ETV Bharat / sports

ದುಲೀಪ್​, ದೇವಧರ್​, ಹಜಾರೆ ಟ್ರೋಫಿ ಈ ವರ್ಷ ರದ್ದುಗೊಳಿಸಿ: ಬಿಸಿಸಿಐಗೆ  ವಾಸಿಮ್​ ಜಾಫರ್​ ಸಲಹೆ

author img

By

Published : Jun 16, 2020, 9:29 AM IST

ದೇಶೀಯ ಕ್ರಿಕೆಟ್​ ಋತುವನ್ನ ಆಗಸ್ಟ್​ನಲ್ಲಿ ಆರಂಭಿಸುವ ನಿರೀಕ್ಷೆಯಿತ್ತು. ಆದರೆ, ಕೊರೊನಾ ವೈರಸ್​ ದಿನದಿನಕ್ಕೆ ಹೆಚ್ಚಾಗುತ್ತದೆ. ಕ್ರಿಕೆಟ್​ ಚಟುವಟಿಕೆಗಳನ್ನು ಪುನಾರಂಭಿಸಲು ಬಿಸಿಸಿಐ ಕಾದು ನೋಡುವ ನೀತಿ ಅಳವಡಿಸಿಕೊಂಡಿದೆ.

Wasim Jaffer  Wasim Jaffer wants BCCI to scrap Hazare, Duleep and Deodhar Trophy this season
ವಾಸಿಮ್​ ಜಾಫರ್​ ಐಪಿಎಲ್​

ಮುಂಬೈ: ಕೊರೊನಾ ವೈರಸ್​ ದೇಶದೆಲ್ಲೆಡೆ ದಿನದಿಂದ ದಿನಕ್ಕೆ ಕೊರೊನಾ ವೈರಸ್‌ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ವಿಜಯ್‌ ಹಜಾರೆ, ದುಲೀಪ್‌ ಮತ್ತು ದೇವಧರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಗಳನ್ನು ರದ್ದು ಪಡಿಸಿ, ಆ ಸಮಯದಲ್ಲಿ ಪೂರ್ಣ ಪ್ರಮಾಣದ ರಣಜಿ ಮತ್ತು ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಮೆಂಟ್​ಗಳನ್ನು ನಡೆಸಬೇಕು ಎಂದು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಾಸಿಮ್ ಜಾಫರ್‌ ಹೇಳಿದ್ದಾರೆ.

ಮುಂಬೈ ಲೆಜೆಂಡ್​ ಪ್ರಕಾರ ಹೀಗೆ ಮಾಡುವುದರಿಂದ ಟೂರ್ನಮೆಂಟ್​ಗಳ ನಡುವೆ ಸಾಕಷ್ಟು ಸಮಾಯವಕಾಶ ದೊರೆಯುತ್ತಿದೆ. ಇದರಿಂದ ಆಟಗಾರರಿಗೂ ವಿಶ್ರಾಂತಿ ಸಿಗುತ್ತದೆ ಎಂಬುದು ಜಾಫರ್​ ಅಭಿಪ್ರಾಯವಾಗಿದೆ.

Wasim Jaffer
ವಾಸಿಮ್​ ಜಾಫರ್​

ದೇಶೀಯ ಕ್ರಿಕೆಟ್​ ಋತುವನ್ನ ಆಗಸ್ಟ್​ನಲ್ಲಿ ಆರಂಭಿಸುವ ನಿರೀಕ್ಷೆಯಿತ್ತು. ಆದರೆ, ಕೊರೊನಾ ವೈರಸ್​ ದಿನದಿನಕ್ಕೆ ಹೆಚ್ಚಾಗುತ್ತದೆ. ಕ್ರಿಕೆಟ್​ ಚಟುವಟಿಕೆಗಳನ್ನು ಪುನಾರಂಭಿಸಲು ಬಿಸಿಸಿಐ ಕಾದು ನೋಡುವ ನೀತಿಯನ್ನು ಅಳವಡಿಸಿಕೊಂಡಿದೆ.

Wasim Jaffer
ವಾಸಿಮ್​ ಜಾಫರ್​

"ಕ್ರಿಕೆಟ್‌ ಯಾವತ್ತಾದರೂ ಆರಂಭಗೊಳ್ಳಲಿ ಮೊದಲು ಐಪಿಎಲ್​ ಟೂರ್ನಿ ಆಯೋಜನೆಗೆ ಬಿಸಿಸಿಐ ಮೊದಲ ಆದ್ಯತೆ ನೀಡಬೇಕು. ಐಪಿಎಲ್‌ ಟೂರ್ನಿಯಿಂದಲೇ ಭಾರತದ ಕ್ರಿಕೆಟ್‌ ಋತುವನ್ನು ಬಿಸಿಸಿಐ ಆರಂಭಿಸಬಹುದು. ಐಪಿಎಲ್​ ಮುಗಿದ ಬಳಿಕ ಬಿಸಿಸಿಐ ದೇಶಿ ಕ್ರಿಕೆಟ್‌ ಕೂಟಗಳನ್ನು ಆರಂಭಿಸಬೇಕು" ಎಂದು ಸುದ್ದಿ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ಜಾಫರ್​ ತಿಳಿಸಿದ್ದಾರೆ

Wasim Jaffer
ವಾಸಿಂ ಜಾಫರ್​

ಐಪಿಎಲ್​ ಮುಗಿದ ತಕ್ಷಣ ಬಿಸಿಸಿಐ ಇರಾನಿ ಕಪ್​ನಿಂದ ತನ್ನ ದೇಶಿ ಋತುವನ್ನ ಆರಂಭಿಸಬೇಕು. ಏಕೆಂದರೆ ಇದೇ ಮೊದಲ ಬಾರಿ ರಣಜಿ ಚಾಂಪಿಯನ್ ಆಗಿರುವುದರಿಂದ ಸೌರಾಷ್ಟ್ರ ತಂಡ ಆ ಟೂರ್ನಿ ಆಡಲು ಅರ್ಹವಾಗಿದೆ ಎಂದಿದ್ದಾರೆ.

ನಂತರ ನಾವು ರಣಜಿ ಟ್ರೋಫಿ ಆಯೋಜಿಸಬಹುದು. ಮುಂದಿನ ವರ್ಷದ ಐಪಿಎಲ್​ ಹರಾಜು ಗಮನದಲ್ಲಿಟ್ಟುಕೊಂಡು ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಮೆಂಟ್​ಗೆ ಅವಕಾಶ ನೀಡಬೇಕು.

ಹಾಗೆಯೇ ಆಟಗಾರರಿಗೆ ವಿಶ್ರಾಂತಿ ಒದಗಿಸಿಕೊಡಲು ದುಲೀಪ್‌ ಟ್ರೋಫಿ, ದೇವಧರ್‌ ಟ್ರೋಫಿ ಕೂಟಗಳನ್ನು ಕೈಬಿಡುವುದು ಒಳ್ಳೆಯದು ಎಂದು ಜಾಫ‌ರ್‌ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.