ETV Bharat / sports

110 ವರ್ಷಗಳ ಹಿಂದಿನ ದಾಖಲೆ ಬ್ರೇಕ್ ಮಾಡಿದ ವಾಷಿಂಗ್ಟನ್ ಸುಂದರ್​ - ವಾಷಿಂಗ್ಟನ್ ಸುಂದರ್ ಲೇಟೆಸ್ಟ್ ನ್ಯೂಸ್

62 ರನ್​ ಸಿಡಿಸಿದ ಯುವ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್​ ಪಾದಾರ್ಪಣೆ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ರನ್​ ಬಾರಿಸಿದ 7ನೇ ಕ್ರಮಾಂಕದ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾದರು.

ಭಾರತ vs ಆಸ್ಟ್ರೇಲಿಯಾ ಟೆಸ್ಟ್​
ಭಾರತ vs ಆಸ್ಟ್ರೇಲಿಯಾ ಟೆಸ್ಟ್​
author img

By

Published : Jan 17, 2021, 5:36 PM IST

ಬ್ರಿಸ್ಬೇನ್​: ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಯಿಸುವ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ವಾಷಿಂಗ್ಟನ್ ಸುಂದರ್​ 110 ವರ್ಷಗಳ ಹಿಂದಿನ ವಿಶೇಷ ದಾಖಲೆಯೊಂದನ್ನು ಬ್ರೇಕ್​ ಮಾಡಿದ್ದಾರೆ.

ಬಾರ್ಡರ್ ಗವಾಸ್ಕರ್ ಟೆಸ್ಟ್​ನ ಕೊನೆಯ ಪಂದ್ಯದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ವಾಷಿಂಗ್ಟನ್ ಸುಂದರ್​, 8ನೇ ವಿಕೆಟ್ ಜೊತೆಯಾಟದಲ್ಲಿ ಶಾರ್ದುಲ್ ಠಾಕೂರ್​ರೊಂದಿಗೆ 123 ರನ್​ ಸೇರಿಸಿದ್ದರು. ಇದು ಗಬ್ಬಾ ಮೈದಾನದಲ್ಲಿ 30 ವರ್ಷಗಳ ನಂತರ ದಾಖಲಾದ ಗರಿಷ್ಠ ಜೊತೆಯಾಟವಾಗಿತ್ತು. ಈ ಹಿಂದಿನ ದಾಖಲೆಯೂ ಕೂಡ ಭಾರತೀಯರ ಹೆಸರಿನಲ್ಲೇ ಇದ್ದು, 1991 ರಲ್ಲಿ ಭಾರತದ ಕಪಿಲ್ ದೇವ್​ ಮತ್ತು ಮನೋಜ್ ಪ್ರಭಾಕರ್​ 58 ರನ್​ ಸೇರಿಸಿದ್ದರು.

ಇನ್ನು ಈ ಪಂದ್ಯದಲ್ಲಿ 62 ರನ್​ ಸಿಡಿಸಿದ ಯುವ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್​ ಪಾದಾರ್ಪಣೆ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ರನ್​ ಬಾರಿಸಿದ 7ನೇ ಕ್ರಮಾಂಕದ ಬ್ಯಾಟ್ಸ್​ಮನ್​ ಎಂಬ ದಾಖಲೆಗೆ ಪಾತ್ರರಾದರು. ಈ ಹಿಂದೆ 1911ರಲ್ಲಿ ಇಂಗ್ಲೆಂಡ್​ನ ಫ್ರಾಂಕ್​ ಫೋಸ್ಟರ್​ 56 ರನ್​ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಆಸ್ಟ್ರೇಲಿಯಾದಲ್ಲಿ ಪಾದಾರ್ಪಣೆ ಪಂದ್ಯದಲ್ಲಿ ಗರಿಷ್ಠ ರನ್​ಗಳಿಸಿದ 7ನೇ ಕ್ರಮಾಂಕದ ಬ್ಯಾಟ್ಸ್​ಮನ್​ಗಳು

  • ವಾಷಿಂಗ್ಟನ್​ ಸುಂದರ್​ 62
  • ಫ್ರಾಂಕ್​ ಫೋಸ್ಟರ್​ (ಇಂಗ್ಲೆಂಡ್​) 56
  • ಫ್ರಾನ್ಸಿಸ್​ ಫಾರ್ಡ್​ (ಇಂಗ್ಲೆಂಡ್​) 48
  • ಯಂಗ್ ಜಾಕ್ ಹಾರ್ನೆ (ಇಂಗ್ಲೆಂಡ್​) 43
  • ರಾಯ್​ ಸ್ಟೆಟ್​ಮ್ಯಾನ್ (ಇಂಗ್ಲೆಂಡ್) 41
  • ಜೆಫ್​ ಡ್ಯೂಜನ್​ (ವೆಸ್ಟ್ಇಂಡೀಸ್​) 41

ETV Bharat Logo

Copyright © 2025 Ushodaya Enterprises Pvt. Ltd., All Rights Reserved.