ETV Bharat / sports

ಕೋವಿಡ್​ 19 ಪ್ರೋಟೋಕಾಲ್​ಗಳ ಬಗ್ಗೆ ರೈನಾಗೆ ತಿಳಿದಿರಲಿಲ್ವಂತೆ!

ಮಂಗಳವಾರ ಬೆಳಗ್ಗೆ ಸುಮಾರು 3 ಗಂಟೆಯ ಸಮಯದಲ್ಲಿ ಹಮದೇವಿ ಮತ್ತು ಸಹರ್​ ಠಾಣೆಯ ಪೊಲೀಸರು ಜಂಟಿಯಾಗಿ ಡ್ರಾಗನ್​ಫ್ಲೈ ಪಬ್​ ಮೇಲೆ ದಾಳಿ ಮಾಡಿ, ಕೋವಿಡ್​ 19 ಪ್ರೋಟೋಕಾಲ್​ಗಳನ್ನು ಉಲ್ಲಂಘಿಸಿದ್ದಕ್ಕೆ ರೈನಾ ಸೇರಿದಂತೆ 34 ಮಂದಿಯನ್ನು ಬಂಧಿಸಿದ್ದರು.

ಸುರೇಶ್ ರೈನಾ ಬಂಧನ
ಸುರೇಶ್ ರೈನಾ ಬಂಧನ
author img

By

Published : Dec 22, 2020, 5:30 PM IST

ಮುಂಬೈ: ಮಹಾರಾಷ್ಟ್ರದಲ್ಲಿ ರಾತ್ರಿವೇಳೆ ನಿಷೇಧಾಜ್ಞೆಯಿದ್ದರೂ ಪ್ರೋಟೋಕಾಲ್​ ಉಲ್ಲಂಘಿಸಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಮಾಜಿ ಕ್ರಿಕೆಟಿಗನಿಗೆ ಸ್ಥಳೀಯ ಸಮಯ ಮತ್ತು ಪ್ರೋಟೋಕಾಲ್​ಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಬೆಳಗ್ಗೆ ಸುಮಾರು 3 ಗಂಟೆಯ ಸಮಯದಲ್ಲಿ ಹಮದೇವಿ ಮತ್ತು ಸಹರ್​ ಠಾಣೆಯ ಪೊಲೀಸರು ಜಂಟಿಯಾಗಿ ಡ್ರಾಗನ್​ಫ್ಲೈ ಪಬ್​ ಮೇಲೆ ದಾಳಿ ಮಾಡಿ, ಕೋವಿಡ್​ 19 ಪ್ರೋಟೋಕಾಲ್​ಗಳನ್ನು ಉಲ್ಲಂಘಿಸಿದ್ದಕ್ಕೆ ರೈನಾ ಸೇರಿದಂತೆ 34 ಮಂದಿಯನ್ನು ಬಂಧಿಸಿದ್ದರು.

" ಸುರೇಶ್​ ರೈನಾ ಶೂಟಿಂಗ್​ಗಾಗಿ ಮುಂಬೈಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸ್ನೇಹಿತರೊಬ್ಬರು ತ್ವರಿತ ಡಿನ್ನರ್​ಗೆ ಆಹ್ವಾನ ನೀಡಿದ್ದರಿಂದ ಅಲ್ಲಿ ಡಿನ್ನರ್​ ಮುಗಿಸಿ ತಕ್ಷಣ ದೆಹಲಿಗೆ ಮರಳುವವರಿದ್ದರು ಎಂದು ರೈನಾ ಅವರ ಮ್ಯಾನೇಜ್​ಮೆಂಟ್​ ಹೇಳಿಕೆ ನೀಡಿದೆ.

ಸುರೇಶ್ ರೈನಾ
ಸುರೇಶ್ ರೈನಾ

ಇದನ್ನು ಓದಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಬಂಧನ

ಅಲ್ಲದೇ ರೈನಾರಿಗೆ ಸ್ಥಳೀಯ ಪ್ರೋಟೋಕಾಲ್​ ಬಗ್ಗೆ ಮಾಹಿತಿ ಇರಲಿಲ್ಲ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದಾಗ ನಿಯಮಗಳನ್ನು ಅನುಸರಿಸಿದ್ದಾರೆ. ಅಲ್ಲದೇ ಇದೊಂದು ಉದ್ದೇಶ ಪೂರ್ವಕವಲ್ಲದ ಮತ್ತು ದುರದೃಷ್ಟ ಘಟನೆ ಎಂದು ಅವರು ವಿಶಾದ ವ್ಯಕ್ತಪಡಿಸಿದ್ದಾರೆ ಎಂದು ಮ್ಯಾನೇಜ್ಮೆಂಟ್​​​ ತಿಳಿಸಿದೆ.

ಭಾರತದ ಮಾಜಿ ಕ್ರಿಕೆಟಿಗ ಯಾವಾಗಲೂ ಆಡಳಿತ ಮಂಡಳಿಗಳು ನಿಗದಿಪಡಿಸಿದ ನಿಯಮಗಳು ಮತ್ತು ಕಾನೂನುಗಳನ್ನು ಅತ್ಯುನ್ನತವಾಗಿ ಗೌರವ ಹೊಂದಿರುತ್ತಾರೆ. ಇಂತಹ ಘಟನೆ ಭವಿಷ್ಯದಲ್ಲಿಯೂ ಎಂದು ಮರುಕಳಿಸದಂತೆ ಗಮನ ಹರಿಸುತ್ತಾರೆಂದು ರೈನಾ ಮ್ಯಾನೇಜ್​ಮೆಂಟ್​ ಕಂಪನಿ ತಿಳಿಸಿದೆ.

ಸುರೇಶ್ ರೈನಾ
ಸುರೇಶ್ ರೈನಾ

ರೈನಾರನ್ನು ಹೊರತುಪಡಿಸಿ, ಗಾಯಕ ಗುರು ರಾಂಧವ, ಹೃತಿಕ್ ರೋಷನ್​ ಪತ್ನಿ ಸುಸಾನ್ ರೋಷನ್ ಖಾನ್​ ಕೂಡ ಬಂಧನವಾಗಿದ್ದರು. ಸದ್ಯ ಈ ಮೂವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಆದರೆ, ಮತ್ತೊಬ್ಬ ಪ್ರಸಿದ್ಧ ಗಾಯಕ ಪಬ್​ನ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರಲ್ಲದೆ ಕ್ಲಬ್​ನ ಸಿಬ್ಬಂದಿ ಸೇರಿದಂತೆ 34 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.