾರ ಅಜೇಯ 9 ರನ್​ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.