ETV Bharat / sports

ಚೊಚ್ಚಲ ಪಂದ್ಯದಲ್ಲಿ ಸುಂದರ್ ದಾಖಲೆ: 3ನೇ ದಿನದಂತ್ಯಕ್ಕೆ ಆಸೀಸ್​ಗೆ 54 ರನ್ ಮುನ್ನಡೆ - ಗಬ್ಬಾ ಟೆಸ್ಟ್ ಪಂದ್ಯ

ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 6 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ಡೇವಿಡ್ ವಾರ್ನರ್ 22, ಮಾರ್ಕಸ್ ಹ್ಯಾರಿಸ್ 1 ರನ್​ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Washington Sundar
ಚೊಚ್ಚಲ ಪಂದ್ಯದಲ್ಲಿ ಸುಂದರ್ ದಾಖಲೆ
author img

By

Published : Jan 17, 2021, 1:41 PM IST

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಆಲ್​ರೌಂಡ್ ಆಟಗಾರ ವಾಷಿಂಗ್ಟನ್ ಸುಂದರ್ ಚೊಚ್ಚಲ ಪಂದ್ಯದಲ್ಲೆ ದಾಖಲೆ ಬರೆದರು.

ಮೊದಲ ಪಂದ್ಯದಲ್ಲೆ 3 ವಿಕೆಟ್ ಕಬಳಿಸಿದ ಸುಂದರ್ ಬ್ಯಾಟಿಂಗ್​ನಲ್ಲೂ ಮಿಂಚಿದ್ರು. 144 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿದ್ರು. ಈ ಮೂಲಕ ಪದಾರ್ಪಣೆ ಮಾಡಿರುವ ಮೊದಲ ಇನ್ನಿಂಗ್ಸ್​​ನಲ್ಲೆ 3 ವಿಕೆಟ್ ಪಡೆದಿದ್ದಲ್ಲದೆ ಅರ್ಧಶತಕ ಸಿಡಿಸಿದ ಎರಡನೇ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಅಂದರೆ, 1947ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ದತ್ತು ಪಾಡ್ಕರ್ ಅವರು 3 ವಿಕೆಟ್ ಪಡೆದು ಅರ್ಧಶತಕ ದಾಖಲಿಸಿದ್ದರು.

ಅಲ್ಲದೇ, ಆಸ್ಟ್ರೇಲಿಯಾದಲ್ಲಿ ಪದಾರ್ಪಣೆ ಮಾಡಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ವೈಯಕ್ತಿಕವಾಗಿ ಹೆಚ್ಚು ರನ್ (62) ಗಳಿಸಿದ ಆಟಗಾರ ಎಂಬ ಕೀರ್ತಿಗೂ ಸುಂದರ್ ಪಾತ್ರರಾದರು.

ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ 336ಕ್ಕೆ ಸರ್ವಪತನ ಕಂಡಿದ್ದು 33 ರನ್​ಗಳ ಅಲ್ಪ ಹಿನ್ನಡೆ ಹೊಂದಿದೆ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 6 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ಡೇವಿಡ್ ವಾರ್ನರ್ 22, ಮಾರ್ಕಸ್ ಹ್ಯಾರಿಸ್ 1 ರನ್​ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.